Select Your Language

Notifications

webdunia
webdunia
webdunia
webdunia

ಮನ್ ಕಿ ಬಾತ್ : ಮಿಸ್ ಕಾಲ್ ಕೊಟ್ಟು ಕೇಳಿದವರು 10 ಲಕ್ಷ ಜನ

ಮನ್ ಕಿ ಬಾತ್ : ಮಿಸ್ ಕಾಲ್ ಕೊಟ್ಟು ಕೇಳಿದವರು 10 ಲಕ್ಷ ಜನ
ನವದೆಹಲಿ , ಶುಕ್ರವಾರ, 26 ಫೆಬ್ರವರಿ 2016 (16:14 IST)
ಪ್ರಧಾನಿ ಮೋದಿಯವರ ಜನಪ್ರಿಯ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್‌ನ್ನು ಮಿಸ್ ಕಾಲ್ ಕೊಟ್ಟು ಮೊಬೈಲ್‌ನಲ್ಲಿ ಕೇಳಿದವರು ಬರೊಬ್ಬರಿ 10 ಲಕ್ಷ ಜನರಂತೆ. ಜನವರಿ 31 ರಂದು ನೀಡಿದ್ದ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿಯವರು ಹೊಸ ನಂಬರ್‌ನ್ನು ಘೋಷಿಸಿದ್ದರು. 
 
8190881908, ಮೊಬೈಲ್ ಸಂಖ್ಯೆ ಭರ್ಜರಿ ಹಿಟ್ ಆಗಿದ್ದು, ಪ್ರಧಾನಿಯವರು ನಡೆಸಿಕೊಡುವ ಮನ್ ಕಿ ಬಾತ್ ಕಾರ್ಯಕ್ರಮದ ಜನಪ್ರಿಯತೆಯನ್ನು ಪ್ರತಿಬಿಂಬಿಸುತ್ತದೆ. 
 
ಜನವರಿ 31 ಮತ್ತು ಫೆಬ್ರವರಿ 23 ರಂದು 31 ಕ್ಕಿಂತ ಹೆಚ್ಚು ಮಿಸ್ ಕಾಲ್‌ಗಳು ಬಂದಿದ್ದು, ಆದರೆ ದೊಡ್ಡ ಕ್ಯೂ ಇದ್ದಿದ್ದರಿಂದ ಮರಳಿ ಕರೆ ಪಡೆಯದಿದ್ದ ಕೆಲವರು  ಎರಡು ಬಾರಿ ಕಾಲ್ ಮಾಡಿದ್ದಾರೆ.  ಕೊನೆಯದಾಗಿ 20 ಲಕ್ಷ ಅನ್ಯ ನಂಬರ್ ಕರೆಗಳು ಬಂದಿದ್ದು ಅವುಗಳಿಗೆಲ್ಲ ಮರಳಿ ಕರೆ ಮಾಡಲಾಯಿತು.
 
9.58 ರಿಟರ್ನ್ ಕಾಲ್‌ಗಳು ಸ್ವೀಕರಿಸಲ್ಪಟ್ಟವು, ಭಾಷಣ ಸುಮಾರು 17-22 ನಿಮಿಷಗಳದಾಗಿತ್ತು.  ಜನವರಿ 31 ರ ಮನ್ ಕಿ ಬಾತ್ 28 ನಿಮಿಷಗಳದಾಗಿತ್ತು.  ಕೆಲವು ರಿಟರ್ನ್ ಕಾಲ್ ಸ್ವೀಕರಿಸಲ್ಪಡಲಿಲ್ಲ, ಬಹುಶಃ ಅಪರಿಚಿತ ನಂಬರ್‌ನಿಂದ ಮಾಡಿದ್ದು ಇದಕ್ಕೆ ಕಾರಣವಾಗಿರಬಹುದು. ಮತ್ತೆ ಕೆಲವು ನಂಬರ್‌ಗಳು ವ್ಯಾಪ್ತಿ ಪ್ರದೇಶದ ಹೊರಗಿದ್ದವು. 
 

Share this Story:

Follow Webdunia kannada