Webdunia - Bharat's app for daily news and videos

Install App

ಕನ್ಯತ್ವ ಪರೀಕ್ಷೆಯಲ್ಲಿ ವಿಫಲ: ಪತ್ನಿಯೊಂದಿಗಿನ ವಿವಾಹ ಸಂಬಂಧ ಅಂತ್ಯಗೊಳಿಸಿದ ಪತಿ

Webdunia
ಬುಧವಾರ, 1 ಜೂನ್ 2016 (12:44 IST)
ಯುವತಿಯೊಬ್ಬಳು ಕನ್ಯತ್ವ ಪರೀಕ್ಷೆಯಲ್ಲಿ ವಿಫಲವಾಗಿದ್ದರಿಂದ ವಿವಾಹವಾದ ಕೇವಲ 68 ಗಂಟೆಗಳಲ್ಲಿಯೇ ವೈವಾಹಿಕ ಸಂಬಂಧ ಅಂತ್ಯವಾದ ಹೀನ ಘಟನೆ ಮಹಾರಾಷ್ಟ್ರದಿಂದ ವರದಿಯಾಗಿದೆ.
 
ನಾಸಿಕ್ ಜಿಲ್ಲೆಯ ಗ್ರಾಮವೊಂದರ ನಿವಾಸಿಯಾದ ಪತಿ, ತನ್ನ ಪತ್ನಿ ಕನ್ಯತ್ವ ಪರೀಕ್ಷೆಯಲ್ಲಿ ಪಾಸಾಗಿಲ್ಲ ಎಂದು ಹೇಳಿದ್ದರಿಂದ ಅಲ್ಲಿನ ಗ್ರಾಮ ಪಂಚಾಯಿತಿಯೊಂದು ಯುವತಿಗೆ ಪತಿಯೊಂದಿಗಿನ ಸಂಬಂಧ ಅಂತ್ಯಗೊಳಿಸುವಂತೆ ತೀರ್ಮಾನ ಹೊರಡಿಸಿರುವುದು ಆಘಾತ ತಂದಿದೆ. 
 
ದಂಪತಿಗಳು ಮೇ 22 ರಂದು ವಿವಾಹವಾದ ನಂತರ ಪ್ರಥಮ ರಾತ್ರಿಯಂದು ಮಂಚದ ಮೇಲೆ ಶ್ವೇತ ಬಣ್ಣದ ಬೆಡ್‌ಶೀಟ್ ಹಾಕಿದ ನಂತರ ದಂಪತಿಗಳು ಒಂದಾಗುವಂತೆ ಪಂಚಾಯಿತಿ ಆದೇಶಿಸಿದೆ. ಮಾರನೇ ದಿನ ಬೆಳಿಗ್ಗೆ ಯುವತಿಗೆ ನಿನ್ನೆ ಮಂಚದ ಮೇಲಿದ್ದ ಬೆಡ್‌‌ಶೀಟ್ ತರುವಂತೆ ಆದೇಶಿಸಿದೆ. ಬೆಡ್‌ಶೀಟ್ ಮೇಲೆ ರಕ್ತದ ಕಲೆಯಿಲ್ಲದಿರುವುದು ಕಂಡ ಗ್ರಾಮ ಪಂಚಾಯಿತಿ ಮುಖಂಡರು ಕನ್ಯತ್ವ ಪರೀಕ್ಷೆಯಲ್ಲಿ ವಿಫಲವಾಗಿದ್ದರಿಂದ ಪತಿಯನ್ನು ಕೂಡಲೇ ತೊರೆಯುವಂತೆ ಆದೇಶಿಸಿದೆ. 
 
ಸಾಮಾಜಿಕ ಕಾರ್ಯಕರ್ತರಾದ ರಂಜನಾ ಗಾವಂಡೆ ಮತ್ತು ಕೃಷ್ಣ ಚಾಂದ್‌ಗುಡೆ ಸುದ್ದಿಗಾರರೊಂದಿಗೆ ಮಾತನಾಡಿ, ಯುವತಿ ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ಪಡೆಯಲು ರನ್ನಿಂಗ್, ಸೈಕ್ಲಿಂಗ್ ಮತ್ತು ಇತರ ವ್ಯಾಯಾಮಗಳಲ್ಲಿ ತೊಡಗಿದ್ದರಿಂದ ವ್ಯತ್ಯಾಸವಾಗಿರಬಹುದು ಎಂದು ತಿಳಿಸಿದ್ದಾರೆ.
 
ಗ್ರಾಮ ಪಂಚಾಯಿತಿಯ ಸದಸ್ಯರು ಯುವತಿಗೆ ನ್ಯಾಯ ದೊರಕಿಸಿಕೊಡುವಲ್ಲಿ ವಿಫಲವಾದಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗುವುದು ಎಂದು ಸಾಮಾಜಿಕ ಕಾರ್ಯಕರ್ತರು ತಿಳಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ