Webdunia - Bharat's app for daily news and videos

Install App

ರಾಜೀನಾಮೆ ಹಿಂದೆ ರಾಜಕಾರಣವಿಲ್ಲ: ಮೋದಿ ಭೇಟಿಯಾದ ಜಂಗ್

Webdunia
ಶುಕ್ರವಾರ, 23 ಡಿಸೆಂಬರ್ 2016 (15:49 IST)
ದೆಹಲಿಯ ಉಪ ರಾಜ್ಯಪಾಲ ಸ್ಥಾನಕ್ಕೆ  ನಿನ್ನೆಯಷ್ಟೇ ರಾಜೀನಾಮೆ ಇತ್ತ ನಜೀಬ್ ಜಂಗ್ ಇಂದು ಪ್ರಧಾನಿ ಮೋದಿ ಅವರನ್ನು ಭೇಟಿಯಾದರು. 
ವರದಿಗಳ ಪ್ರಕಾರ, ಮೋದಿ ಉಪರಾಜ್ಯಪಾಲ ಸ್ಥಾನದಲ್ಲಿ ಮುಂದುವರೆಯುವಂತೆ ಹೇಳಿದರು. ಆದರೆ ಜಂಗ್ ನಯವಾಗಿ ಪ್ರಸ್ತಾಪವನ್ನು ನಿರಾಕರಿಸಿದರು.
 
ತಾವು ಹೆಚ್ಚಿನ ಸಮಯವನ್ನು ಕುಟುಂಬದ ಜತೆ ಕಳೆಯಲು ಬಯಸುತ್ತೇನೆ ಮತ್ತು ಪುಸ್ತಕ ಬರೆಯುವುದಕ್ಕೆ ಸಮಯವನ್ನು ಮೀಸಲಾಗಿಡ ಬಯಸುತ್ತೇನೆ. ಹೀಗಾಗಿ ರಾಜೀನಾಮೆ ನೀಡುತ್ತಿದ್ದೇನೆ. ಇದರ ಹಿಂದೆ ಯಾವುದೇ ರಾಜಕೀಯವಿಲ್ಲ. ಇದು ನಾನು ಬಹಳ ಹಿಂದೆ ತೆಗೆದುಕೊಂಡ ನಿರ್ಧಾರ ಎಂದು ಜಂಗ್ ಪ್ರಧಾನಿ ಮೋದಿ ಬಳಿ ಹೇಳಿದ್ದಾಗಿ ಮಾಧ್ಯಮವೊಂದು ಸುದ್ದಿ ಪ್ರಕಟಿಸಿದೆ. 
 
ಒತ್ತಡಕ್ಕೊಳಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ಊಹಾಪೋಹಗಳನ್ನು ಅವರು ಅಲ್ಲಗಳೆದಿದ್ದಾರೆ.
 
ನನಗೆ 95 ವರ್ಷದ ತಾಯಿ ಇದ್ದಾಳೆ. ಅವಳಿಗೆ ಸಮಯವನ್ನು ನೀಡಬೇಕು. ನನ್ನ ಮಕ್ಕಳಿಗೆ, ಮೊಮ್ಮಕ್ಕಳಿಗೂ ಸಮಯವನ್ನು ಮೀಸಲಾಗಿಡಬೇಕು. ಈ ಹುದ್ದೆಯಲ್ಲಿ ನನಗೆ ರಜೆ ಪಡೆದುಕೊಳ್ಳಲಾಗುವುದಿಲ್ಲ ಎಂದಿದ್ದಾರೆ ಜಂಗ್
 
ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ನೇಮಿಸಲ್ಪಟ್ಟಿದ್ದ ನಾನು ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗ ರಾಜೀನಾಮೆ ನೀಡುವ ಪ್ರಸ್ತಾಪವನ್ನಿಟ್ಟಿದ್ದೆ. ಆದರೆ ಮೋದಿ ಮುಂದುವರೆಯುವಂತೆ ಹೇಳಿದ್ದರು. ನಾನು ರಾಜೀನಾಮೆ ಮಾತನಾಡಿದಾಗಲೆಲ್ಲ ಮೋದಿ ಮುಂದುವರೆಯಿರಿ ಎನ್ನುತ್ತಿದ್ದರು. ಆದರೆ ಈ ಬಾರಿ ನನ್ನದು ದೃಢ ನಿಶ್ಚಯ ಎಂದಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಧರ್ಮಸ್ಥಳ ಕೇಸ್: ಚಿನ್ನಯ್ಯನ ಹೊಸ ವಿಡಿಯೋ ಹರಿಯಬಿಟ್ಟ ಮಹೇಶ್ ಶೆಟ್ಟಿ ತಿಮರೋಡಿ

Arecanut Price: ಅಡಿಕೆ, ಕಾಳುಮೆಣಸು ಇಂದಿನ ಮಾರುಕಟ್ಟೆ ದರ ಹೇಗಿದೆ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ನೇಪಾಳದಂತೆ ಜೆನ್ ಜಿ ದಂಗೆಯೇಳಲು ಪ್ರೇರೇಪಿಸುತ್ತಿರುವ ರಾಹುಲ್ ಗಾಂಧಿ ಉದ್ದೇಶವೇನು

ಹಿಂದೂಗಳೇ ಟಾರ್ಗೆಟ್, ರಾಹುಲ್ ಗಾಂಧಿ ಲೆಕ್ಕದಲ್ಲಿ ಹಿಂದೂಗಳು ಎರಡನೆಯ ದರ್ಜೆಯವರಾ: ಆರ್ ಅಶೋಕ್

ಮುಂದಿನ ಸುದ್ದಿ
Show comments