Select Your Language

Notifications

webdunia
webdunia
webdunia
webdunia

ನಾನು ಹಿಂದೂ ಭಯೋತ್ಪಾದನೆ ಎಂದು ಯಾವತ್ತೂ ಹೇಳಿಲ್ಲ!

ನಾನು ಹಿಂದೂ ಭಯೋತ್ಪಾದನೆ ಎಂದು ಯಾವತ್ತೂ ಹೇಳಿಲ್ಲ!
ಪುಣೆ , ಭಾನುವಾರ, 2 ಆಗಸ್ಟ್ 2015 (12:20 IST)
ಸಂಸತ್‌ ಕಲಾಪದ ಸಂದರ್ಭದಲ್ಲಿ ಕಾಂಗ್ರೆಸ್‌ ವರಿಷ್ಠ ಸುಶೀಲ್‌ ಕುಮಾರ್‌ ಶಿಂಧೆ, ಹಿಂದೂ ಆತಂಕವಾದ ಎಂಬ ಪದ ಬಳಕೆ ಮಾಡಿದ್ದಾರೆ ಎಂಬ  ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರ ಆರೋಪವನ್ನು ಶಿಂಧೆ ಅಲ್ಲಗಳೆದಿದ್ದಾರೆ. 

ಸಿಂಗ್ ಹೇರಿರುವ ಆರೋಪವನ್ನು ತಳ್ಳಿ ಹಾಕಿರುವ ಮಾಜಿ ಕೇಂದ್ರ ಸಚಿವರು ಯುಪಿಎ ಅಧಿಕಾರಾವಧಿಯಲ್ಲಿ ತಾವು 'ಹಿಂದೂ ಭಯೋತ್ಪಾದನೆ' ಎಂಬ ಶಬ್ಧವನ್ನು ಬಳಸಿಲ್ಲ ಎಂದು ವಾದಿಸಿದ್ದಾರೆ. 
 
ಪುಣೆಯಲ್ಲಿ ನಡೆದ ಕಾರ್ಯಕ್ರಮವೊಂದರ ಮಧ್ಯೆ ವರದಿಗಾರರ  ಜತೆ ಮಾತನಾಡುತ್ತಿದ್ದ ಸಿಂಧೆ, "ನಾನು ಸದನದಲ್ಲಿ ಯಾವತ್ತೂ ಹಿಂದೂ ಆತಂಕವಾದಿ ಎಂಬ ಪದವನ್ನು ಬಳಸಿಯೇ ಇಲ್ಲ. ಈ ಪದಗಳನ್ನು ಜೈಪುರ್‌ನಲ್ಲಿ ಕಾಂಗ್ರೆಸ್ ಅಧಿವೇಶನದ ಸಂದರ್ಭದಲ್ಲಿ ಒಮ್ಮೆ ಬಳಸಿದ್ದೆ. ಅದನ್ನು ತಕ್ಷಣ ಹಿಂದಕ್ಕೆ ಪಡೆದಿದ್ದೆ", ಎಂದು ಸ್ಪಷ್ಟ ಪಡಿಸಿದ್ದಾರೆ. 
 
ಆತಂಕವಾದಿಗಳನ್ನು ಮಟ್ಟ ಹಾಕುವಲ್ಲಿ ವಿಫಲವಾಗಿರುವ ಕೇಂದ್ರ ಜನರ ಗಮನವನ್ನು ಬೇರೆ ಕಡೆ ಸೆಳೆಯುವ ಪ್ರಯತ್ನವನ್ನು ನಡೆಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. 
 
ಹಿಂದೂ ಭಯೋತ್ಪಾದನೆ’ ಎಂಬ ಪರಿಕಲ್ಪನೆಯನ್ನು ಹಿಂದಿನ ಸರ್ಕಾರ ದಾಳವಾಗಿ ಬಳಸಿದ್ದರಿಂದ ಭಯೋತ್ಪಾದನೆ ತಡೆ ಹಾಗೂ ಅದರ ವಿರುದ್ಧದ ಹೋರಾಟವನ್ನು ದಿಕ್ಕುತಪ್ಪಿಸಿ ದುರ್ಬಲಗೊಳಿಸಿದೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಅವರು ಸದನದಲ್ಲಿ ಹೇಳಿದ್ದರು.

Share this Story:

Follow Webdunia kannada