Select Your Language

Notifications

webdunia
webdunia
webdunia
webdunia

ಸುಭಾಷ್ ಚಂದ್ರಬೋಸ್ ಗಲ್ಲಿಗೇರಲು ನೆಹರು ಕಾರಣ: ಸ್ವಾಮಿ ಆರೋಪ

ಸುಭಾಷ್ ಚಂದ್ರಬೋಸ್ ಗಲ್ಲಿಗೇರಲು ನೆಹರು ಕಾರಣ: ಸ್ವಾಮಿ ಆರೋಪ
ನವದೆಹಲಿ , ಶನಿವಾರ, 24 ಜನವರಿ 2015 (18:00 IST)
ನೇತಾಜಿ ಸುಭಾಷ್‌ಚಂದ್ರಬೋಸ್ ಅವರು ವಿಮಾನ ಅಪಘಾತದಲ್ಲಿ ಸಾವನ್ನಪ್ಪಿಲ್ಲ. ನೆಹರು ಅವರ ಅನುಮತಿಯ ಮೇರೆಗೆ ಅವರಿಗೆ ರಶಿಯಾದಲ್ಲಿ ಮರಣ ದಂಡನೆ ನೀಡಲಾಯಿತು. ನೇತಾಜಿ ಸಾವಿನಲ್ಲಿ ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ಅವರ ಪಾತ್ರವಿದೆ ಎಂದು ಬಿಜೆಪಿ ನಾಯಕ ಸುಬ್ರಹ್ಮಣ್ಯ ಸ್ವಾಮಿ ಗಂಭೀರ ಆರೋಪವನ್ನು ಹೊರಿಸಿದ್ದಾರೆ. 
 
ಬೋಸ್ ಅವರ 118ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು ಐಎನ್ಎ ನಾಯಕ 1945 ರ ವಿಮಾನ ದುರಂತದಲ್ಲಿ ಮೃತ ಪಟ್ಟಿದ್ದಾರೆ ಎಂದು ಹೇಳುವುದು ಸುಳ್ಳು. ಯುದ್ಧ ಅಪರಾಧಿಯಾಗಿ ತಪ್ಪಿಸಿಕೊಳ್ಳುವ ಯತ್ನದಲ್ಲಿ ಅವರು ವ್ಯವಸ್ಥಿತ ಮರಣದಂಡನೆಗೆ ಒಳಗಾದರು ಎಂದು ಹೇಳಿದರು. 
 
ನೇತಾಜಿ ಸೋವಿಯತ್ ಯೂನಿಯನ್‌ ತಲುಪಿದಾಗ ಜೋಸೆಫ್ ಸ್ಟಾಲಿನ್ ಅವರನ್ನು ಬಂಧಿಸಿದರು. ಅವರನ್ನು ಏನು ಮಾಡಬೇಕು ಎಂದು ರಶಿಯಾದ ಸರ್ವಾಧಿಕಾರಿ ಸ್ಟಾಲಿನ್ ಬಾರತದ ಅಂದಿನ ಪ್ರಧಾನಿ ನೆಹರು ಅವರಿಗೆ ಪತ್ರ ಬರೆದರು. ನೆಹರು ನೀಡಿದ ಉತ್ತರದಂತೆ ನೇತಾಜಿಗೆ ಮರಣದಂಡನೆ ನೀಡಲಾಯಿತು ಎಂದು ಸ್ವಾಮಿ ಹೇಳಿದ್ದಾರೆ. 
 
ನೆಹರುರವರು ಸ್ಟಾಲಿನ್‌ಗೆ ಬರೆದ ಪತ್ರವನ್ನು ಟೈಪ್ ಮಾಡಿದ ಬೆರಳಚ್ಚುಗಾರ ಮೀರತ್‌ನವನಾಗಿದ್ದು ಅವರು ಹಲವಾರು ಪಿತೂರಿ ಸಿದ್ಧಾಂತಗಳ ಲೇಖಕರು ಎಂದಿರುವ ಸ್ವಾಮಿ, ಇದಕ್ಕೆ ಸಂಬಂಧಿಸಿದಂತೆ ನಾನು ಸಹ ಸಂಶೋಧನೆ ಮಾಡಿದ್ದೇನೆ ಎಂದು ಹೇಳಿದ್ದಾರೆ.

Share this Story:

Follow Webdunia kannada