Select Your Language

Notifications

webdunia
webdunia
webdunia
webdunia

ಸಿಎಂ ವಿರುದ್ಧ ಸರಿತಾ ನಾಯರ್ ಹೊಸ ಆರೋಪ

ಸಿಎಂ ವಿರುದ್ಧ ಸರಿತಾ ನಾಯರ್ ಹೊಸ ಆರೋಪ
ಕೊಚ್ಚಿ , ಶುಕ್ರವಾರ, 29 ಜನವರಿ 2016 (08:24 IST)
ಸೋಲಾರ್‌ ಹಗರಣದ ಪ್ರಮುಖ ಆರೋಪಿ ಸರಿತಾ ನಾಯರ್‌ ಮುಖ್ಯಮಂತ್ರಿ ಉಮ್ಮನ್‌ ಚಾಂಡಿ ವಿರುದ್ಧ ಮತ್ತೊಂದು ಆರೋಪ ಮಾಡಿದ್ದಾರೆ.
ತಾನು 2013ರಲ್ಲಿ ಜೈಲುವಾಸವನ್ನು ಅನುಭವಿಸುತ್ತಿದ್ದಾಗ  ತಮ್ಮ ತಾಯಿಗೆ ದೂರವಾಣಿ ಕರೆ ಮಾಡಿದ್ದ ಸಿಎಂ ಹಗರಣದ ಮಾಹಿತಿ ಬಹಿರಂಗ ಪಡಿಸದಂತೆ ಒತ್ತಡ ಹೇರಿದ್ದರು ಎಂದು ಸರಿತಾ ಗಂಭೀರವಾಗಿ ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ ಹಗರಣದಲ್ಲಿ ಅನೇಕ ಪ್ರಭಾವಿ ವ್ಯಕ್ತಿಗಳು ಶಾಮೀಲಾಗಿದ್ದಾರೆ. ಇದನ್ನು ಸಾಬೀತು ಪಡಿಸಲು ಪ್ರಬಲ ಸಾಕ್ಷ್ಯಗಳು ತಮ್ಮ ಬಳಿ ಇವೆ ಎಂದು ಅವರು ಘೋಷಿಸಿದ್ದಾರೆ. 
 
ಮುಖ್ಯಮಂತ್ರಿ ಉಮನ್ ಚಾಂಡಿ ಮತ್ತು ಇಂಧನ ಸಚಿವರಿಗೆ ಲಂಚ ನೀಡಿರುವುದಾಗಿ ಕಳೆದೆರಡು ದಿನಗಳ ಹಿಂದೆ ಕೋರ್ಟ್ ವಿಚಾರಣೆ ಸಂದರ್ಭದಲ್ಲಿ ಅವರು ಹೇಳಿದ್ದರು. ಚಾಂಡಿಯವರಿಗೆ ಅವರಿಗೆ ಅವರ ಆಪ್ತ ಸಹಾಯಕರ ಮೂಲಕ ರೂ.1.90 ಕೋಟಿ ಮತ್ತು ಮೊಹಮ್ಮದ್ ಅವರಿಗೆ 40 ಲಕ್ಷ ಲಂಚ ನೀಡಿರುವುದಾಗಿ ಅವರು ಬಾಂಬ್ ಸಿಡಿಸಿದ್ದರು.
 
ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ತ್ರಿಶೂರ್ ವಿಜಿಲೆನ್ಸ್ ಕೋರ್ಟ್, ಉಮನ್ ಚಾಂಡಿ ಹಾಗೂ ಇಂದನ ಸಚಿವರ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಸೂಚನೆ ನೀಡಿದೆ. 
 
ಹಗರಣದಲ್ಲಿ ಸಿಎಂ ಹೆಸರು ಕೇಳಿ ಬಂದಿದ್ದರಿಂದ ವಿರೋಧ ಪಕ್ಷಗಳು ಅವರ ರಾಜೀನಾಮೆಗೆ ಆಗ್ರಹಿಸಿವೆ. 

Share this Story:

Follow Webdunia kannada