Select Your Language

Notifications

webdunia
webdunia
webdunia
webdunia

ಕೊನೆಗೂ ಯಶಸ್ವಿಯಾಯ್ತು ಪ್ರಧಾನಿ ನರೇಂದ್ರ ಮೋದಿ ಸರ್ಜಿಕಲ್ ಸ್ಟ್ರೈಕ್

ಕೊನೆಗೂ ಯಶಸ್ವಿಯಾಯ್ತು ಪ್ರಧಾನಿ ನರೇಂದ್ರ ಮೋದಿ ಸರ್ಜಿಕಲ್ ಸ್ಟ್ರೈಕ್
NewDelhi , ಶನಿವಾರ, 3 ಡಿಸೆಂಬರ್ 2016 (21:48 IST)
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಕಪ್ಪು ಹಣ ಹೊರ ತರಲು ಮಾಡಿದ್ದ ನೋಟು ನಿಷೇಧ ಉಪಾಯ ಕೊನೆಗೂ ಫಲ ಕೊಟ್ಟಿದೆ. ತನ್ನ ಬಳಿ ಸಾವಿರಾರು ಕೋಟಿ ರೂ. ಕಪ್ಪು ಹಣವಿದೆ ಎಂದು ಘೋಷಿಸಿಕೊಂಡು ತಲೆ ಮರೆಸಿಕೊಂಡಿದ್ದ ಗುಜರಾತ್ ಉದ್ಯಮಿ ಮಹೇಶ್ ಶಾ ಈಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ನೋಟು ನಿಷೇಧಿಸುವುದಕ್ಕೂ ಮೊದಲೇ ಪ್ರಧಾನಿ ದೇಶದಲ್ಲಿ ಕಪ್ಪು ಹಣ ಇಟ್ಟುಕೊಂಡವರು ಆಸ್ತಿ ಘೋಷಣೆ ಮಾಡಬೇಕು ಮತ್ತು ಕಪ್ಪು ಹಣಕ್ಕೆ ಸೆಪ್ಟೆಂಬರ್ 30 ರೊಳಗೆ ಸೂಕ್ತ ತೆರಿಗೆ ಕಟ್ಟುವಂತೆ ಗಡುವು ವಿಧಿಸಿದ್ದರು.

ಆದರೆ ಗುಜರಾತ್ ಮೂಲದ ಮಹೇಶ್ ತನ್ನ ಬಳಿ 13 ಸಾವಿರ ಕೋಟಿ ಕಪ್ಪು ಹಣವಿದೆ ಎಂದಿದ್ದನಷ್ಟೇ ಹೊರತು ಅದಕ್ಕೆ ಪಾವತಿಸಬೇಕಾದ 975 ಕೋಟಿ ರೂ. ತೆರಿಗೆ ಕಟ್ಟದೆ ತಲೆ ಮರೆಸಿಕೊಂಡಿದ್ದ. ಆದರೆ ನಿನ್ನೆ ದಿಡೀರ್ ಟಿವಿ ವಾಹಿನಿಯೊಂದರಲ್ಲಿ ಸಂದರ್ಶನ ನೀಡುವಾಗ ಪೊಲೀಸರು ವಾಹಿನಿ ಮೇಲೆ ದಾಳಿ ನಡೆಸಿದ್ದು, ಆತನನ್ನು ಬಂಧಿಸಿದ್ದಾರೆ.

ಬಂಧನದ ಬಳಿಕ ಮತ್ತೊಂದು ವರಸೆ ತೆಗೆಯುತ್ತಿರುವ ಉದ್ಯಮಿ ಇದು ತನ್ನ ಹಣವಲ್ಲ. ತಾನು ಕಪ್ಪು ಹಣವನ್ನು ಕಮಿಷನ್ ನ ಆಸೆಗೆ ವೈಟ್ ಮನಿ ಮಾಡುವ ಜಾಲಕ್ಕೆ ಸಿಲುಕಿ ತಪ್ಪು ಮಾಡಿದ್ದೇನೆ. ತನ್ನ ಬಳಿಯಿರುವ ಕಪ್ಪು ಹಣ ಪ್ರಭಾವಿ ವ್ಯಕ್ತಿಗಳದ್ದು ಎನ್ನುತ್ತಿದ್ದಾನೆ. ಇದರ ಹಿಂದಿರುವ ಮರ್ಮ ಪೊಲೀಸರ ತನಿಖೆಯಿಂದ ಬಯಲಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಯಡಿಯೂರಪ್ಪ, ಈಶ್ವರಪ್ಪ ಪಕ್ಕದಲ್ಲಿ ಕುಳಿತು ಭ್ರಷ್ಟಾಚಾರವನ್ನು ಟೀಕಿಸುವ ಅಮಿತ್‌ ಶಾಗೆ ನಾಚಿಕೆಯಾಗಬೇಕು: ಸಿಎಂ