Webdunia - Bharat's app for daily news and videos

Install App

ದೇಶದಲ್ಲಿ ರೇಪ್ ಹೆಚ್ಚಳಕ್ಕೆ ನೆಹರು, ಗಾಂಧಿ ಕುಟುಂಬವೇ ಕಾರಣ: ಬಿಜೆಪಿ ಶಾಸಕ

Webdunia
ಮಂಗಳವಾರ, 24 ಮೇ 2016 (18:32 IST)
ದೆಹಲಿಯ ಜವಾಹರ ಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯದ ಆವರಣದಲ್ಲಿ ಸೆಕ್ಸ್‌ನಲ್ಲಿ ತೊಡಗುವುದಲ್ಲದೇ ನಗ್ನವಾಗಿ ತಿರುಗುತ್ತಾರೆ ಎಂದು ಹೇಳಿಕೆ ನೀಡಿ ವಿವಾದಕ್ಕೊಳಗಾಗಿದ್ದ ಬಿಜೆಪಿ ಶಾಸಕ ಜ್ಞಾನದೇವ್ ಆಹುಜಾ, ಇದೀಗ ದೇಶದಲ್ಲಿ ರೇಪ್ ಹೆಚ್ಚಳಕ್ಕೆ ನೆಹರು ಗಾಂಧಿ ಕುಟುಂಬವೇ ಕಾರಣವಾಗಿದೆ ಎಂದು ಹೇಳಿಕೆ ನೀಡಿ ಮತ್ತೊಮ್ಮೆ ವಿವಾದಕ್ಕೊಳಗಾಗಿದ್ದಾರೆ. 
                                       

 
ರಾಜಸ್ಥಾನದ ಅಳ್ವಾರ್‌ನ ರಾಮಗಢ್ ಕ್ಷೇತ್ರದ ಶಾಸಕರಾದ ಜ್ಞಾನದೇವ್ ಆಹುಜಾ, ದೇಶದಲ್ಲಿನ ಎಲ್ಲಾ ಸಾಮಾಜಿಕ ಸಮಸ್ಯೆಗಳಿಗೆ ನೆಹರು ಕುಟುಂಬವೇ ಕಾರಣವಾಗಿದೆ. ಇರಾಕ್‌ನಲ್ಲಿ ಸರ್ವಾಧಿಕಾರಿ ಸದ್ದಾಂ ಹುಸೇನ್ ಪ್ರತಿಮೆಗಳನ್ನು ನಾಶಪಡಿಸಿದಂತೆ ಮಹಾತ್ಮಾ ಗಾಂಧಿ ನಂತರದ ಎಲ್ಲಾ ಪ್ರತಿಮೆಗಳನ್ನು ತಕ್ಷಣವೇ ನಾಶಪಡಿಸಬೇಕು ಎಂದು ಕರೆ ನೀಡಿದ್ದಾರೆ.     
 
ಗಮನಾರ್ಹ ವಿಷಯವೆಂದರೆ, ಶಾಸಕ ಆಹುಜಾ ಪ್ರಧಾನಿ ಮೋದಿಯವರನ್ನು ದೈವಿ ಪುರುಷರೆಂದು ಬಣ್ಣಿಸಿದ್ದು, ಭಾರತವನ್ನು ಕಾಡುತ್ತಿರುವ ಭೂತಗಳಿಂದ ಭಾರತವನ್ನು ಮುಕ್ತಗೊಳಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 
 
ಏತನ್ಮಧ್ಯೆ, ರಾಜಸ್ಥಾನದ ಕಾಂಗ್ರೆಸ್ ಘಟಕ ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಕ್ರಿಯೆ ನೀಡಿದ್ದು, ಶಾಸಕ ಆಹುಜಾ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವುದರಿಂದ ಅವರನ್ನು ಹುಚ್ಚಾಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಬೇಕು ಎಂದು ಕಿಡಿಕಾರಿದೆ.
 
ಕೆಲ ತಿಂಗಳುಗಳ ಹಿಂದೆ ಶಾಸಕ ಆಹುಜಾ, ದೆಹಲಿಯಲ್ಲಿ ನಡೆಯುತ್ತಿರುವ ಶೇ.50 ಕ್ಕೂ ಹೆಚ್ಚು ರೇಪ್‌ಗಳಿಗೆ, ಲೈಂಗಿಕ ಕಿರುಕುಳಗಳಿಗೆ ಜೆಎನ್‌ಯು ವಿದ್ಯಾರ್ಥಿಗಳು ಕಾರಣರಾಗಿದ್ದಾರೆ ಎಂದು ಆರೋಪಿಸಿ ವಿವಾದಕ್ಕೆ ಗುರಹಿಯಾಗಿದ್ದರು. 
 
ಜೆಎನ್‌ಯು ವಿಶ್ವವಿದ್ಯಾಲಯದಲ್ಲಿ ಪ್ರತಿದಿನ 3000 ಕಾಂಡೋಮ್‌ಗಳು ಮತ್ತು ಗರ್ಭ ನಿರೋಧಕ ಇಂಜೆಕ್ಷನ್‌ಗಳನ್ನು ಬಳಸಲಾಗುತ್ತದೆ. ವಿದ್ಯಾರ್ಥಿಗಳು ನಮ್ಮ ಪುತ್ರಿಯರು ಮತ್ತು ಸಹೋದರಿಯರೊಂದಿಗೆ ಕೆಟ್ಟದಾಗಿ ವರ್ತಿಸುತ್ತಿದ್ದಾರೆ ಎಂದು ಗುಡುಗಿದ್ದರು. 
 
ಸಂಸತ್ ದಾಳಿಯ ರೂವಾರಿ ಉಗ್ರ ಅಫ್ಜಲ್ ಗುರುವನ್ನು ಜೆಎನ್‌ಯು ವಿಶ್ವವಿದ್ಯಾಲಯದಲ್ಲಿ ಹೊಗಳಲಾಯಿತು. ಇವರು ವಿದ್ಯಾರ್ಥಿಗಳಲ್ಲ ಬಂಡುಕೋರರು ಎಂದು ಬಿಜೆಪಿ ಶಾಸಕ ಜ್ಞಾನದೇವ್ ಆಹುಜಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ