Select Your Language

Notifications

webdunia
webdunia
webdunia
webdunia

ಹೊರಬಿತ್ತು ನೇತಾಜಿ ಸುಭಾಷ್ ಚಂದ್ರ ಭೋಸ್ ಸಾವಿನ ರಹಸ್ಯ

ಹೊರಬಿತ್ತು ನೇತಾಜಿ ಸುಭಾಷ್ ಚಂದ್ರ ಭೋಸ್ ಸಾವಿನ ರಹಸ್ಯ
ನವದೆಹಲಿ , ಗುರುವಾರ, 1 ಸೆಪ್ಟಂಬರ್ 2016 (20:27 IST)
ನೇತಾಜಿ ಸುಭಾಷ್ ಚಂದ್ರ ಭೋಸ್ ಸಾವಿನ ರಹಸ್ಯ ಸಂಗತಿಗಳು ಕೋಟ್ಯಾಂತರ ಭಾರತೀಯರನ್ನು ಕಾಡುತ್ತಿವೆ. ಇದೀಗ ಜಪಾನ್ ಸರಕಾರ ನಡೆಸಿದ ತನಿಖೆಯಿಂದ ಭೋಸ್ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿರುವುದು ಖಚಿತವಾಗಿದೆ. 
ಜಪಾನ್ ಸರಕಾರದ ತನಿಖೆಯ ಪ್ರಕಾರ ಭೋಸ್ ತೈಪೆಯಲ್ಲಿ 1945 ಆಗಸ್ಟ್ 18 ರಂದು ನಡೆದ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಲ್ಲಿ ದಾಖಲಿಸಿದೆ.
 
ನೇತಾಜಿ ಕುಟುಂಬದ ಸದಸ್ಯರು ಮತ್ತು ಜರ್ಮನಿಯಲ್ಲಿ ನೆಲೆಸಿರುವ ಪುತ್ರಿ ಅಮಿತಾ ಪಿಫಾಫ್‌ ಟೋಕಿಯೋ ಕೂಡಲೇ ಸಂಪೂರ್ಣ ವಿವರಣೆ ನೀಡುವಂತೆ ಕೋರಿದ್ದಾರೆ.
 
ಜಪಾನ್ ಸರಕಾರ ನೇತಾಜಿ ವಿಮಾನ ಅಪಘಾತ ಸಂಭವಿಸಿದ ಕುರಿತಂತೆ ಜಪಾನ್ ಭಾಷೆಯಲ್ಲಿ ಬರೆದ ಏಳು ಪುಟಗಳು ಮತ್ತು ಆಂಗ್ಲ ಭಾಷೆಯಲ್ಲಿ ಬರೆದ 10 ಪುಟಗಳಲ್ಲಿ ಸಂಪೂರ್ಣ ವರದಿಯನ್ನು ಭಾರತ ಸರಕಾರಕ್ಕೆ ನೀಡಲು ನಿರ್ಧರಿಸಿದೆ.
 
ಜಪಾನ್ ಸರಕಾರದ ವರದಿಯ ಪ್ರಕಾರ, 1945ರ ಆಗಸ್ಟ್ 18 ರಂದು ತೈಪೆಯಲ್ಲಿ ವಿಮಾನ ಅಪಘಾತ ಸಂಭವಿಸಿದ್ದು ಆಸ್ಪತ್ರೆಗೆ ದಾಖಲಾಗಿದ್ದರು. ಅಂದೇ ಸಂಜೆ ನೇತಾಜಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು ಎಂದು ತಿಳಿಸಿದೆ. 
 
ನೇತಾಜಿ ಪ್ರಯಾಣಿಸುತ್ತಿದ್ದ ವಿಮಾನ ನೆಲಕ್ಕೆ ಅಪ್ಪಳಿಸಿದೊಡನೆ ನೇತಾಜಿ ಗಂಭೀರವಾಗಿ ಗಾಯಗೊಂಡಿದ್ದರು. ಮಧ್ಯಾಹ್ನ ಸುಮಾರು 3 ಗಂಟೆಗೆ ತೈಪೆಯ ಸೇನಾ ಆಸ್ಪತ್ರೆಯಾದ ನಾನ್‌ಮೊನ್‌ನಲ್ಲಿ ದಾಖಲಾಗಿದ್ದರು. ಅಂದು ಸಂಜೆ ಏಳು ಗಂಟೆಗೆ ನೇತಾಜಿ ನಿಧನ ಹೊಂದಿದರು  
 
ತನಿಖೆಯಲ್ಲಿ ಹೊರಬಂದ ಮತ್ತೊಂದು ಅಂಶವೆಂದರೆ 1945ರ ಆಗಸ್ಟ್ 22 ರಂದು ತೈಪೆಯ ನಗರಸಭೆಯ ಸ್ಮಶಾನದಲ್ಲಿ ನೇತಾಜಿಯವರ ಅಂತ್ಯಸಂಸ್ಕಾರ ನಡೆಸಲಾಯಿತು ಎಂದು ಜಪಾನ್ ಸರಕಾರದ ತನಿಖಾ ಸಮಿತಿ ವರದಿಯಲ್ಲಿ ಉಲ್ಲೇಖಿಸಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ನಾಳೆ ವಿಯಟ್ನಾಂ, ಚೀನಾ ದೇಶಗಳಿಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ