Select Your Language

Notifications

webdunia
webdunia
webdunia
webdunia

ಗೌರವ ಡಾಕ್ಟರೇಟ್ ನಿರಾಕರಿಸಿದ ಪ್ರಧಾನಿ ಮೋದಿ

ಗೌರವ ಡಾಕ್ಟರೇಟ್  ನಿರಾಕರಿಸಿದ ಪ್ರಧಾನಿ ಮೋದಿ
ವಾರಣಾಸಿ , ಶುಕ್ರವಾರ, 19 ಫೆಬ್ರವರಿ 2016 (14:43 IST)
ಬನಾರಸ್ ಹಿಂದೂ ವಿಶ್ವವಿದ್ಯಾಲಯ ನೀಡಬಯಸಿದ್ದ ಗೌರವ ಡಾಕ್ಟರೇಟ್‌ನ್ನು ಸ್ವೀಕರಿಸಲು ಪ್ರಧಾನಿ ಮೋದಿ ನಿರಾಕರಿಸಿದ್ದಾರೆ. ಈ ರೀತಿಯ ಪದವಿಗಳನ್ನು ಸ್ವೀಕರಿಸದಿರುವುದು ತಮ್ಮ ನೀತಿಯಾಗಿದೆ ಎಂದು ಪ್ರಧಾನಿ ನಿರಾಕರಣೆಗೆ ಸ್ಪಷ್ಟನೆ ನೀಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. 
 
ಫೆಬ್ರವರಿ 22 ರಂದು ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಧಾನಿ ಬನಾರಸ್‌ಗೆ ತೆರಳುತ್ತಿದ್ದಾರೆ. ಅಂದು ಮೋದಿಯವರಿಗೆ ಕಾನೂನು ಗೌರವ ಡಾಕ್ಟರೇಟ್ ನೀಡಲು ವಿಶ್ವವಿದ್ಯಾಲಯ ಪ್ರಸ್ತಾವವನ್ನು ಸಲ್ಲಿಸಿತ್ತು. 
 
ಅನ್ವೇಷಕ , ಸುಧಾರಕ, ಸಾರ್ವಜನಿಕ ಸೇವೆ ಮತ್ತು ಆಡಳಿತದಲ್ಲಿ ಮಹಾನ್ ನಾಯಕ ಜತೆಗೆ ಅವರ ಉಲ್ಲೇಖನೀಯ ಸೇವೆಗಳನ್ನು ಗುರುತಿಸಿ ಗೌರವ ಡಾಕ್ಟರೇಟ್ (ಕಾನೂನು) ನೀಡುವ ಪ್ರಸ್ತಾಪವನ್ನಿಟ್ಟಿದ್ದೆವು ಎಂದು ವಿಶ್ವವಿದ್ಯಾಲಯ ಹೇಳಿಕೆ ಬಿಡುಗಡೆ ಮಾಡಿದೆ. ಒಪ್ಪಿಗೆಗಾಗಿ ವಿಶ್ವವಿದ್ಯಾಲಯ ಪ್ರಧಾನಿಯವರಿಗೆ ಮನವಿ ಮಾಡಿತ್ತು. ಆದರೆ ಅವರು ಅದನ್ನು ನಯವಾಗಿ ನಿರಾಕರಿಸಿದ್ದಾರೆ.  ಮೋದಿಯವರು ಈ ರೀತಿಯ ಡಾಕ್ಟರೇಟ್ ಪದವಿಯನ್ನು ನಿರಾಕರಿಸಿದ್ದು ಇದೇ ಮೊದಲೇನಲ್ಲ. 
 
2014ರಲ್ಲಿ ಅವರು ಅಮೇರಿಕಾಕ್ಕೆ ಭೇಟಿ ನೀಡಿದ್ದಾಗ ಲೂಸಿಯಾನಾ ವಿಶ್ವವಿದ್ಯಾಲಯ (ಸಾಮಾಜಿಕ ಬದಲಾವಣೆ, ವಿಶೇಷವಾಗಿ ಗುಜರಾತ್‌ನಲ್ಲಿ ಮಹಿಳೆಯರ ಮತ್ತು ಅಲ್ಪಸಂಖ್ಯಾತರ ಸಶಕ್ತಿಕರಣದಲ್ಲಿ ಅವರ ಕೊಡುಗೆಯನ್ನು ಗಮನಿಸಿ) ಅವರಿಗೆ ಡಾಕ್ಟರೇಟ್ ನೀಡುವ ಪ್ರಸ್ತಾವನೆಯನ್ನು ಮುಂದಿಟ್ಟಿತ್ತು. ಆದರೆ ಅವರು ಅದನ್ನು ಸ್ವೀಕರಿಸಲು ಒಪ್ಪಿರಲಿಲ್ಲ. 

Share this Story:

Follow Webdunia kannada