Webdunia - Bharat's app for daily news and videos

Install App

ಉತ್ತರಪ್ರದೇಶದ ಬಿಜೆಪಿ ಗೆಲುವಿನ ಹಿಂದೆ ಇರುವುದು ಅಮಿತ್ ಶಾ, ಮೋದಿಯಲ್ಲ..!

Webdunia
ಭಾನುವಾರ, 12 ಮಾರ್ಚ್ 2017 (12:48 IST)
ಉತ್ತರಪ್ರದೇಶದಲ್ಲಿ ಬಿಜೆಪಿ ಇತಿಹಾಸ ಬರೆದಿದೆ. 37 ವರ್ಷಗಳ ಬಳಿಕ ಪಕ್ಷವೊಂದು 300ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ದೇಶಾದ್ಯಂತ ಕೆಳಿಬರುತ್ತಿರುವ ಒಂದೇ ಮಾತು ಇದು ಅಮಿತ್ ಶಾ ಮತ್ತು ಮೋದಿ ಮೇನಿಯಾ. ಆದರೆ, ಅಸಲಿ ಕಥೆಯೇ ಬೇರೆ.ಉತ್ತರಪ್ರದೇಶದಲ್ಲಿ ಬಿಜೆಪಿಯ ಗೆಲುವಿನ ಹಿಂದಿರುವ ಮಾಸ್ಟರ್ ಮೈಂಡ್ ಸುನಿಲ್ ಬನ್ಸಾಲ್.
 

ಜೈಪುರದ ಎಬಿವಿಪಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಸುನಿಲ್ ಬನ್ಸಾಲ್ ರನ್ನ 2014ರ ಚುನಾವಣೆಗೂ ಮುನ್ನ ಅಮಿತ್ ಶಾ ಸಹಾಯಕ್ಕೆ ಆರೆಸ್ಸೆಸ್ ಉತ್ತರಪ್ರದೇಶಕ್ಕೆ ಕಳುಹಿಸಿತ್ತು.ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದ ರಾಜಕೀಯದ ಅನುಭವ ಪಡೆದ ಬನ್ಸಾಲ್, ಈ ರಾಜ್ಯದ ಗಾಳಿಯಲ್ಲೂ ರಾಜಕೀಯ ಇದೆ ಎಂದು ಅರಿತಿದ್ದರು.

ಬಳಿಕ ಅಖಾಡಕ್ಕೀಳಿದ ಬನ್ಸಾಲ್ ಬೂತ್ ಮಟ್ಟದಿಂದ 1000 ಕಾರ್ಯಕರ್ತರನ್ನ ಬಿಜೆಪಿ ಕಚೇರಿಗೆ ನೇಮಿಸಿಕೊಂಡರು. ಕಚೇರಿಯಲ್ಲಿ ಕೇವಲ ಮೇಲ್ವರ್ಗದ ಜನರನ್ನ ತುಂಬಿಸಿಕೊಳ್ಳದೆ ಓಬಿಸಿ, ಎಂಬಿಸಿ ಮತ್ತು ದಲಿತರಿಗೆ ಅವಕಾಶ ಕೊಟ್ಟರು.

ಪಕ್ಷಕ್ಕಾಗಿ ದುಡಿಯುವ ಆಸಕ್ತಿ ಇರುವ ಉತ್ತರಪ್ರದೇಶದವರಾದ  150 ಕಾರ್ಯಕರ್ತರನ್ನ ಪಕ್ಷದ ದೈನಂದಿನ ಕಾರ್ಯಚಟುವಟಿಕೆ ನಿರ್ವಹಣೆಗೆ ನೇಮಿಸಿಕೊಂಡರು.

ಉತ್ತರಪ್ರದೇಶದಲ್ಲಿ ಬಿಜೆಪಿ 2 ಕೋಟಿ ಸದಸ್ಯರನ್ನ ನೋಂದಣಿ ಮಾಡಿಕೊಂಡ ಬಳಿಕ ರಾಜ್ಯದ 1.47 ಲಕ್ಷ ಬೂತ್`ಗಳನ್ನೊಳಗೊಂಡ ಬೂತ್ ಕಮಿಟಿಯನ್ನ ರಚಿಸಿದರು. ಅದರಲ್ಲಿ ಸುಮಾರು 1.08 ಲಕ್ಷದಷ್ಟು ಬೂತ್`ಗಳಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಲಾಯ್ತು. ಬಿಜೆಪಿಗೆ ಇದ್ದ ನಗರದ ಪಕ್ಷ ಎಂಬ ಹಣೆಪಟ್ಟಿ ತೆಗೆದು ಅಭಿವೃದ್ಧಿ ಮರೀಚಿಕೆಯಾಗಿರುವ ಉತ್ತರಪ್ರದೇಶದ ಹಳ್ಳಿಗಾಡಿನ ಜನರ ಮನವೊಲಿಸುವಲ್ಲಿ ಯಶಸ್ವಿಯಾದರು. ಪಂಚಾಯ್ತಿಗಳಲ್ಲೂ ಸ್ಪರ್ಧಿಸಿ ಪಕ್ಷದ ಕಾರ್ಯಕರ್ತರು ಅಧಿಕಾರಕ್ಕೆ ಬಂದರು. ಬಳಿಕ ಯುವಕರು, ದಲಿತರ ಮನೆ ಮನೆಗೆ ತೆರಳಿ ಮೂಲಮಟ್ಟದಿಂದ ಪಕ್ಷದ ಬಲವರ್ಧನೆ ಮಾಡಿದರು. ಸೋಶಿಯಲ್ ಮೀಡಿಯಾ ಮೂಲಕ ರಾಜ್ಯದ ವಿವಿಧೆಡೆ ಬಿಜೆಪಿ ಕಾರ್ಯಕ್ರಮಗಳ ಮೇಲ್ವಿಚಾರಣೆ ನಡೆಸಿದರು.

6 ತಿಂಗಳ ಹಿಂದೆಯೇ ಉತ್ತರಪ್ರದೇಶದಲ್ಲಿ ಸರ್ವೆ ನಡೆಸಿ ಪ್ರತೀ ಕ್ಷೇತ್ರದಲ್ಲಿ ಜನಪ್ರಿಯ ಅಭ್ಯರ್ಥಿಯನ್ನ ಗುರ್ತಿಸಿದ್ದರು. ಎಷ್ಟೇ ವಿರೋಧ ವ್ಯಕ್ತವಾದರೂ ಅದೇ ಅಭ್ಯರ್ಥಿಗೆ ಬನ್ಸಾಲ್ ಟಿಕೆಟ್ ಕೊಡಿಸಿದ್ದರು.

ಬನ್ಸಾಲ್ ಮೇಲೆ ನಂಬಿಕೆ ಇಟ್ಟಿದ್ದ ಅಮಿತ್ ಶಾ ಸಗ ಸೊಲ್ಲೆತ್ತದೆ ಬೆಂಬಲ ನನೀಡಿದ್ದರು. ಇದರ ಪರಿಣಾಮವೇ ಬಿಜೆಪಿ ಉತ್ತರಪ್ರದೇಶದ ಆಡಳಿತದ ಚುಕ್ಕಾಣಿ ಹಿಡಿದಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments