Select Your Language

Notifications

webdunia
webdunia
webdunia
webdunia

ನಮೋ ಟೀ ಸ್ಟಾಲ್‌ಗೆ ವಿರುದ್ಧವಾಗಿ ಶಿವಸೇನೆಯ ಶಿವಾ ವಡಾ ಪಾವ್

ನಮೋ ಟೀ ಸ್ಟಾಲ್‌ಗೆ ವಿರುದ್ಧವಾಗಿ ಶಿವಸೇನೆಯ ಶಿವಾ ವಡಾ ಪಾವ್
ಮುಂಬೈ , ಶನಿವಾರ, 28 ಮೇ 2016 (18:15 IST)
ಪ್ರಧಾನಿ ಮೋದಿಯವರ ನಮೋ ಟೀ ಸ್ಟಾಲ್‌ಗೆ ಪರ್ಯಾಯವಾಗಿ ಶಿವಸೇನೆ ಮುಂಬೈ ನಗರಾದ್ಯಂತ ಶಿವಾ ವಡಾ ಪಾವ್ ತಿಂಡಿ ತಿನಿಸುಗಳನ್ನು ಮಾರುಕಟ್ಟೆಗೆ ತಂದಿದೆ.
 
ಮುಂಬೈ ನಗರಸಭೆಯಲ್ಲಿ ಮಿತ್ರಪಕ್ಷವಾಗಿರುವ ಬಿಜೆಪಿ, ಮುಂಬೈ ನಗರದಲ್ಲಿ ನಮೋ ಟೀ ಸ್ಟಾಲ್‌ಗಳನ್ನು ತೆರೆಯುವುದಾಗಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಶಿವಸೇನೆ ಶಿವ ವಡಾ ಪಾವ್ ಆರಂಭಿಸಿದೆ.
 
ಕೌನ್ಸಿಲರ್ ಪ್ರಕಾಶ್ ಗಂಗಾಧರೆ ನಮೋ ಟೀ ಸ್ಟಾಲ್ ಆರಂಭಿಸುವ ಬಗ್ಗೆ ಪ್ರಸ್ತಾವನೆಯನ್ನಿಟ್ಟದ್ದರು. ನಾವು ಪಕ್ಷದ ಇತರ ಸದಸ್ಯರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನಕ್ಕೆ ಬರಲಾಗಿದೆ ಎಂದು ಬಿಜೆಪಿ ಮುಖಂಡ ಮನೋಜ್ ಕೋಟಾಕ್ ತಿಳಿಸಿದ್ದಾರೆ.
 
ಆದರೆ, ವಿಪಕ್ಷಗಳು ಬಿಜೆಪಿ ಮತ್ತು ಶಿವಸೇನೆಯ ತೀರ್ಮಾನದ ವಿರುದ್ಧ ವಾಗ್ದಾಳಿ ನಡೆಸಿವೆ.
 
ವಿಪಕ್ಷ ನಾಯಕರಾದ ಪ್ರವೀಣ್ ಚೆಡ್ಡಾ ಮಾತನಾಡಿ, ಇದೊಂದು ಹೊಸ ಡ್ರಾಮಾದಂತೆ. ವೈಯಕ್ತಿಕ ಹೆಸರಿನಲ್ಲಿ ಉಪಹಾರ ಗೃಹಗಳನ್ನು ಆರಂಭಿಸುವ ಬಗ್ಗೆ ನಗರಸಭೆಯಲ್ಲಿ ಯಾವುದೇ ಕಾನೂನಿಲ್ಲ ಎಂದು ತಿರುಗೇಟು ನೀಡಿದ್ದಾರೆ.

 
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಸಾಮೂಹಿಕ ಆತ್ಮಹತ್ಯೆಗೆ ಅನುಮತಿ ಕೋರಿ ಪೊಲೀಸರಿಂದ ಮನವಿ