Webdunia - Bharat's app for daily news and videos

Install App

ನನ್ನ ತಾಯಿ ಇಂದ್ರಾಣಿ ಮುಖರ್ಜಿಯಂತೆ, ಹಲವರೊಂದಿಗೆ ಸೆಕ್ಸ್‌ನಲ್ಲಿ ಭಾಗಿಯಾಗುತ್ತಾಳೆ: ವಿದ್ಯಾರ್ಥಿ ಪತ್ರ

Webdunia
ಗುರುವಾರ, 3 ಸೆಪ್ಟಂಬರ್ 2015 (14:56 IST)
ನಗರದ ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ತಾನು ಬರೆದ ಪತ್ರವನ್ನು ಬೇರೆ ವಿದ್ಯಾರ್ಥಿಗಳಿಗೆ ಕೊಡುವ ಸಂದರ್ಭದಲ್ಲಿ ಶಿಕ್ಷಕಿಯೊಬ್ಬರು ರೆಡ್‌ ಹ್ಯಾಂಡ್‌ ಆಗಿ ಹಿಡಿದಿದ್ದಾರೆ. ಪತ್ರವನ್ನು ಓದಿದ ಶಿಕ್ಷಕಿಗೆ ಭೂಮಿಯೇ ಕುಸಿದಂತಾಗಿದೆ.
 
ನಾನು ಅನೈತಿಕ ಸಂಬಂಧಕ್ಕೆ ಹುಟ್ಟಿದ ಮಗು, ನನ್ನ ತಾಯಿ ಇಂದ್ರಾಣಿ ಮುಖರ್ಜಿಯಂತೆ ಹಲವು ಪುರುಷರೊಂದಿಗೆ ಸೆಕ್ಸ್‌ ಸುಖ ಅನುಭವಿಸಲು ಬಯಸುತ್ತಾಳೆ ಎಂದು ವಿದ್ಯಾರ್ಥಿ ಪತ್ರದಲ್ಲಿ ಬರೆದಿರುವುದು ಶಿಕ್ಷಕಿಗೆ ಕಂಡು ಬಂದಿದೆ.
 
ವಿದ್ಯಾರ್ಥಿ ಬರೆದ ಪತ್ರದ ವಿಷಯವನ್ನು ಪ್ರಾಂಶುಪಾಲರ ಗಮನಕ್ಕೆ ಶಿಕ್ಷಕಿ ತಂದಿದ್ದಾರೆ, ಪ್ರಾಂಶುಪಾಲರು ವಿದ್ಯಾರ್ಥಿಯ ಪೋಷಕರಿಗೆ ಕರೆ ಮಾಡಿ, ತಮ್ಮನ್ನು ಭೇಟಿಯಾಗುವಂತೆ ಕೋರಿದ್ದಾರೆ. ವಿದ್ಯಾರ್ಥಿ ಬರೆದ ಪತ್ರದ ರಹಸ್ಯವನ್ನು ಮುಚ್ಚಿಡಲು ಶಾಲಾ ಅಡಳಿತ ಮಂಡಳಿ ಪ್ರಯತ್ನಿಸುತ್ತಿದೆ ಎನ್ನಲಾಗಿದೆ.
 
ವಿದ್ಯಾರ್ಥಿಗಳು ಖಾಸಗಿ ಚಾನೆಲ್‌ಗಳನ್ನು ನೋಡುವುದರಿಂದ ಅವರ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎನ್ನುವುದಕ್ಕೆ ಈ ಘಟನೆಯ ಸಾಕ್ಷಿಯಾಗಿದೆ ಎಂದು ಪ್ರಾಂಶುಪಾಲರು ಹೇಳಿದ್ದಾರೆ.
 
ಖಾಸಗಿ ಚಾನೆಲ್‌ಗಳನ್ನು ವಿದ್ಯಾರ್ಥಿಗಳು ನೋಡಬೇಡಿ ಎಂದು ತಾಕೀತು ಮಾಡಲು ಸಾಧ್ಯವಿಲ್ಲ. ಆದರೆ, ಅಪರಾಧದ ವಿಷಯಗಳ ಬಗ್ಗೆ ಮಾಧ್ಯಮಗಳು ವೈಭವಿಕರಿಸುತ್ತಿರುವುದು ಹದಿಹರೆಯದ ಮತ್ತು ಅಪ್ರಾಪ್ತರ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎನ್ನುವುದಕ್ಕೆ ಉದಾಹರಣೆಯಾಗಿದೆ ಎಂದು ತಿಳಿಸಿದ್ದಾರೆ. 
 
ಮಾಧ್ಯಮಗಳು ತಮ್ಮ ಎಲ್ಲಾ ಇತಿಮಿತಿಗಳನ್ನು ಮೀರಿವೆ ಎನ್ನುವುದಕ್ಕೆ ಶೀನಾ ಬೋರಾ ಪ್ರಕರಣ ಅತ್ಯಂತ ಸೂಕ್ತ ಉದಾಹರಣೆಯಾಗಿದೆ ಎಂದು ಹಿರಿಯ ವಕೀಲ ಮತ್ತು ಮಕ್ಕಳ ಹಕ್ಕುಗಳ ಕಾರ್ಯಕರ್ತ ಅಶೋಕ್ ಅಗರ್‌ವಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ