Select Your Language

Notifications

webdunia
webdunia
webdunia
webdunia

ಶತಕದ ಅಂಚಿನಲ್ಲಿರುವ ಮೋದಿ ಸರ್ಕಾರ ತೆಗೆದುಕೊಂಡ 8 ಮುಖ್ಯ ನಿರ್ಧಾರಗಳು

ಶತಕದ ಅಂಚಿನಲ್ಲಿರುವ ಮೋದಿ ಸರ್ಕಾರ ತೆಗೆದುಕೊಂಡ 8 ಮುಖ್ಯ ನಿರ್ಧಾರಗಳು
ನವದೆಹಲಿ , ಶನಿವಾರ, 30 ಆಗಸ್ಟ್ 2014 (16:42 IST)
ನರೇಂದ್ರ ಮೋದಿ ಸರ್ಕಾರ ಕೆಲವೇ ದಿನಗಳಲ್ಲಿ 100 ದಿನಗಳ ಆಡಳಿತವನ್ನು ಸಮೀಪಿಸಲಿದೆ. ಭಾರತೀಯ ಜನತಾ ಪಕ್ಷ ಅಚ್ಚೆ ದಿನ್ ಹೆಸರಿನಲ್ಲಿ ಅಭಿವೃದ್ಧಿಯ ಘೋಷಣೆಯೊಂದಿಗೆ ಆಯ್ಕೆಯಾಗಿದೆ. ಆಡಳಿತ ಪಕ್ಷ ಚುನಾವಣೆ ಪ್ರಚಾರದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುತ್ತದೆಯೇ ಎಂಬುದನ್ನು ಕಾಲವೇ ನಿರ್ಧರಿಸುವುದಾದರೂ, ಮೋದಿ ಸರ್ಕಾರ ತೆಗೆದುಕೊಂಡ 8 ಪ್ರಮುಖ ನಿರ್ಧಾರಗಳು ದೀರ್ಘಾವಧಿಯಲ್ಲಿ ಅದಕ್ಕೆ ನೆರವಾಗುತ್ತದೆ. ಆ 8 ನಿರ್ಧಾರಗಳನ್ನು ಕೆಳಕ್ಕೆ ನೀಡಲಾಗಿದೆ.
 
1. ಉನ್ನತ ನ್ಯಾಯಾಂಗಕ್ಕೆ ನೇಮಕದ ಆಂತರಿಕ ವ್ಯವಸ್ಥೆ ಅಥವಾ ಕೊಲೇಜಿಯಂ ಪದ್ಧತಿಗೆ ಬದಲಾಗಿ ರಾಷ್ಟ್ರೀಯ ನ್ಯಾಯಾಂಗ ನೇಮಕ ಆಯೋಗ ರಚನೆ.
 
2. ಐದು ದಶಕಗಳಿಂದ ಚಾಲ್ತಿಯಲ್ಲಿದ್ದ ಯೋಜನಾ ಆಯೋಗ ರದ್ದಾಗಿ ಬಹುಮಟ್ಟಿಗೆ ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯಾಗಿ ಬದಲಿಸಲಾಗುತ್ತದೆ.
 
 3.ವಿದೇಶಗಳಲ್ಲಿ  ಬಚ್ಚಿಟ್ಟ ಅಂದಾಜು 50,000 ಕೋಟಿ(8 ಶತಕೋಟಿ ಡಾಲರ್) ಕಪ್ಪುಹಣವನ್ನು ಪತ್ತೆಹಚ್ಚಲು ಎಸ್‌ಐಟಿ ರಚನೆ.
 
4. ಗ್ರೂಪ್ ಆಫ್ ಮಿನಿಸ್ಟರ್ ಮತ್ತು ಎಂಪವರ್ಡ್ ಗ್ರೂಪ್ ಆಫ್ ಮಿನಿಸ್ಟರ್‌ಗಳಿಗೆ ಕೊನೆಹೇಳಿ, ಯುಪಿಎ ಸರ್ಕಾರ ರಚಿಸಿದ 62 ಸಮಿತಿಗಳ ಬದಲಿಗೆ ಒಂದು ನಿರ್ಧಾರ ಕೈಗೊಳ್ಳುವ ಕೇಂದ್ರದ ಮೂಲಕ ಪ್ರಕ್ರಿಯೆಯನ್ನು ವೇಗಗೊಳಿಸುವುದು.
 
5. ಮಕ್ಕಳ ನ್ಯಾಯ ಕಾಯ್ದೆಗೆ ತಿದ್ದುಪಡಿ ಮಾಡಿ ರೇಪ್ ಮುಂತಾದ ಹೇಯ ಅಪರಾಧಗಳಲ್ಲಿ ತೊಡಗಿದ 16 ವರ್ಷಕ್ಕಿಂತ ಮೇಲಿನ ಬಾಲಪರಾಧಿಗಳನ್ನು ಕಾಯಂ ಕೋರ್ಟ್‌ನಲ್ಲಿ ವಿಚಾರಣೆ ನಡೆಸುವುದು.
 
6. ಬಡವರ ಕೈಗೂ ಕೂಡ ಬ್ಯಾಂಕ್ ಖಾತೆ ಎಟುಕುವಂತೆ ಮಾಡಲು ಪ್ರಧಾನಮಂತ್ರಿ ಜನ ಧನ್ ಯೋಜನೆ ಜಾರಿಗೆ. 2015, ಜನವರಿ 26ರೊಳಗೆ 7.5 ಕೋಟಿ ಜನರನ್ನು ಅದು ಒಳಗೊಳ್ಳಲಿದೆ. ಅವರಿಗೆ ಶೂನ್ಯ ಬ್ಯಾಲೆನ್ಸ್ ಬ್ಯಾಂಕ್ ಖಾತೆಯೊಂದಿಗೆ ರೂಪೇ ಡೆಬಿಟ್ ಕಾರ್ಡ್ ಜೊತೆಗೆ 30000 ರೂ. ಜೀವವಿಮಾ ಸೌಲಭ್ಯ ಮತ್ತು 1 ಲಕ್ಷ ರೂ. ಅಪಘಾತ ವಿಮೆ ಸೌಲಭ್ಯವನ್ನು ನೀಡಲಾಗುತ್ತದೆ.
 
7.ಕಳೆದ 10 ವರ್ಷಗಳಿಂದ ಮರೆತುಹೋಗಿದ್ದ ರಾಷ್ಟ್ರಗಳ ಜತೆ ಬಾಂಧವ್ಯ ವೃದ್ಧಿಗೆ ಲುಕ್ ಈಸ್ಟ್ ಪಾಲಿಸಿಗೆ ನಿರ್ಧರಿಸಿರುವ ಮೋದಿ, ಭೂತಾನ್ ಮತ್ತು ನೇಪಾಳಕ್ಕೆ ಭೇಟಿ ಕೊಟ್ಟು ಆಗಸ್ಟ್ 30ರಿಂದ ಸೆ.3ರವರೆಗೆ ಜಪಾನ್‌ಗೆ ಭೇಟಿ ನೀಡಲಿದ್ದಾರೆ.
 
  8. ಇಟಲಿಯ ಸಂಸ್ಥೆ ಫಿನ್‌ಮೆಕಾನಿಯಾ ಜೊತೆ ರಕ್ಷಣಾ ಒಪ್ಪಂದಗಳು ರದ್ದು. ಅದರ ಬ್ರಿಟನ್ ಮೂಲದ ಕಂಪನಿ ಆಗಸ್ಟಾವೆಸ್ಟ್‌ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಖರೀದಿಗೆ ಸಂಬಂಧಿಸಿದಂತೆ ರುಷುವತ್ತಿನ ಹಣದ ಆಮಿಷ ಒಡ್ಡಿದ ಆರೋಪಕ್ಕೆ ಗುರಿಯಾಗಿದೆ. 

Share this Story:

Follow Webdunia kannada