Select Your Language

Notifications

webdunia
webdunia
webdunia
webdunia

ಸಂಸದರ ವೇತನ ಹೆಚ್ಚಳ: ಸರ್ವಪಕ್ಷಗಳ ಸಭೆ ಕರೆಯಲು ಎನ್‌ಡಿಎ ಸರಕಾರ ಚಿಂತನೆ

ಸಂಸದರ ವೇತನ ಹೆಚ್ಚಳ: ಸರ್ವಪಕ್ಷಗಳ ಸಭೆ ಕರೆಯಲು ಎನ್‌ಡಿಎ ಸರಕಾರ ಚಿಂತನೆ
ನವದೆಹಲಿ , ಗುರುವಾರ, 11 ಫೆಬ್ರವರಿ 2016 (16:15 IST)
ಸಂಸದರ ವೇತನ ಮತ್ತು ತುಟ್ಟಿಭತ್ಯೆಗಳನ್ನು ಸಮಯದಿಂದ ಸಮಯಕ್ಕೆ ಶಿಫಾರಸ್ಸು ಮಾಡುವ ವೇತನ ಆಯೋಗಕ್ಕೆ ಶಾಶ್ವತವಾದ ವ್ಯವಸ್ಥೆ ಮಾಡುವ ಕುರಿತಂತೆ ಎನ್‌ಡಿಎ ಸರಕಾರ ಶೀಘ್ರದಲ್ಲಿ ಸರ್ವಪಕ್ಷಗಳ ಸಭೆ ಕರೆಯುವ ಸಾಧ್ಯತೆಗಳಿವೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ. 
 
ಪ್ರಸ್ತುತ ಸಂಸದರು ತಮ್ಮ ವೇತನ ಹೆಚ್ಚಳವನ್ನು ತಾವೇ ನಿರ್ಧರಿಸುವುದನ್ನು ತಡೆದು ಶಾಶ್ವತವಾದಂತಹ ಆಯೋಗ ರಚನೆಗೆ ಕೇಂದ್ರ ಸರಕಾರ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
 
ಸಂಸದೀಯ ಸಮಿತಿ ಇತರ ತುಟ್ಟಿಭತ್ಯೆಗಳ ಹೆಚ್ಚಳದೊಂದಿಗೆ ಸಂಸದರ ಶೇ.100 ರಷ್ಟು ವೇತನ ಹೆಚ್ಚಳಗೊಳಿಸುವಂತೆ ಇತ್ತೀಚೆಗೆ ಸಂಸತ್ತಿಗೆ ಶಿಫಾರಸ್ಸು ಮಾಡಿದೆ.
 
ರಾಜ್ಯಸಭೆ ಅಥವಾ ಲೋಕಸಭೆ ಸದಸ್ಯರಿಗೆ ಪ್ರಸ್ತುತ 50 ಸಾವಿರ ರೂ.ಗಳ ಮೂಲವೇತನ ಮತ್ತು ಕ್ಷೇತ್ರದ ಮತ್ತು ಕ್ಷೇತ್ರದಲ್ಲಿನ ಕಚೇರಿಗಾಗಿ 45 ಸಾವಿರ ರೂಪಾಯಿಗಳನ್ನು ಹೆಚ್ಚುವರಿಯಾಗಿ ನೀಡಲಾಗುತ್ತಿದೆ.
 
ಹಿರಿಯ ಅಧಿಕಾರಿಗಳಿಗಿಂತಲೂ ತಮ್ಮ ವೇತನ ಕಡಿಮೆಯಾಗಿದೆ ಎಂದು ಹಲವು ಸಂಸದರು ಸಂಸದೀಯ ಸಮಿತಿಗೆ ದೂರು ಸಲ್ಲಿಸಿದ್ದಾರೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

Share this Story:

Follow Webdunia kannada