Select Your Language

Notifications

webdunia
webdunia
webdunia
webdunia

ಮೋದಿಯವರದು ‘ಅತಿ ಕೇಂದ್ರೀಕೃತ’ ಆಡಳಿತ: ಪಿ. ಚಿದಂಬರಂ

ಮೋದಿಯವರದು ‘ಅತಿ ಕೇಂದ್ರೀಕೃತ’ ಆಡಳಿತ:  ಪಿ. ಚಿದಂಬರಂ
ನವದೆಹಲಿ , ಗುರುವಾರ, 28 ಮೇ 2015 (16:35 IST)
ಕೇಂದ್ರದಲ್ಲಿ ಯುಪಿಎ ಸರಕಾರ ಅಸ್ತಿತ್ವದಲ್ಲಿದ್ದ ಸಂದರ್ಭದಲ್ಲಿ ಸೋನಿಯಾ ಗಾಂಧಿ ‘ಅಸಾಂವಿಧಾನಿಕ ಅಧಿಕಾರ’ ಚಲಾಯಿಸಿ ಸರ್ಕಾರವನ್ನು ನಿಯಂತ್ರಿಸುತ್ತಿದ್ದರು ಎಂದ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಾಂಗ್ರೆಸ್​ನ ನಾಯಕ, ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಚಾಟಿ ಬೀಸಿದ್ದಾರೆ. 

"ಸೋನಿಯಾ ಗಾಂಧಿಯವರು ಆ ರೀತಿಯಲ್ಲಿ ನಡೆದುಕೊಂಡಿರಲಿಲ್ಲ. ಬದಲಾಗಿ  ರಾಷ್ಟ್ರೀಯ ಸ್ವಯಂ ಸೇವಕ ಸಂಘ ವಿನಾಶಕಾರಿಯಾದ ರಹಸ್ಯ ಉದ್ದೇಶವನ್ನಿಟ್ಟುಕೊಂಡು ಬಿಜೆಪಿ ಸರಕಾರವನ್ನು ತಾನೇ ನಡೆಸುತ್ತಿದೆ", ಎಂದು ಅವರು ಆರೋಪಿಸಿದ್ದಾರೆ. 
 
"ಮೋದಿಯವರು ‘ಅತಿ ಕೇಂದ್ರೀಕೃತ’ ಆಡಳಿತ ನಡೆಸುತ್ತಿದ್ದಾರೆ. ಇದು ಹೀಗೆಯೇ ಮುಂದುವರೆದರೆ ಒಳ್ಳೆಯದಲ್ಲ. ಇದನ್ನು ದೇಶದ ಜನರು ಒಪ್ಪಿಕೊಳ್ಳುವುದಿಲ್ಲ. ಮೋದಿಯವರು ಗುಜರಾತ್ ಮುಖ್ಯಮಂತ್ರಿ ಸ್ಥಾನದಿಂದ ಭಾರತದ ಮುಖ್ಯಮಂತ್ರಿಯಾಗಿ ವರ್ಗಾವಣೆಯಾಗಿದ್ದಾರೆ", ಎಂದು ಅವರು ವ್ಯಂಗ್ಯವಾಡಿದ್ದಾರೆ. 
 
"ಸರ್ಕಾರದ ನಡೆ ಸರಿಯಿಲ್ಲದಿದ್ದಾಗ ಎಚ್ಚರಿಸುವುದು ವಿರೋಧ ಪಕ್ಷಗಳ ಹೊಣೆಗಾರಿಕೆ. ಆದರೆ ಅದನ್ನು ಟೀಕೆಯಂತೆ ಸ್ವೀಕರಿಸಿರುವ ಮೋದಿ ಕಾಂಗ್ರೆಸ್ ಮೇಲೆ ನಿರಾಧಾರವಾದ ಆರೋಪವನ್ನು ಮಾಡುತ್ತಿದ್ದಾರೆ. ಇದು ಅವರ ಘನತೆಗೆ ಶೋಭೆ ತರುವಂತದ್ದಲ್ಲ. ಸೋನಿಯಾ ಗಾಂಧಿಯವರು ಸರ್ಕಾರದ ನಿರ್ಧಾರಗಳಲ್ಲಿ ಎಂದು ಕೂಡ ಹಸ್ತಕ್ಷೇಪ ನಡೆಸುತ್ತಿರಲಿಲ್ಲ", ಎಂದು ಚಿದಂಬರಮ್ ತಮ್ಮ ಪಕ್ಷದ ವರಿಷ್ಠೆಯನ್ನು ಸಮರ್ಥಿಸಿಕೊಂಡು ಮಾತನಾಡಿದ್ದಾರೆ. 
 
ಯುಪಿಎ ಅಧಿಕಾರವಧಿಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು 'ಅಸಾಂವಿಧಾನಿಕ' ಶಕ್ತಿಕೇಂದ್ರವಾಗಿದ್ದರು. ಪ್ರಧಾನಿ ಕಚೇರಿಯ ಅಸಲಿ ಅಧಿಕಾರವನ್ನು ಅವರೇ ಚಲಾಯಿಸುತ್ತಿದ್ದರು. ಆದರೆ ಈಗ ಅಧಿಕಾರವು ಸಾಂವಿಧಾನಿಕವಾಗಿ ಹಂಚಿಕೆಯಾಗಿದೆ,'' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.

Share this Story:

Follow Webdunia kannada