Select Your Language

Notifications

webdunia
webdunia
webdunia
webdunia

ಭಾರತ ಮಾತೆಗೆ ಅಪಮಾನವಾಗುವುದನ್ನು ದೇಶ ಸಹಿಸೋಲ್ಲ: ಸ್ಮೃತಿ ಇರಾನಿ

ಭಾರತ ಮಾತೆಗೆ ಅಪಮಾನವಾಗುವುದನ್ನು ದೇಶ ಸಹಿಸೋಲ್ಲ: ಸ್ಮೃತಿ ಇರಾನಿ
ನವದೆಹಲಿ , ಶುಕ್ರವಾರ, 12 ಫೆಬ್ರವರಿ 2016 (15:52 IST)
ಸಂಸತ್ತಿನ ಮೇಲೆ ದಾಳಿ ನಡೆಸಿದ್ದ ಅಫ್ಜಲ್ ಗುರುವಿಗೆ ನೇಣುಹಾಕಿರುವುದನ್ನು ವಿರೋಧಿಸಿ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದ ಕೆಲ ವಿದ್ಯಾರ್ಥಿಗಳು ನಡೆಸಿರುವ ಪ್ರತಿಭಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವೆ ಮದರ್ ಇಂಡಿಯಾಗೆ ಅಪಮಾನವಾಗುವುದು ರಾಷ್ಟ್ರ ಯಾವತ್ತೂ ಸಹಿಸಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.  
 
ಜೆಎನ್‌ಯು ವಿಶ್ವವಿದ್ಯಾಲಯದಲ್ಲಿ ನಡೆದ ಪ್ರತಿಭಟನೆ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವೆ ಇರಾನಿ, ಇಂದು ಸರಸ್ವತಿ ದೇವತೆಗೆ ಪೂಜೆ ಸಲ್ಲಿಸುವ ದಿನ.ಅಭಿವೃದ್ಧಿ ಮತ್ತು ರಾಷ್ಟ್ರವನ್ನು ಬಲಪಡಿಸುವಂತಹ ಗುರಿ ಹೊಂದಿರುವ ಪ್ರತಿಯೊಂದು ಕುಟುಂಬಗಳಿಗೆ ಸರಸ್ವತಿ ದೇವತೆ ಆಶೀರ್ವದಿಸುತ್ತಾಳೆ. ಮದರ್ ಇಂಡಿಯಾಗೆ ಅಪಮಾನ ಮಾಡುವ ಯಾವುದೇ ಕೃತ್ಯವನ್ನು ದೇಶ ಸಹಿಸುವುದಿಲ್ಲ ಎಂದು ಹೇಳಿದರು.
 
ಇದಕ್ಕಿಂತ ಮೊದಲು, ಆಲ್ ಇಂಡಿಯಾ ಪ್ರಿನ್ಸಿಪಲ್ಸ್ ಕಾನ್ಫ್‌ರೆನ್ಸ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯೊಬ್ಬಳು ಸರಸ್ವತಿ ವಂದನಾ ಗೀತೆಯನ್ನು ಹಾಡಿದಾಗ, ತೃಪ್ತಿಗೊಂಡ ಸಚಿವೆ ಇರಾನಿ, ಶಿಕ್ಷಕರು ಮಕ್ಕಳಿಗೆ ರಾಷ್ಟ್ರಕ್ಕಾಗಿ ಪ್ರಾರ್ಥಿಸುವುದನ್ನು ಕಲಿಸುತ್ತಿರುವುದು ಸಂತಸಕರ ಸಂಗತಿ. ರಾಷ್ಟ್ರ ವಿರೋಧಿ ಘೋಷಣೆಗಳಲ್ಲ ಎಂದು ಹೊಗಳಿದರು. 
 
ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಕೆಲ ವಿದ್ಯಾರ್ಥಿಗಳು ಅಫ್ಜಲ್ ಗುರು ನೇಣಿಗೇರಿಸಿರುವುದನ್ನು ವಿರೋಧಿಸಿ ಕಾಶ್ಮಿರವನ್ನು ಪಡದೇ ತೀರುತ್ತೇವೆ ಎನ್ನುವ ಘೋಷಣೆಗಳನ್ನು ಕೂಗಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ.
 
ಈಗಾಗಲೇ ಪೊಲೀಸರು ವಿಶ್ವವಿದ್ಯಾಲಯದ ನಾಯಕನೊಬ್ಬನನ್ನು ಬಂಧಿಸಿ ವಿಚಾರಣೆ ನಡೆಸಿದ್ದು, ಹಲವರ ಬಂಧನವಾಗುವ ಸಾಧ್ಯತೆಗಳಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.  

Share this Story:

Follow Webdunia kannada