ನಾಪತ್ತೆಯಾಗಿದ್ದ ನಾಲ್ವರು ಭಾರತೀಯರು ಸೇರಿದಂತೆ 22 ಮಂದಿ ಪ್ರಯಾಣಿಕರಿದ್ದ ನೇಪಾಳದ ವಿಮಾನ ಪತ್ತೆಯಾಗಿದ್ದು, ಸ್ಥಳಕ್ಕೆ ಭದ್ರತಾ ಸಿಬ್ಬಂದಿ ದೌಡಾಯಿಸಿದೆ.
ಮಸ್ತಾಂಗ್ ಜಿಲ್ಲೆಯ ಮನ್ ಪಟಿ ಹಿಮಾಲ್ ಲ್ಯಾಮ್ಚೆ ನದಿಯ ಬಳಿ ವಿಮಾನ ಪತ್ತೆಯಾಗಿದ್ದು, ವಿಮಾನದಲ್ಲಿ ಇದ್ದವರ ಸ್ಥಿತಿ ಏನಾಗಿದೆ ಎಂಬುದು ತಿಳಿದು ಬಂದಿಲ್ಲ.
ನಾಪತ್ತೆಯಾಗಿದ್ದ ವಿಮಾನ ಮುಸ್ತಾಂಗ್ ಜಿಲ್ಲೆಯಲ್ಲಿ ಪತ್ತೆಯಾಗಿದೆ ಎಂಬ ಮಾಹಿತಿ ತಿಳಿದು ಬಂದಿದ್ದು, ವಿಮಾನದ ಕ್ಯಾಪ್ಟನ್ ಅವರ ಮೊಬೈಲ್ ನ ಸಿಗ್ನಲ್ ಆಧರಿಸಿ ಪತ್ತೆ ಹಚ್ಚಲಾಗಿದೆ. ದೂರವಾಣಿ ಕೇಂದ್ರ ಮೊಬೈಲ್ ಸಂಖ್ಯೆಗಳನ್ನು ಟ್ರೇಸ್ ಮಾಡಿದ್ದು,
ದುರಂತ ನಡೆದ ಸ್ಥಳಕ್ಕೆ 10 ಹೆಲಿಕಾಫ್ಟರ್ ನಲ್ಲಿ ನೇಪಾಳ ಸೇನೆ ದೌಡಾಯಿಸಿದ್ದು, ಮತ್ತೊಂದೆಡೆ ಕಾಲ್ನಡಿಯಲ್ಲಿ ಭದ್ರತಾ ಸಿಬ್ಬಂದಿ ಕೂಡ ಸ್ಥಳಕ್ಕೆ ತೆರಳುತ್ತಿದೆ ಎಂದು ಸೇನೆ ತಿಳಿಸಿದೆ.
ಖಾಸಗಿ ವಿಮಾನ ತಾರಾ ಏರ್ 9 ಎನ್ ಇಎಟಿ ವಿಮಾನ ಪ್ರವಾಸಿ ತಾಣವಾದ ಪೊಖ್ರಾಣ ಎಂಬ ಪ್ರದೇಶದಿಂದ ಭಾನುವಾರ ಬೆಳಿಗ್ಗೆ ನಾಪತ್ತೆಯಾಗಿತ್ತು ಕಠ್ಮಂಡುವಿನಿಂದ 200 ಕಿ.ಮೀ. ದೂರದ ಪೊಖ್ರಾಣಾದಿಂದ 20 ಕಿ.ಮೀ.ದೂರದ ಜಾಮ್ಸನ್ ಎಂಬಲ್ಲಿ ಕೊನೆಯ ಬಾರಿ ವಿಮಾನ ಕಂಡು ಬಂದಿತ್ತು.
ಮುಸ್ತಾಂಗ್ ಜಿಲ್ಲೆಯ ಆಕಾಶದಲ್ಲಿ ವಿಮಾನ ಹಾರಾಡುತ್ತಿದ್ದುದು ಕಂಡು ಬಂದಿತ್ತು. ವಿಮಾನದಲ್ಲಿ ನಾಲ್ವರು ಭಾರತೀಯರು, ಮೂವರು ಜಪಾನಿಯರು ಉಳಿದವರು ನೇಪಾಳಿ ನಾಗರಿಕರು ಎಂದು ತಿಳಿದು ಬಂದಿದೆ.