Select Your Language

Notifications

webdunia
webdunia
webdunia
webdunia

ಚೀನಾ, ಭಾರತ ಏಕ ದನಿಯಲ್ಲಿ ಮಾತನಾಡಿದ್ರೆ ಇಡೀ ಜಗತ್ತು ಗಮನಿಸುತ್ತದೆ: ಕ್ಸಿ ಜಿನ್‌ಪಿಂಗ್

ಚೀನಾ, ಭಾರತ ಏಕ ದನಿಯಲ್ಲಿ ಮಾತನಾಡಿದ್ರೆ ಇಡೀ ಜಗತ್ತು ಗಮನಿಸುತ್ತದೆ: ಕ್ಸಿ ಜಿನ್‌ಪಿಂಗ್
ನವದೆಹಲಿ , ಗುರುವಾರ, 18 ಸೆಪ್ಟಂಬರ್ 2014 (15:09 IST)
ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ದೆಹಲಿಯಲ್ಲಿ 90 ನಿಮಿಷಗಳ ಕಾಲ ಶೃಂಗಸಭೆ ನಡೆಸಿದರು.
ನಮ್ಮ ಬಾಂಧವ್ಯದಲ್ಲಿ ಮತ್ತು ಗಡಿಯಲ್ಲಿ ಶಾಂತಿ ನೆಲಸಬೇಕು. ಇದು ಸಂಭವಿಸಿದರೆ ನಮ್ಮ ಬಾಂಧವ್ಯದ ನಿಜವಾದ ಸಾಮರ್ಥ್ಯದ ಅರಿವಾಗುತ್ತದೆ ಎಂದು ಮೋದಿ ನಂತರ ತಿಳಿಸಿದರು. ಮೋದಿ ಮತ್ತು  ಕ್ಸಿ ಜಿನ್‌ಪಿಂಗ್ ಭಾಷಣದ ಮುಖ್ಯಾಂಶಗಳನ್ನು ಕೆಳಗೆ ನೀಡಲಾಗಿದೆ.
 
 ಪ್ರದಾನಮಂತ್ರಿ ನರೇಂದ್ರ ಮೋದಿ: 
  •   ನಾನು ಚೀನಾ ಜೊತೆ ಬಾಂಧವ್ಯಕ್ಕೆ ಹೆಚ್ಚು ಮಹತ್ವ ನೀಡುತ್ತೇನೆ. ಎರಡೂ ಪ್ರಾಚೀನ ನಾಗರೀಕತೆಗಳು ಮತ್ತು ಸಮಾನವಾದ ಐತಿಹಾಸಿಕ ಸಂಬಂಧ ಹೊಂದಿವೆ.
  •  ಚೀನಾ ಭಾರತದ ಅತೀ ದೊಡ್ಡ ನೆರೆಯ ದೇಶಗಳು-  ವಿಶ್ವದ ಅತ್ಯಂತ ಜನಭರಿತ ರಾಷ್ಟ್ರಗಳು ನಮ್ಮಿಬ್ಬರದಾಗಿವೆ.
  •  ಪರಸ್ಪರರ ಸಂವೇದನೆಗಳನ್ನು ಗೌರವಿಸಬೇಕು. ನಮ್ಮ ಬಾಂಧವ್ಯದಲ್ಲಿ ಮತ್ತು ಗಡಿಯಲ್ಲಿ ಶಾಂತಿ ಮತ್ತು ಸ್ಥಿರತೆ ಅತ್ಯವಶ್ಯಕ.
  •  
  •  ನಾನು ವ್ಯಾಪಾರ ಅಸಮತೋಲನದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದೇನೆ. ನಾನು ಸುಲಭ ಮಾರುಕಟ್ಟೆ ಪ್ರವೇಶ ಮತ್ತು ಭಾರತದ ಕಂಪೆನಿಗಳಿಗೆ ಚೀನಾದಲ್ಲಿ ಬಂಡವಾಳ ಹೂಡಿಕೆಗೆ ಮನವಿ ಮಾಡುತ್ತೇನೆ. 
  •  ನಾವು ರೈಲ್ವೆ ಕ್ಷೇತ್ರದಲ್ಲಿ ಸಹಕಾರಕ್ಕೆ ನಿರ್ಧರಿಸಿದ್ದೇವೆ. ನಾಗರಿಕ ಪರಮಾಣ ಸಹಕಾರದ ಬಗ್ಗೆ ಮಾತುಕತೆ ನಡೆಸುತ್ತೇವೆ. ಮೂಲಸೌಲಭ್ಯ ಮತ್ತು ಉತ್ಪಾದನೆ ಕ್ಷೇತ್ರಗಳಲ್ಲಿ ಚೀನಾದ ಬಂಡವಾಳಕ್ಕೆ ಆಹ್ವಾನಿಸುತ್ತೇವೆ.
  • ಭಾರತದಲ್ಲಿ ಚೀನಾದ ಎರಡು ಕೈಗಾರಿಕೆ ಪಾರ್ಕ್‌ಗಳ ನಿರ್ಮಾಣಕ್ಕೆ ಖುಷಿಯಾಗಿದೆ.
  • ಐದು ವರ್ಷಗಳ ಆರ್ಥಿಕ ಮತ್ತು ವ್ಯಾಪಾರ ಅಭಿವೃದ್ಧಿ ಯೋಜನೆ ಪ್ರಮುಖ ಹೆಜ್ಜೆಯಾಗಿದೆ.
  • ಕೈಲಾಸ-ಮಾನಸಸರೋವರ ಯಾತ್ರೆಯನ್ನು ನಾಥು ಲಾದಿಂದ ಹೊಸ ಮಾರ್ಗಕ್ಕೆ ಚೀನಾ ಅಧ್ಯಕ್ಷರು ಒಪ್ಪಿಗೆ ಸೂಚಿಸಿರುವುದಕ್ಕೆ ಧನ್ಯವಾದ ಅರ್ಪಿಸುತ್ತೇನೆ.
  • ಭಯೋತ್ಪಾದನೆ ನಿಗ್ರಹಕ್ಕೆ ಸಹಕಾರ ವೃದ್ಧಿ.
     ಮುಂದಿನ ಪುಟ ನೋಡಿ
webdunia
ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್
 
  • ಭಾರತಕ್ಕೆ ಭೇಟಿ ನೀಡುತ್ತಿರುವುದು ಸಂತೋಷದ ವಿಷಯ
  •  ಭಾರತ ಮತ್ತು ಚೀನಾ ನಡುವೆ ಬಾಂಧವ್ಯ ನವೀಕರಣಕ್ಕೆ ಐತಿಹಾಸಿಕ ಅವಕಾಶ
  • ಈ ದೇಶದಲ್ಲಿನ ಸಾಧನೆ ಬಗ್ಗೆ ನನಗೆ ನಿಜವಾಗಲೂ ಸಂತೋಷವಾಗಿದೆ. ಪ್ರಧಾನಿ ಮೋದಿ ನಾಯಕತ್ವದಲ್ಲಿ ಭಾರತ ಹೆಚ್ಚಿನ ಸಾಧನೆ ಮಾಡುತ್ತದೆಂದು ಆಶಿಸುತ್ತೇನೆ.  
  • ಉನ್ನತ ಮಟ್ಟದಲ್ಲಿ ಸಹಕಾರ ವೃದ್ಧಿಗೆ ಆಳವಾದ ಮಾತುಕತೆ ನಡೆಸಿದ್ದೇವೆ.
  •  ಭಾರತ ಮತ್ತು ಚೀನಾ ರಾಷ್ಟ್ರೀಯ ಪುನಶ್ಚೇತನ ಪ್ರಕ್ರಿಯೆಯಲ್ಲಿದ್ದು, ಅಭಿವೃದ್ಧಿಯತ್ತ ಶ್ರಮಿಸುತ್ತದೆ.
  •  ಚೀನಾ ಮತ್ತು ಭಾರತ ಪ್ರದೇಶದ ಆರ್ಥಿಕ ಬೆಳವಣಿಗೆಗೆ ಅವಳಿ ಯಂತ್ರಗಳಂತೆ ಕಾರ್ಯನಿರ್ವಹಿಸುತ್ತದೆ. 
  •  ಚೀನಾ ಮತ್ತು ಭಾರತ ಒಂದೇ ಧ್ವನಿಯಲ್ಲಿ ಮಾತನಾಡಿದಾಗ ಇಡೀ ಜಗತ್ತು ಗಮನಿಸುತ್ತದೆ.
  • ಚೀನಾ 20 ಶತಕೋಟಿ ಡಾಲರ್ ಹಣವನ್ನು 5 ವರ್ಷಗಳಲ್ಲಿ ಹೂಡಿಕೆ ಮಾಡುತ್ತದೆ. 
 

Share this Story:

Follow Webdunia kannada