Select Your Language

Notifications

webdunia
webdunia
webdunia
webdunia

ಯುಪಿಎ ಪಾಸ್ ಮಾಡಲು ವಿಫಲವಾದ ಬಿಲ್ಲುಗಳನ್ನು ಕೈಗೆತ್ತಿಕೊಳ್ಳಲಿದೆ ಮೋದಿ ಸರಕಾರ

ಯುಪಿಎ ಪಾಸ್ ಮಾಡಲು ವಿಫಲವಾದ  ಬಿಲ್ಲುಗಳನ್ನು ಕೈಗೆತ್ತಿಕೊಳ್ಳಲಿದೆ ಮೋದಿ ಸರಕಾರ
ನವದೆಹಲಿ , ಗುರುವಾರ, 22 ಮೇ 2014 (13:59 IST)
ಆಡಳಿತದ ಚುಕ್ಕಾಣಿ ಹಿಡಿಯಲಿರುವ ನರೇಂದ್ರ ಮೋದಿ ನೇತೃತ್ವದ ಸರಕಾರ, ಯುಪಿಎ ಸರಕಾರ ಪಾಸ್ ಮಾಡಲು ವಿಫಲವಾದ ಭ್ರಷ್ಟಾಚಾರ ವಿರೋಧಿ ಮತ್ತು ಆಡಳಿತ ಪರ ಮಸೂದೆಗಳನ್ನು ಕೈಗೆತ್ತಿಕೊಳ್ಳಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
 
ಬಾಕಿ ಇರುವ ಬಿಲ್ಲುಗಳನ್ನು ಒಟ್ಟುಗೂಡಿಸಿ ನೀಡುವಂತೆ ಸಚಿವಾಲಯಗಳಿಗೆ ಕರೆ ನೀಡಿದ್ದು, ಯುಪಿಎ II ನೇ ಅಪೂರ್ಣ ಕಾರ್ಯಸೂಚಿಯನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ವರದಿಯಾಗಿದೆ. 
 
ಮನಮೋಹನ್ ಸಿಂಗ್ ಸರಕಾರ ಕೈಗೆತ್ತಿಕೊಂಡಿದ್ದ ಬಿಲ್‌ಗಳಲ್ಲಿ ಭ್ರಷ್ಟಾಚಾರ ವಿರೋಧಿ ಮತ್ತು ಸಾರ್ವಜನಿಕ ಸೇವೆಗೆ ಸಂಬಂಧಿಸಿದ್ದವು ಪ್ರಮುಖವಾಗಿದ್ದು, 15 ನೇ ಲೋಕಸಭೆ ವಿಸರ್ಜನೆಯಾಗುವ ಮೊದಲು ಇವುಗಳನ್ನು ಪಾಸ್ ಮಾಡಲು   ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಯತ್ನಿಸಿದ್ದರು.
 
ಹೊಸ ಸರಕಾರ ಸ್ಥಾಪನೆಯಾದ ಕೂಡಲೇ ಸಂಬಂಧಿಸಿದ ಮಂತ್ರಿಗಳು/ವಿಭಾಗಗಳು ಬಾಕಿಯಾಗಿರುವ ಬಿಲ್ಲುಗಳ ಬಗ್ಗೆ ಗಮನಹರಿಸಲಿದ್ದಾರೆ ಮತ್ತು ಅದಕ್ಕೆ ಸಂಬಂಧಿಸಿದ ಮಂತ್ರಿಗಳ ಸಮ್ಮತಿಯನ್ನು ಪಡೆಯಲಾಗುವುದು ಎಂದು ಕ್ಯಾಬಿನೇಟ್ ಕಾರ್ಯದರ್ಶಿ ಅಜಿತ್ ಸೇಥ್ ತಿಳಿಸಿದ್ದಾರೆ. 
 
" ಅಗತ್ಯ ಅಂತರ ಸಚಿವ ಸಮಾಲೋಚನೆಗಳ ನಂತರ, ಬಿಲ್‌ನ್ನು ಬಿಡಬೇಕೆ, ಬದಲಾಯಿಸಬೇಕೆ ಅಥವಾ ಉಳಿಸಿಕೊಳ್ಳಬೇಕೆ ಎಂಬುದು ಖಚಿತ ಪಡಿಸಿಕೊಂಡು ಕ್ಯಾಬಿನೆಟ್ ಅನುಮೋದನೆಗೆ ಸೂಕ್ತವಾದ ಪ್ರಸ್ತಾಪಗಳನ್ನು ರಚಿಸುವಂತೆ" ಸೇಥ್ ಸಚಿವಾಲಯಗಳಿಗೆ ಸಲಹೆ ನೀಡಿದ್ದಾರೆ.  
 
" ಬಿಜೆಪಿ ಬಿಲ್ಲುಗಳನ್ನು ಪರಿಶೀಲಿಸಲು ಒಲವನ್ನು ತೋರುತ್ತಿದ್ದು, ಕೆಲವು ಬಿಲ್ಲುಗಳನ್ನು ಉತ್ತಮಗೊಳಿಸಲಾಗುವುದು. ಮಂಜೂರಾತಿಯಾಗಿರುವ ಕೆಲವು ಬಿಲ್ಲುಗಳಲ್ಲಿ ತಿದ್ದುಪಡಿ ಮಾಡಬಹುದು. ಕೆಲವು ಮಸೂದೆಗಳಿಗೆ ಯಾವುದೇ ಆದ್ಯತೆಯನ್ನು ನೀಡದಿರಬಹುದು ಎಂದು " ಬಿಜೆಪಿಯ ಹಿರಿಯ ನಾಯಕರು ತಿಳಿಸಿದ್ದಾರೆ. 

Share this Story:

Follow Webdunia kannada