Select Your Language

Notifications

webdunia
webdunia
webdunia
webdunia

ಕೇಜ್ರಿವಾಲ್ ಯಾರೆಂದು ನನಗೆ ಗೊತ್ತೇ ಇಲ್ಲ: ಹಾರ್ದಿಕ್ ಪಟೇಲ್

ಕೇಜ್ರಿವಾಲ್ ಯಾರೆಂದು ನನಗೆ ಗೊತ್ತೇ ಇಲ್ಲ: ಹಾರ್ದಿಕ್ ಪಟೇಲ್
ನವದೆಹಲಿ , ಮಂಗಳವಾರ, 1 ಸೆಪ್ಟಂಬರ್ 2015 (16:33 IST)
ಪಟೇಲ್ ಸಮುದಾಯವನ್ನು  ಇತರ ಹಿಂದುಳಿದ ವರ್ಗಕ್ಕೆ (ಒಬಿಸಿ) ಸೇರಿಸಿ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಕೊಡಬೇಕು ಎಂದು ಆಗ್ರಹಿಸಿ ಗುಜರಾತ್‌ನಲ್ಲಿ ಹೋರಾಟ ಕೈಗೊಂಡು ದೇಶಾದ್ಯಂತ ಗಮನ ಸೆಳೆದಿರುವ 22 ವರ್ಷದ ಯುವಕ ಹಾರ್ದಿಕ್ ಪಟೇಲ್ 'ತಾನು ಕೇಜ್ರಿವಾಲ್ ಬೆಂಬಲಿಗನಲ್ಲ' ಎಂದು ಹೇಳಿದ್ದಾರೆ. ಜತೆಗೆ 'ನನಗೆ ಅವರು ಯಾರೆಂದು ಗೊತ್ತೇ ಇಲ್ಲ', ಎನ್ನುವುದರ ಮೂಲಕ ಅಚ್ಚರಿ ಮೂಡಿಸಿದ್ದಾರೆ. 
 
ಗುಜ್ಜರ್ ಮತ್ತು ಜಾಟರು ಸೇರಿದಂತೆ ಮೀಸಲಾತಿಗೆ ಒತ್ತಾಯಿಸಿ ಹೋರಾಟ ನಡೆಸುತ್ತಿರುವ ನಾಯಕರೊಂದಿಗೆ ಮಾತುಕತೆ ನಡೆಸಲು ಹಾರ್ದಿಕ್ ದೆಹಲಿಗೆ ಬಂದಿರುವ ಹಾರ್ದಿಕ್, ಮಾಧ್ಯಮದವರೊಂದಿಗೆ ಮಾತನಾಡುತ್ತ 'ರಾಷ್ಟ್ರದಲ್ಲಿ ಬದಲಾವಣೆ ತರಲು ಕೇಜ್ರಿವಾಲ್ ರೂಪಿಸಿದ ನೀಲ ನಕ್ಷೆ ಉತ್ತಮವಾಗಿತ್ತು.ಆದರೆ ಅದನ್ನು ಕಾರ್ಯರೂಪಕ್ಕೆ ತರಲು ಅವರು ವಿಫಲರಾದರು', ಎಂದು ಅಭಿಪ್ರಾಯ ಪಟ್ಟಿದ್ದಾರೆ.
 
'ತಮ್ಮದು ಪಟೇಲ್ ಸಮುದಾಯಕ್ಕೆ ನ್ಯಾಯ ಬಯಸಿ ನಡೆದಿರುವ ಹೋರಾಟ. ಇದಕ್ಕೆ ಯಾವ ಪಕ್ಷದ ಸಹಾಯವೂ ನಮಗೆ ಬೇಕಿಲ್ಲ', ಎಂದು ಹಾರ್ದಿಕ್  ಸ್ಪಷ್ಟಪಡಿಸಿದ್ದಾರೆ. 
 
,ಈ ಹೋರಾಟವನ್ನು ದೇಶದ ಇತರೆಡೆಗಳಲ್ಲಿ ಸಹ ಕೊಂಡೊಯ್ಯುತ್ತೇವೆ. ಪರಷ್ಪರ ಸಹಕಾರರೊಂದಿಗೆ ಪ್ರತಿಯೊಬ್ಬರಿಗೂ, ಸಮಾಜಕ್ಕೂ, ರಾಜ್ಯಕ್ಕೂ ಕೂಡ ಮೀಸಲಾತಿ ಸಮಸ್ಯೆಯನ್ನು ಮನದಟ್ಟು ಮಾಡಿಸಬೇಕಿದೆ. ಮೀಸಲಾತಿ ನಮ್ಮ ದೇಶ 35 ವರ್ಷಗಳಷ್ಟು ಹಿಂದೆ ಇರುವಂತೆ ಮಾಡಿದೆ,' ಎಂದು ಪಟಿದಾರ್ ಆನಾಮತ್ ಆಂದೋಲನದ ನಾಯಕ ಹಾರ್ದಿಕ್ ಹೇಳಿದ್ದಾರೆ
 
ನಿಖರ ಭಾಷಣ, ಹಾವಭಾವದ ಕಾರಣಕ್ಕೋ ಏನೋ ಕೆಲವರು ಹಾರ್ದಿಕ್ ಅವರನ್ನು  ಮೋದಿಯವರಿಗೆ ಹೋಲಿಸುತ್ತಾರೆ. ‘ಹೊಸ ಮೋದಿ’, ‘ಗುಜರಾತ್‌ನ ಕೇಜ್ರಿವಾಲ್’ ಎಂದೆಲ್ಲ ಅವರನ್ನು ಕರೆಯುತ್ತಿದ್ದಾರೆ.

Share this Story:

Follow Webdunia kannada