Webdunia - Bharat's app for daily news and videos

Install App

ಎನ್‌ಡಿಎ ಕೂಟಕ್ಕೆ ಅಮ್ಮ?

Webdunia
ಶನಿವಾರ, 4 ಜೂನ್ 2016 (14:27 IST)
ಜಯಲಲಿತಾ ನಾಯಕತ್ವದ ತಮಿಳುನಾಡಿನ ಆಡಳಿತಾರೂಢ ಎಐಡಿಎಂಕೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದಲ್ಲಿ ಸೇರ್ಪಡೆಯಾಗಿ ಕೇಂದ್ರ ಸರ್ಕಾರಕ್ಕೆ ಹೊರಗಿನಿಂದ ಬೆಂಬಲ ನೀಡುವ ಸಾಧ್ಯತೆ ಇದೆ. ಹೀಗಾದಲ್ಲಿ ಎನ್‌ಡಿಎ ಮತ್ತಷ್ಟು ಬಲಗೊಳ್ಳುವುದಂತೂ ಸತ್ಯ. 

ಈ ನಡೆ ಆರಂಭಿಕ ಹಂತದಲ್ಲಿದ್ದು ತಮಿಳುನಾಡಿನ ಪ್ರಮುಖ ಪಕ್ಷದೊಂದಿಗಿನ ಮೈತ್ರಿಯನ್ನು ಬಿಜೆಪಿ ಮೂಲಗಳು ಸಹ ಅಲ್ಲಗಳೆಯುತ್ತಿಲ್ಲ. ಎಐಡಿಎಂಕೆ ಲೋಕಸಭೆಯಲ್ಲಿ 39 ಸಂಸದರನ್ನು ಮತ್ತು ರಾಜ್ಯಸಭೆಯಲ್ಲಿ 12 ಸದಸ್ಯರನ್ನು ಹೊಂದಿದ್ದು ಅವರೊಂದಿಗಿನ ಮೈತ್ರಿ ಜಿಎಸ್‌ಟಿ ಬಿಲ್ ಪಾಸ್ ಮಾಡಲು ಎನ್‌ಡಿಎಗೆ ನೆರವಾಗಬಹುದು. 
 
ಮುಂದಿನ ತಿಂಗಳ ಜಯಲಲಿತಾ ನವದೆಹಲಿಗೆ ಪ್ರಯಾಣ ಬೆಳಸಿ ಪ್ರಧಾನಿ ಮೋದಿಯವರನ್ನು ಭೇಟಿಯಾಗುವ ಸಾಧ್ಯತೆಗಳಿದ್ದು, ಎನ್‌ಡಿಎ ಜತೆಗೆ ತಾವು ಹೊಂದಲು ಇಚ್ಛಿಸುವ ಮೈತ್ರಿಯ ರೂಪದ ಬಗ್ಗೆ  ಸ್ಪಷ್ಟಪಡಿಸಲಿದ್ದಾರೆ. 
 
ಜಯಾ ಮೋದಿ ಸರ್ಕಾರದ ಭಾಗವಾಗುವುದಿಲ್ಲ ಎಂದು ಭಾವಿಸಲಾಗಿದೆ. ಆದರೆ ಈ ಕುರಿತು ತಮಗರಿವಿಲ್ಲವೆಂದು ಎಐಡಿಎಂಕೆ ಮೂಲಗಳು ತಿಳಿಸಿವೆ. ಪಕ್ಷದ ವರಿಷ್ಠೆ ಬಹಿರಂಗ ಪಡಿಸುವವರೆಗೂ ಅದು ಅವರಿಗೂ ಗುಟ್ಟಾಗಿಯೇ ಇರುವ ಸಾಧ್ಯತೆಗಳಿವೆ.  

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನವಂಬರ್ ನಲ್ಲಿ ರಾಜ್ಯ ರಾಜಕೀಯದಲ್ಲಿ ಮಹತ್ವದ ಬದಲಾವಣೆ: ವಿಜಯೇಂದ್ರ ಸ್ಪೋಟಕ ಹೇಳಿಕೆ

ಬೈರತಿ ಬಸವರಾಜು ವಿರುದ್ಧ ಪೊಲೀಸರೇ ಹೆಸರು ಸೇರಿಸಿಕೊಂಡಿದ್ದಾರೆ: ಆರ್ ಅಶೋಕ್

Arecanut price: ಅಡಿಕೆ ಬೆಲೆ ಯಥಾಸ್ಥಿತಿ, ಕೊಬ್ಬರಿ ಬೆಲೆ ಇಳಿಮುಖದತ್ತ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಕೆಮ್ಮಿದಾಗ ಎದೆನೋವಾಗುತ್ತಿದ್ದರೆ ಏನರ್ಥ

ಮುಂದಿನ ಸುದ್ದಿ
Show comments