Select Your Language

Notifications

webdunia
webdunia
webdunia
webdunia

ಕದ್ದು ಬಿಯರ್ ಖರೀದಿಸಲು ಹೋಗಿ ಸಿಕ್ಕಿ ಬಿದ್ದ ಖ್ಯಾತ ನಟಿ ನಯನ ತಾರ

ಕದ್ದು ಬಿಯರ್ ಖರೀದಿಸಲು ಹೋಗಿ ಸಿಕ್ಕಿ ಬಿದ್ದ ಖ್ಯಾತ ನಟಿ ನಯನ ತಾರ
ಚೆನ್ನೈ , ಮಂಗಳವಾರ, 27 ಜನವರಿ 2015 (15:17 IST)
ನಗರದ ಸ್ಥಳೀಯ ಮದ್ಯದಂಗಡಿಯಲ್ಲಿ ಕದ್ದು ಬಿಯರ್ ಖರೀದಿಸಲು ಹೋದ ಖ್ಯಾತ ನಟಿ ನಯನ ತಾರಾ ಸಿಕ್ಕಿಬಿದ್ದು ಇದೀಗ ಪಡ್ಡೆ ಹುಡುಗರ ಹೃದಯಲ್ಲಿ ಕೋಲಾಹಲವೆಬ್ಬಿಸಿದ್ದಾಳೆ.

ಆಕೆ ಬಿಯರ್ ಖರೀದಿಸುತ್ತಿರುವ ವಿಡಿಯೋ ಸಾಮಾಜಿಕ ಅಂತರ್ಜಾಲ ತಾಣದಲ್ಲಿ ಹರಿದಾಡುತ್ತಿದೆ.
 
ವಿಘ್ನೇಶ್ ಶಿವನ್ ಪ್ರೋಡಕ್ಷನ್‌ ಅಡಿಯಲ್ಲಿ ನಿರ್ಮಿಸಲಾಗುತ್ತಿರುವ ನಾನುಂ ರೌಡಿ ದಾನ್ ಎನ್ನುವ ಫಿಲ್ಮ್ ಶೂಟಿಂಗ್‌ನಲ್ಲಿ ಚಿತ್ರನಟಿ ನಯನ ತಾರ ರಸ್ತೆ ಬದಿಯಲ್ಲಿರುವ ಸ್ಥಳೀಯ ಮದ್ಯದಂಗಡಿಗೆ ಹೋಗಿ ಬಿಯರ್ ಖರೀದಿಸುವ ದೃಶ್ಯದ ಚಿತ್ರೀಕರಣವಿತ್ತು.   
 
ನಯನ ತಾರಾ ಮದ್ಯದಂಗಡಿಗೆ ಹೋಗಿ ಮದ್ಯ ತರುವ ದೃಶ್ಯವನ್ನು ಶೂಟಿಂಗ್ ಸ್ಪಾಟ್‌ನಲ್ಲಿದ್ದ ಕೆಲವು ಪಡ್ಡೆ ಹುಡುಗರು ವಿಡಿಯೋ ಮಾಡಿಕೊಂಡು ಆನ್‌ಲೈನ್‌ನಲ್ಲಿ ಹರಿಬಿಟ್ಟಿದ್ದಾರೆ.
 
ಪಾಂಡಿಚೇರಿಯಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಚಿತ್ರದ ನಾಯಕನಾಗಿ ವಿಜಯ್ ಸೇತುಪತಿ ನಟಿಸುತ್ತಿದ್ದಾರೆ ಎಂದು ಚಿತ್ರದ ಮೂಲಗಳು ತಿಳಿಸಿವೆ. 
 
 
 

Share this Story:

Follow Webdunia kannada