ಮೋದಿ ವಿದೇಶಕ್ಕೆ ಹೋಗಲ್ವಾ, ರಾಹುಲ್ ಹೋದ್ರೆ ತಪ್ಪೇನು ಎಂದ ಮಲ್ಲಿಕಾರ್ಜುನ ಖರ್ಗೆ: ಯಾಕೆ ಹೋಗ್ತಾರೆ ಎಂದ ನೆಟ್ಟಿಗರು

Krishnaveni K
ಸೋಮವಾರ, 15 ಡಿಸೆಂಬರ್ 2025 (12:07 IST)
ನವದೆಹಲಿ: ಮೋದಿ ಸಂಸತ್ ಇರುವಾಗ ವಿದೇಶಗಳಿಗೆ ಹೋಗ್ತಾರೆ, ರಾಹುಲ್ ಗಾಂಧಿ ಹೋಗಬಾರದಾ ಎಂದು ಪ್ರಶ್ನಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ನೆಟ್ಟಿಗರ ಪ್ರತಿಕ್ರಿಯೆ ನೋಡಿ.

ನಿನ್ನೆ ಮತಗಳ್ಳತನದ ವಿರುದ್ಧ ಕಾಂಗ್ರೆಸ್ ಬೃಹತ್ ಸಮಾವೇಶ ನಡೆದಿತ್ತು. ಈ ವೇಳೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ‘ಸಂಸತ್ ಕಲಾಪ ನಡೆಯುವಾಗಲೇ ಮೋದಿ ಅರ್ಧಕ್ಕೇ ಬಿಟ್ಟು ವಿದೇಶಗಳಿಗೆ ಹೋಗ್ತಾರೆ. ನಮ್ಮ ಪ್ರಶ್ನೆಗಳಿಗೆ ಉತ್ತರ ಕೊಡದೇ ಹೋಗ್ತಾರೆ. ಹಾಗಿದ್ದಾಗ ರಾಹುಲ್ ಗಾಂಧಿ ಹೋದರೆ ಏನು ತಪ್ಪು’ ಎಂದು ಪ್ರಶ್ನೆ ಮಾಡಿದ್ದರು.

ಇದಕ್ಕೆ ಮೊದಲು ಪ್ರಿಯಾಂಕ ಗಾಂಧಿ ಕೂಡಾ ಇದೇ ಮಾತು ಹೇಳಿದ್ದರು. ಮೋದಿ ಯಾವತ್ತೂ ವಿದೇಶ ಪ್ರವಾಸಗಳಲ್ಲೇ ಇರುತ್ತಾರೆ. ಹಾಗಿರುವಾಗ ರಾಹುಲ್ ಗಾಂಧಿ ಹೋದರೆ ಏನು ಸಮಸ್ಯೆ ಎಂದಿದ್ದರು. ಈಗ ಮಲ್ಲಿಕಾರ್ಜುನ ಖರ್ಗೆ ಕೂಡಾ ಅದೇ ಮಾತು ಹೇಳಿದ್ದಾರೆ.

ಇದಕ್ಕೆ ನೆಟ್ಟಿಗರು ಮಲ್ಲಿಕಾರ್ಜುನ ಖರ್ಗೆಯವರನ್ನು ಟ್ರೋಲ್ ಮಾಡಿದ್ದಾರೆ. ಮೋದಿ ದೇಶದ ಪ್ರಧಾನಿ. ಅವರು ಇನ್ನೊಂದು ದೇಶದ ಆಹ್ವಾನದ ಮೇರೆಗೆ ಇಲ್ಲವೇ ಶೃಂಗಸಭೆಗಳಿಗೆ ಅಧಿಕೃತ ಆಹ್ವಾನ ಪಡೆದು ಭಾರತದ ಪ್ರತಿನಿಧಿಯಾಗಿ ಹೋಗುತ್ತಾರೆ. ರಾಹುಲ್ ಗಾಂಧಿ ಪ್ರಮುಖ ಸಮಯಗಳಲ್ಲೇ ವಿದೇಶಗಳಿಗೆ ಯಾಕೆ ಹೋಗ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ಕೆಲವರು ಸರಿಯಾಗಿ ಹೇಳಿದ್ದೀರಿ ಖರ್ಗೆ ಜೀ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜಾತಿ ಸರ್ಟಿಫಿಕೇಟ್ ಪಡೆಯುವುದು ಹೇಗೆ, ಯಾವ ದಾಖಲೆಗಳು ಬೇಕು ಇಲ್ಲಿದೆ ಮಾಹಿತಿ

ಡಿಕೆ ಶಿವಕುಮಾರ್, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ರಹಸ್ಯ ಮೀಟಿಂಗ್: ನಡೆದಿದ್ದೇನು

ರಾಹುಲ್ ಗಾಂಧಿ ವಿದೇಶ ಪ್ರವಾಸ ಇಂದಿನಿಂದ ಶುರು: ಕರ್ನಾಟಕದ ಕೈ ನಾಯಕರಿಗೆ ಟೆನ್ಷನ್

ರಸ್ತೆ ಮಾಡಿದ್ರೆ ಬಡವರು ಉದ್ದಾರ ಆಗ್ತಾರಾ: ಗೃಹಸಚಿವ ಡಾ ಜಿ ಪರಮೇಶ್ವರ್ ಉವಾಚ

ಪತ್ನಿ ಪಕ್ಕದಲ್ಲೇ ಶಾಮನೂರು ಶಿವಶಂಕರಪ್ಪ ಮಣ್ಣಿಗೆ: ಅಂತ್ಯಕ್ರಿಯೆ ಡೀಟೈಲ್ಸ್ ಇಲ್ಲಿದೆ

ಮುಂದಿನ ಸುದ್ದಿ
Show comments