Webdunia - Bharat's app for daily news and videos

Install App

ಖ್ಯಾತ ಪರಫ್ಯೂಮ್ ತಜ್ಞೆ ಮೋನಿಕಾ ಗುರ್ಡೆಯ ನಗ್ನ ಮೃತದೇಹ ಪತ್ತೆ

Webdunia
ಶುಕ್ರವಾರ, 7 ಅಕ್ಟೋಬರ್ 2016 (18:54 IST)
ನಗರದ ಸಂಗೋಲ್ಡಾ ಗ್ರಾಮದಲ್ಲಿ ಖ್ಯಾತ ಪರಫ್ಯೂಮ್ ತಜ್ಞೆ  ಮೋನಿಕಾ ಗುರ್ಡೆಯವರ ನಗ್ನ ಮೃತ ದೇಹ ಅವರ ನಿವಾಸದಲ್ಲಿ ಪತ್ತೆಯಾಗಿದ್ದು, ಅತ್ಯಾಚಾರವೆಸಗಿ ನಂತರ ಹತ್ಯೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ನಿನ್ನೆ ಮಧ್ಯ ರಾತ್ರಿ ಘಟನೆಯ ಬಗ್ಗೆ ಮಾಹಿತಿ ಲಭಿಸಿದ್ದು, ಘಟನಾ ಸ್ಥಳಕ್ಕೆ ತೆರಳಿದಾಗ ಮೋನಿಕಾ ನಗ್ನ ಮೃತದೇಹ ಪತ್ತೆಯಾಗಿದ್ದು, ಮನೆಯಲ್ಲಿ ದರೋಡೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿ ರಾಜೇಶ್ ಕುಮಾರ್ ತಿಳಿಸಿದ್ದಾರೆ. 
 
ನಗರದಲ್ಲಿ ಖ್ಯಾತ ಪರಫ್ಯೂಮ್ ತಜ್ಞೆಯಾಗಿದ್ದ ಮೋನಿಕಾ, ಪಣಜಿಯಿಂದ 10 ಕಿ.ಮೀ ದೂರದಲ್ಲಿರುವ ಸಂಗೋಲ್ಡಾ ಗ್ರಾಮದಲ್ಲಿ ಮೂರು ಬೆಡ್‌ರೂಮ್‌ ಫ್ಲ್ಯಾಟ್‌ನಲ್ಲಿ ವಾಸಿಸುತ್ತಿದ್ದರು. ಪೂರ್ವೊರಿಮ್ ಗ್ರಾಮದಿಂದ ಕಳೆದ ಜುಲೈ ತಿಂಗಳಲ್ಲಿ ಸಂಗೋಲ್ಡಾ ಗ್ರಾಮಕ್ಕೆ ಬಂದು ವಾಸವಾಗಿದ್ದರು ಎನ್ನಲಾಗಿದೆ. 
 
ಮೋನಿಕಾ ಕೈ ಮತ್ತು ಕಾಲುಗಳನ್ನು ಕಟ್ಟಿಹಾಕಲಾಗಿದೆ. ಮನೆಯಲ್ಲಿ ಮೋನಿಕಾ ಏಕಾಂಗಿಯಾಗಿ ವಾಸಿಸುತ್ತಿರುವುದರಿಂದ ಹಣ ಒಡುವೆಗಳ ಕಳ್ಳತನವಾದ ಮೌಲ್ಯವೆಷ್ಟು ಎನ್ನುವ ಬಗ್ಗೆ ಮಾಹಿತಿಯಿಲ್ಲ ಎಂದು ಹೇಳಿದ್ದಾರೆ.
 
ಫ್ಲ್ಯಾಟ್‌ನ ವಾಚ್‌ಮೆನ್‌ನ್ನು ವಿಚಾರಣೆಗೊಳಪಡಿಸಿದ್ದು, ಮನೆಯೊಳಗೆ ಯಾರು ನುಗ್ಗಿರುವ ಬಗ್ಗೆ ಮಾಹಿತಿಯಿಲ್ಲವೆಂದು ತಿಳಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.
 
ಮೃತದೇಹವನ್ನು ಪೋಸ್ಟ್‌ಮಾರ್ಟಂಗಾಗಿ ಕಳುಹಿಸಲಾಗಿದ್ದು, ಆಕೆಯ ಮೇಲೆ ಅತ್ಯಾಚಾರ ನಡೆದಿರುವ ಸಾಧ್ಯತೆಗಳಿವೆ. ಆಕೆಯ ಕತ್ತಿನ ಸುತ್ತ ಗಾಯದ ಗುರುತುಗಳಿರುವುದರಿಂದ ಕತ್ತು ಹಿಸುಕಿ ಸಾಯಿಸಲಾಗಿದೆ ಎನ್ನುವ ಸಂಶಯವಿದೆ. ಪೋಸ್ಟ್ ಮಾರ್ಟಂ‌ ನಂತರ ಸತ್ಯ ಸಂಗತಿ ಬಹಿರಂಗವಾಗಲಿದೆ ಎಂದು ತಿಳಿಸಿದ್ದಾರೆ.
 
ಪೊಲೀಸರು ಹಲವರ ವಿಚಾರಣೆ ನಡೆಸುತ್ತಿದ್ದು, ಆರೋಪಿಗಳ ಬಗ್ಗೆ ಯಾವುದೇ ಮಾಹಿತಿ ಲಭಿಸಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಣ್ವಸ್ತ್ರ ಬೆದರಿಕೆಗೆ ನಾವು ಜಗ್ಗಲ್ಲ, ಬಗ್ಗಲ್ಲ: ಭಾರತದ ತಾಕತ್ತು ಜಗತ್ತಿಗೆ ಗೊತ್ತಾಯಿತು ಎಂದ ಪ್ರಧಾನಿ ಮೋದಿ

PM Modi: ಪ್ರಧಾನಿ ಮೋದಿ ಭಾಷಣ ಕನ್ನಡದಲ್ಲಿ ಸಂಪೂರ್ಣವಾಗಿ ಇಲ್ಲಿದೆ ನೋಡಿ

ಭಾರತದ ಮೇಲಿನ ದಾಳಿಯನ್ನು ಸಂಭ್ರಮಿಸಿದ ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿ, ಪಾಕ್‌ ಸೇನೆಯನ್ನು ಬಣ್ಣಿಸಿದ್ದು ಹೀಗೇ

Operation Sindoor: 17 ನವಜಾತ ಹೆಣ್ಣು ಮಕ್ಕಳಿಗೆ ಸಿಂಧೂರ್‌ ನಾಮಕರಣ

ಪೌರ ಕಾರ್ಮಿಕರ ವಿಚಾರದಲ್ಲಿ ದಿಟ್ಟ ಹೆಜ್ಜೆಯಿಟ್ಟ ಸಿಎಂ ಸಿದ್ದರಾಮಯ್ಯ ಸರ್ಕಾರ

ಮುಂದಿನ ಸುದ್ದಿ