Select Your Language

Notifications

webdunia
webdunia
webdunia
webdunia

ಮುಸ್ಲಿಂ ಸಹೋದರರ ಕಷ್ಟ ಸುಖಗಳಿಗೆ ಸ್ಪಂದಿಸುತ್ತೇನೆ: ಮೋದಿ

ಮುಸ್ಲಿಂ ಸಹೋದರರ ಕಷ್ಟ ಸುಖಗಳಿಗೆ ಸ್ಪಂದಿಸುತ್ತೇನೆ: ಮೋದಿ
ನವದೆಹಲಿ , ಬುಧವಾರ, 23 ಏಪ್ರಿಲ್ 2014 (19:50 IST)
'ದೇಶದ ಇತರ ಪ್ರಜೆಗಳನ್ನು ತಲುಪಿದ ಹಾಗೆ "ಮುಸ್ಲಿಂ ಸಹೋದರ" ರನ್ನು ತಲುಪುತ್ತೇನೆ ಮತ್ತು ವಿವಾದಾತ್ಮಕ ಸಮಸ್ಯೆಗಳಾದ  ಶ್ರೀರಾಮ್ ದೇವಾಲಯ ಮತ್ತು ಏಕರೂಪ ನಾಗರಿಕ ನೀತಿಸಂಹಿತೆಯ ವಿಷಯಗಳನ್ನು ಸಾಂವಿಧಾನಿಕ  ಚೌಕಟ್ಟಿನ ಒಳಗೆ ಗಮನಿಸಲಾಗುವುದು' ಎಂದು ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಮತ್ತು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. 
 
"ನಾನು ಎಲ್ಲಾ ಭಾರತೀಯರನ್ನು ಒಂದೇ ರೀತಿಯಲ್ಲಿ ನೋಡುತ್ತೇನೆ ಮತ್ತು ಮುಸ್ಲಿಮರನ್ನು ಒಳಗೊಂಡಂತೆ ಸಮಾಜದ, ಎಲ್ಲಾ ವಿಭಾಗಗಳನ್ನು ತಲುಪುವುದು ನನ್ನ ಜವಾಬ್ದಾರಿ" ಎಂದು ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಹೇಳಿದ್ದಾರೆ. 
 
"ಗುಜರಾತಿನ ಮುಖ್ಯಮಂತ್ರಿಯಾಗಿ, ರಾಜ್ಯದ ಆರು ಕೋಟಿ ಜನರನ್ನು ಸಂಪರ್ಕಿಸಲು ಸಾಧ್ಯವಾದಷ್ಟು ಪ್ರಯತ್ನಿಸಿದ್ದೇನೆ. ಈಗ ನಾನು ರಾಷ್ಟ್ರೀಯ ಜವಾಬ್ದಾರಿಯನ್ನು ನಿಭಾಯಿಸ ಹೊರಟಿದ್ದೇನೆ ಮತ್ತು  125 ಕೋಟಿ ಜನರನ್ನು ತಲುಪಲು ನನ್ನಿಂದಾದಷ್ಟು ಪ್ರಯತ್ನವನ್ನು ಮಾಡುತ್ತೇನೆ" ಎಂದು ಮೋದಿ ಭರವಸೆ ನೀಡಿದರು. 
 
"ಇದು ನನ್ನ ಜವಾಬ್ದಾರಿಯ ಭಾಗ ಮತ್ತು ನಾನು ಇದನ್ನು ಮಾಡಲೇ ಬೇಕು. ಇದರರ್ಥ 100 ಹೆಜ್ಜೆಗಳನ್ನು ಹಾಕುವುದಾಗಿರಬಹುದು. ನಾನು ಮೂರು ಹೆಜ್ಜೆಗಳನ್ನು, ಐದು ಹೆಜ್ಜೆಗಳನ್ನು ಅಥವಾ ಏಳು ಹೆಜ್ಜೆಗಳನ್ನು ಇಡಬಹುದು. ಒಂದು ಬೇರೆ ವಿಷಯ. ಆದರೆ ದೇಶದ ಪ್ರತಿ ಪ್ರಜೆಗಳನ್ನು ತಲುಪಲು ಪ್ರದರ್ಶನಾತ್ಮಕ ಪ್ರಯತ್ನಗಳನ್ನು  ಮಾಡುವುದು ನನ್ನ ಜವಾಬ್ದಾರಿ" ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. 
 

Share this Story:

Follow Webdunia kannada