Select Your Language

Notifications

webdunia
webdunia
webdunia
webdunia

ಅಯ್ಯೋ!: ರಾಷ್ಟ್ರಪತಿ ಭವನಕ್ಕೂ ಸೊಳ್ಳೆ ಕಾಟ

ಅಯ್ಯೋ!: ರಾಷ್ಟ್ರಪತಿ ಭವನಕ್ಕೂ ಸೊಳ್ಳೆ ಕಾಟ
ನವದೆಹಲಿ , ಗುರುವಾರ, 27 ಆಗಸ್ಟ್ 2015 (12:29 IST)
ನಮ್ಮ ನಿಮ್ಮ ಮನೆಗಳಲ್ಲಿ ಸೊಳ್ಳೆ ಕಾಟ ಇದ್ದಿದ್ದೇ ಬಿಡಿ.  ಆದರೆ ದೇಶದ ಪ್ರಥಮ ಪ್ರಜೆ ಎನಿಸುವ ರಾಷ್ಟ್ರಪತಿ ಭವನಕ್ಕೂ ಸೊಳ್ಳೆ ಕಾಟ ಎಂದರೆ ನಂಬುತ್ತೀರಾ? ವ್ಯಾಪಕ ಭದ್ರತೆಗಳನ್ನು ನೀಡಲಾಗುವ ಭವನಕ್ಕೆ ಸೊಳ್ಳೆ ಕಾಟ ತಡೆಯಲಾಗುತ್ತಿಲ್ಲವೆಂದರೆ ವಿಪರ್ಯಾಸವೇ ಸರಿ ಬಿಡಿ.
 
ರಾಷ್ಟ್ರಪತಿ ನಿವಾಸಕ್ಕೆ ಅಪಾಯಕಾರಿ ಡೆಂಘೀ ಸೊಳ್ಳೆಗಳ ಸಮಸ್ಯೆ ಎದುರಾಗಿದೆ ಎಂಬ ಸುದ್ದಿ ಕೇಳಿ ಬಂದಿದೆ.
 
ರಾಷ್ಟ್ರಪತಿ ನಿವಾಸದ ಸುತ್ತಲಿನ ಪ್ರದೇಶದಲ್ಲಿ ವಿಶಾಲವಾದ ಆವರಣದಲ್ಲಿ ಮಾರಣಾಂತಿಕ ರೋಗ ಹರಡುವ ಡೆಂಘೀ ಸೊಳ್ಳೆಗಳು ಉತ್ಪತ್ತಿಯಾಗುವ ತಾಣಗಳು ಕಂಡು ಬಂದಿವೆ. ಭವನದ ಸಿಬ್ಬಂದಿಯ ವಸತಿಗೃಹದ ಸಮೀಪವೂ ಸೇರಿದಂತೆ ಬೇರೆಬೇರೆ ಸ್ಥಳಗಳಲ್ಲಿ ಸೊಳ್ಳೆ ಉತ್ಪತ್ತಿಯ ತಾಣಗಳು ಪತ್ತೆಯಾಗಿವೆ. ಸೊಳ್ಳೆ ನಿಯಂತ್ರಣದ ಕ್ರಮಗಳನ್ನು ಕೈಗೊಳ್ಳುವಂತೆ ಬೇರೆ-ಬೇರೆ ಇಲಾಖೆಗಳಿಗೆ ನವದೆಹಲಿ ಮಹಾನಗರ ಪಾಲಿಕೆ ಇದೊಂದೇ ತಿಂಗಳಲ್ಲಿ 80 ಬಾರಿ ನೋಟಿಸ್ ನೀಡಿದೆ.
 
ಜೊತೆಗೆ ಸೊಳ್ಳೆ ನಿಯಂತ್ರಣದ ಕ್ರಮಗಳನ್ನು ಕೈಗೊಳ್ಳಲು ರಾಷ್ಟ್ರಪತಿ ಭವನದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಾಲ್ವರು ಸದಸ್ಯರ ತಂಡವೊಂದನ್ನು ಮಹಾನಗರ ಪಾಲಿಕೆ ರಚಿಸಿದೆ. ಕೂಡಲೇ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು  ಎನ್‌‌ಡಿಎಮ್‌‌ಸಿ ಅಧಿಕಾರಿಗಳು ತಿಳಿಸಿದ್ದಾರೆ. 

Share this Story:

Follow Webdunia kannada