Webdunia - Bharat's app for daily news and videos

Install App

ವೀರಯೋಧ ಬಾತ್ರಾ ಕುಟುಂಬವನ್ನು ಅವಮಾನಿಸುವ ಬದಲು ರಾಜಕೀಯ ತ್ಯಜಿಸುತ್ತೇನೆ: ಮೋದಿ

Webdunia
ಬುಧವಾರ, 30 ಏಪ್ರಿಲ್ 2014 (19:53 IST)
"ಕಾರ್ಗಿಲ್ ಹಿರೋ ವಿಕ್ರಮ್ ಬಾತ್ರಾ ಮತ್ತು ಅವರ ಪಾಲಕರ ಮೇಲೆ ನಾನು ಉನ್ನತ ಗೌರವವನ್ನು ಹೊಂದಿದ್ದೇನೆ. ಅವರಿಗೆ ಅಗೌರವ, ನೋವು ಕೊಡುವುದರ ಬದಲು ನಾನು ರಾಜಕೀಯವನ್ನೇ ತ್ಯಜಿಸುತ್ತೇನೆ" ಎಂದು ಬಿಜೆಪಿಯ ಪ್ರಧಾನಿ ಸ್ಥಾನದ ಅಭ್ಯರ್ಥಿ ನರೇಂದ್ರ ಮೋದಿ ಹೇಳಿದ್ದಾರೆ. 
 
ಕ್ಯಾಪ್ಟನ್ ಬಾತ್ರಾ ತವರೂರಾದ ಹಿಮಾಚಲ ಪ್ರದೇಶದ ಪಲಂಬುರ್‌ ಪ್ರದೇಶದಲ್ಲಿ ಚುನಾವಣಾ ಪ್ರಚಾರವನ್ನು ನಡೆಸುತ್ತಿದ್ದ ವೇಳೆ ಮೋದಿ ಬಾತ್ರಾರವರ ಹೇಳಿಕೆಯಾದ "ಏ ದಿಲ್ ಮಾಂಗೇ ಮೋರ್" ನ್ನು ಬಳಕೆ ಮಾಡಿದ್ದರು.
 
ಹೊಲೊಗ್ರಾಫಿಕ್ ತಂತ್ರಜ್ಞಾನವನ್ನು ಬಳಸಿಕೊಂಡು 3D ಸಮಾವೇಶವೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಮೋದಿ "ವಿಕ್ರಮ್ ಬಾತ್ರಾ ಕುರಿತು ನಾನು ಗೌರವ ಪೂರ್ಣವಾಗಿಯೇ ಮಾತನಾಡಿದ್ದೆ. ಆದರೆ ನಂತರ ನನ್ನ ರಾಜಕೀಯ ಎದುರಾಳಿಗಳು ಅದನ್ನು ತಿರುಚಿದರು.  ಇದು ನನಗೆ ತುಂಬ ಅಸಮಾಧಾನವನ್ನು ಮೂಡಿಸಿದೆ" ಎಂದು ಹೇಳಿಕೊಂಡಿದ್ದಾರೆ. 
 
"ವಿಕ್ರಮ್ ಬಾತ್ರಾ ಭಾರತ ಮಾತೆಯ ಸುಪುತ್ರ. ಅವರು ನಮಗಾಗಿ ಹುತಾತ್ಮರಾದರು. ನಾನು ಅವರನ್ನು ಮತ್ತು ಅವರ ಪೋಷಕರನ್ನು ಗೌರವಿಸುತ್ತೇನೆ.ನಮ್ಮ ಹುತಾತ್ಮರಿಗೆ ಎಂದಿಗೂ ಅವಮಾನ ಮಾಡುವುದಿಲ್ಲ ಅಥವಾ ಅವರ ಕುಟುಂಬಕ್ಕೆ ನೋವು ಕೊಡಲು ಬಯಸುವುದಿಲ್ಲ. ಅದರ ಬದಲು ನಾನು ರಾಜಕೀಯವನ್ನೇ ಬಿಟ್ಟು ಬಿಡುತ್ತೇನೆ. ಈ ಅನಗತ್ಯ ವಿವಾದ ಬಗ್ಗೆ ಕೇಳಿ ನಾನು ಬಹಳ ದುಃಖಿತನಾಗಿದ್ದೇನೆ " ಎಂದು ಅವರು ಹೇಳಿದರು.
 
ಹುತಾತ್ಮನ ಉಲ್ಲೇಖ ಕುಟುಂಬದ ಆಸ್ತಿ ಅಲ್ಲ ಎಂದು ಹೇಳುವುದರ ಮೂಲಕ ಭಾರತೀಯ ಜನತಾ ಪಾರ್ಟಿ ಮೋದಿಯನ್ನು ಸಮರ್ಥಿಸಿಕೊಂಡಿದೆ. ಆದರೆ ಕಾಂಗ್ರೆಸ್, ಹುತಾತ್ಮ ಸೈನಿಕನಿಗೆ ಮೋದಿ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿದೆ.
 
ತಮ್ಮ ಮಗನ ಘೋಷಣೆಯನ್ನು ಬಳಕೆ ಮಾಡಿದ್ದಕ್ಕೆ ಬಾತ್ರಾ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದರು.ಪುತ್ರನ ತ್ಯಾಗಕ್ಕೆ ರಾಜಕೀಯ ಬಣ್ಣ ನೀಡಬೇಡಿ ಎಂದು ಅವರ ಕೇಳಿಕೊಂಡಿದ್ದರು. 
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments