Select Your Language

Notifications

webdunia
webdunia
webdunia
webdunia

ಸೆಪ್ಟಂಬರ್ 25 : ಮೋದಿ 'ಮೇಕ್ ಇಂಡಿಯಾ'ಕ್ಕೆ ಮಹೂರ್ತ

ಸೆಪ್ಟಂಬರ್ 25 : ಮೋದಿ 'ಮೇಕ್ ಇಂಡಿಯಾ'ಕ್ಕೆ ಮಹೂರ್ತ
ನವದೆಹಲಿ , ಶುಕ್ರವಾರ, 19 ಸೆಪ್ಟಂಬರ್ 2014 (11:43 IST)
ದೇಶವನ್ನು ಜಾಗತಿಕ ಉತ್ಪಾದನಾ ಕೇಂದ್ರವನ್ನಾಗಿಸುವ ಗುರಿ ಹೊತ್ತಿರುವ ಪ್ರಧಾನಿ ನರೇಂದ್ರ ಮೋದಿ ತಮ್ಮ ಮಹಾತ್ವಾಕಾಂಕ್ಷಿ ' ಮೇಕ್ ಇನ್ ಇಂಡಿಯಾ' ಅಭಿಯಾನಕ್ಕೆ ಸೆಪ್ಟಂಬರ್ 25 ರಂದು ಚಾಲನೆ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಜಾಗತಿಕ ಮತ್ತು ದೇಶೀಯ ಸಿಇಓಗಳು ಉಪಸ್ಥಿತರಿರಲಿದ್ದಾರೆ ಎಂದು ತಿಳಿದು ಬಂದಿದೆ. 

ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ  ನೂರಾರು ಸಂಖ್ಯೆಯಲ್ಲಿ ಜಾಗತಿಕ ಮತ್ತು ದೇಶೀಯ ಸಿಇಓಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. 
 
ಕಳೆದ ಆಗಸ್ಟ್ 15 ರಂದು ತಮ್ಮ ಚೊಚ್ಚಲ ಸ್ವಾತಂತ್ರ್ಯದಿನದ ಭಾಷಣ ಮಾಡುತ್ತಿದ್ದ ಪ್ರಧಾನಿ 'ಕಮ್, ಮೇಕ್ ಇನ್ ಇಂಡಿಯಾ'( ಬನ್ನಿ, ಭಾರತದಲ್ಲಿ ಉತ್ಪಾದಿಸಿ) ಎಂದು ಘೋಷಣೆ ಮಾಡುವುದರ ಮೂಲಕ  ಭಾರತದಲ್ಲಿ ಉತ್ಪಾದನೆ ಸೌಲಭ್ಯಗಳನ್ನು ಸ್ಥಾಪಿಸುವಂತೆ ಜಾಗತಿಕ ವ್ಯಾಪಾರ ಸಮುದಾಯಕ್ಕೆ ಆಹ್ವಾನ ನೀಡಿದ್ದರು. 
 
ಇದನ್ನು ಯಶಸ್ವಿಯಾಗಿಸಲು, ಮುಂಬೈ, ಚೆನ್ನೈ ಮತ್ತು ಬೆಂಗಳೂರು ಸೇರಿದಂತೆ ವಿವಿಧ ರಾಜ್ಯಗಳ ರಾಜಧಾನಿಯಲ್ಲಿ ಏಕಕಾಲದಲ್ಲಿ ಅಭಿಯಾನವನ್ನು ಪ್ರಾರಂಭಿಸಲಾಗುವುದು. 
 
ಭಾರತದಂತೆ ಸಮಯ ವಲಯ ಹೊಂದಿರುವ ದೇಶಗಳಲ್ಲಿ ಕೂಡ ಈ ಅಭಿಯಾನಕ್ಕೆ ಚಾಲನೆ ನೀಡಲಾಗುವುದು.
 
ದೇಶದಲ್ಲಿ  ಬೃಹತ್ ಉದ್ಯೋಗ ಅವಕಾಶಗಳನ್ನು ಹುಟ್ಟುಹಾಕುವ ಜತೆಗೆ, ವ್ಯಾಪಾರ ಮತ್ತು ಆರ್ಥಿಕ ಬೆಳವಣಿಗೆಗೆ ಉತ್ತೇಜಿಸುವ  ಗುರಿಯನ್ನು ಮೋದಿಯವರ ಕನಸಿನ ಅಭಿಯಾನ ಹೊಂದಿದೆ. 

Share this Story:

Follow Webdunia kannada