ಜಿಎಸ್ ಟಿ ಪ್ರಚಾರ ರಾಯಭಾರಿಯಿಂದ ಅಮಿತಾಬ್ ಹಿಂದೆ ಸರಿಯುವರೇ..?

Webdunia
ಗುರುವಾರ, 22 ಜೂನ್ 2017 (08:20 IST)
ಜಿಎಸ್‌ಟಿ ಪ್ರಚಾರಾಭಿಯಾನದಿಂದ ದೂರ ಸರಿಯಿರಿ ಎಂದು ಬಾಲಿವುಡ್‌ನ‌ ಬಿಗ್‌ ಬಿ ಅಮಿತಾಭ್‌ ಬಚ್ಚನ್‌ಗೆ ಹೇಳುವ ಮೂಲಕ ಕಾಂಗ್ರೆಸ್‌ ನಾಯಕ ಸಂಜಯ್‌ ನಿರುಪಮ್‌ ವಿವಾದ ಸೃಷ್ಟಿಸಿದ್ದಾರೆ.
 
ಜಿಎಸ್‌ಟಿ ಮೂಲತಃ ಕಾಂಗ್ರೆಸ್‌ನ ಯೋಜನೆಯಾಗಿತ್ತು. ಬಿಜೆಪಿ ವಿರೋಧ ಪಕ್ಷದಲ್ಲಿದ್ದಷ್ಟು  ಕಾಲವೂ ಅದು ಜಿಎಸ್‌ಟಿ ಯನ್ನು ವಿರೋಧಿಸುತ್ತಿತ್ತು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಮೂಲ ಜಿಎಸ್‌ಟಿಯನ್ನು ಸಡಿಲುಗೊಳಿಸಿ ಜಾರಿಗೆ ತರಲು ಮುಂದಾಯಿತು; ಇದು ನಮಗೆ ಸ್ವೀಕಾರಾರ್ಹವಾಗಿರಲಿಲ್ಲ' ಎಂದು ನಿರುಪಮ್‌ ತಿಳಿಸಿದ್ದಾರೆ. ಇಡಿಯ ದೇಶಕ್ಕೆ ಏಕರೂಪದ ತೆರಿಗೆಯಾಗಿ ಜಿಎಸ್‌ಟಿಯನ್ನು ತರಲು ಕಾಂಗ್ರೆಸ್‌ ಬಯಸಿತ್ತು. ಆದರೆ ಬಿಜೆಪಿ ಅದನ್ನು ನಾಲ್ಕು ಹಂತಗಳ ತೆರಿಗೆ ಮತ್ತು ಮೂರು ವಿವಿಧ ಬಗೆಯ ಉಪ ನಮೂನೆಯೊಂದಿಗೆ ಜಾರಿಗೆ ತರುತ್ತಿದೆ ಎಂಬುದು ಅವರ ಆಕ್ಷೇಪ. 
 
ಜಿಎಸ್‌ಟಿ ಮುಂಬರುವ ದಿನಗಳಲ್ಲಿ ವಾಪಾರಿ ವರ್ಗದವರ ಆಕ್ರೋಶಕ್ಕೆ ಗುರಿಯಾಗುವುದು ನಿಶ್ಚಿತ; ಹಾಗಾಗಿ ಅವರ ವಿರೋಧವನ್ನು ಕಟ್ಟಿಕೊಳ್ಳದಿರುವುದೇ ಲೇಸು ಮತ್ತು ಬಿಜೆಪಿಯ ಮೂರ್ಖತನದಲ್ಲಿ ಅಮಿತಾಬ್ ಬಚ್ಚನ್  ಭಾಗಿಯಾಗಬಾರದು. ಅಮಿತಾಭ್‌  ಈಗಿಂದಲೇ ಜಿಎಸ್‌ಟಿ ಪ್ರಚಾರಾಭಿಯಾನದಿಂದ ದೂರ ಸರಿಯಿರಿ; ನೀವು ಎಲ್ಲರಿಗೂ ತಿಳಿದಿರುವ ಮತ್ತು ಅತ್ಯಂತ ಘನತೆವೆತ್ತ ವ್ಯಕ್ತಿ; ಮೇಲಾಗಿ ನಾನು ನಿಮ್ಮ ಅಭಿಮಾನಿ ಎಂದು ಹೇಳಿದ್ದಾರೆ.
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಡ್ನಿಯಲ್ಲಿ ನಡೆದ ಮಾರಣಾಂತಿಕ ದಾಳಿ ಬಗ್ಗೆ ಯುಕೆ ಪ್ರಧಾನಿ ಮೊದಲ ರಿಯಾಕ್ಷನ್

2 ವರ್ಷದ ಬಾಲಕಿ ರೇಪ್ ಎಸಗಿ, ಹತ್ಯೆ ಮಾಡಿದವನಿಗೆ ಕ್ಷಮದಾನಕ್ಕೆ ನಿರಾಕರಿಸಿದ ರಾಷ್ಟ್ರಪತಿ

ಆರ್‌ಎಸ್‌ಎಸ್‌, ಬಿಜೆಪಿ ಸಿದ್ಧಾಂತ ದೇಶವನ್ನು ನಾಶಪಡಿಸುತ್ತದೆ: ಮಲ್ಲಿಕಾರ್ಜುನ ಖರ್ಗೆ

ಬಿಜೆಪಿ ಸಾರ್ವಜನಿಕರ ನಂಬಿಕೆಯನ್ನು ಕಳೆದುಕೊಂಡಿದೆ: ಪ್ರಿಯಾಂಕಾ ಗಾಂಧಿ

ಮತ್ತಷ್ಟು ದಾಖಲೆ ಸಮೇತ ಎದುರು ಬರುತ್ತೇವೆ: ಗುಡುಗಿದ ಡಿಕೆ ಶಿವಕುಮಾರ್‌

ಮುಂದಿನ ಸುದ್ದಿ
Show comments