Select Your Language

Notifications

webdunia
webdunia
webdunia
webdunia

ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದ ನೇತಾಜಿ ಸೋದರಳಿಯ ಚಂದ್ರಕುಮಾರ್ ಭೋಸ್

ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದ ನೇತಾಜಿ ಸೋದರಳಿಯ ಚಂದ್ರಕುಮಾರ್ ಭೋಸ್
ಕೋಲ್ಕತಾ , ಸೋಮವಾರ, 25 ಜನವರಿ 2016 (19:15 IST)
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸಮ್ಮುಖದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಸೋದರಳಿಯ ಚಂದ್ರಕುಮಾರ್ ಭೋಸ್ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪಾಲ್ಗೊಂಡಿದ್ದ ಸಭೆಯಲ್ಲಿ ಚಂದ್ರಕುಮಾರ್ ಭೋಸ್ ಕೂಡಾ ಉಪಸ್ಥಿತರಿದ್ದರು. ಅಮಿತ್ ಶಾ ಭಾಷಣಕ್ಕೆ ಮಾರುಹೋದ ಭೋಸ್ ಬಿಜೆಪಿ ಸೇರ್ಪಡೆಗೆ ನಿರ್ಧರಿಸಿದ್ದಾರೆ ಎಂದು ಬಿಜೆಪಿ ವಕ್ತಾರರು ತಿಳಿಸಿದ್ದಾರೆ.
 
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರಕಾರ ನೇತಾಜಿಯವರಿಗೆ ಸಂಬಂಧಿಸಿದ 100 ದಾಖಲೆಗಳನ್ನು ಬಿಡುಗಡೆಗೊಳಿಸಿದ ಅಂಗವಾಗಿ ಆಯೋಜಿಸಿದ ಸಭೆಯಲ್ಲಿ ಭೋಸ್ ಪಾಲ್ಗೊಂಡಿದ್ದರು. 
 
ಪ್ರಧಾನಿ ಮೋದಿ ನೇತಾಜಿಯವರ ದಾಖಲೆಗಳನ್ನು ಬಿಡುಗಡೆಗೊಳಿಸಿರುವುದನ್ನು ಸ್ವಾಗತಿಸುತ್ತೇವೆ. ಇದೊಂದು ಪಾರದರ್ಶಕ ದಿನವಾಗಿದೆ ಎಂದು ಚಂದ್ರಕುಮಾರ್ ಭೋಸ್ ಸಂತಸ ವ್ಯಕ್ತಪಡಿಸಿದ್ದಾರೆ. 

Share this Story:

Follow Webdunia kannada