Select Your Language

Notifications

webdunia
webdunia
webdunia
webdunia

ನನ್ನದು ತಕ್ಕಮಟ್ಟಿನ ಸೌಂದರ್ಯ, ನನ್ನ ಪತಿಯ ಚಿತ್ತ ಸೌಂದರ್ಯವತಿಯರತ್ತ: ಆಪ್ ಸಚಿವರ ಪತ್ನಿ

ನನ್ನದು ತಕ್ಕಮಟ್ಟಿನ ಸೌಂದರ್ಯ, ನನ್ನ ಪತಿಯ ಚಿತ್ತ ಸೌಂದರ್ಯವತಿಯರತ್ತ:  ಆಪ್ ಸಚಿವರ ಪತ್ನಿ
ನವದೆಹಲಿ , ಮಂಗಳವಾರ, 4 ಆಗಸ್ಟ್ 2015 (17:02 IST)
ತಾವು ವಿಧಾನಸಭೆಯಲ್ಲಿ ಮಹಿಳೆಯರಿಗೆ ಸಂಬಂಧಿಸಿದಂತೆ ಹೇಳಿದ ಮಾತುಗಳಿಂದ ಎಲ್ಲ ಕಡೆಗಳಿಂದ ಟೀಕೆಗಳನ್ನು ಕೇಳಿ ಸುಸ್ತಾಗಿರುವ ಆಪ್ ಸಚಿವ ಸೋಮನಾಥ್ ಭಾರತಿ, ಈಗ ಅವರ ಸ್ವಂತ ಪತ್ನಿಯ ಮಾತಿನೇಟಿನಿಂದ ಇರಿಸು ಮುರಿಸಿಗೆ ಒಳಗಾಗಿದ್ದಾರೆ. 

ಸೋಮವಾರ ದೆಹಲಿ ವಿಧಾನಸಭೆಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳ ಬಗ್ಗೆ ಮಾತು ನಡೆಯುತ್ತಿರುವಾಗ ಭಾರತಿ, 'ದೆಹಲಿ ಪೊಲೀಸ್ ನಮ್ಮ ಆಧೀನಕ್ಕೆ ಬಂದರೆ ಸುಂದರ ಮಹಿಳೆಯರು ಮಧ್ಯರಾತ್ರಿ ಸಹ ನಿರ್ಭೀಡೆಯಿಂದ ಓಡಾಡುವ ರೀತಿಯಲ್ಲಿ ಮಾಡುತ್ತೇವೆ', ಎಂದು ಹೇಳಿದ್ದರು. 
 
ಅವರ ಈ ಹೇಳಿಕೆಗೆ ಕೇವಲ ರಾಜಕೀಯ ವಲಯದಲ್ಲಷ್ಟೇ ಅಲ್ಲದೆ ಅವರ ಮನೆಯಿಂದ ಕೂಡ ವಿರೋಧ ವ್ಯಕ್ತವಾಗುತ್ತಿದೆ. 
 
'ತಮ್ಮ ಹೇಳಿಕೆಗೆ ಎಷ್ಟೇ ಸ್ಪಷ್ಟನೆಗಳನ್ನು ನೀಡಲು ಭಾರತಿ ಪ್ರಯತ್ನಿಸಿದರೂ ಅವೆಲ್ಲವೂ ವಿಫಲವಾಗಿದ್ದು, ತನ್ನ ಬಗ್ಗೆ ಪತಿಗೆ ಕಾಳಜಿ ಇಲ್ಲ,' ಎಂದು ಆಪ್ ಶಾಸಕನ ಪತ್ನಿ ಹೇಳಿದ್ದಾಳೆ. 
 
"ನಾನು ತಕ್ಕ ಮಟ್ಟಿಗೆ ಅನ್ನುವಂತಹ ಸೌಂದರ್ಯವನ್ನು ಹೊಂದಿದ್ದೇನೆ. ಅದಕ್ಕಾಗಿ ಅವರು ನನ್ನ ಜತೆ ಕೆಟ್ಟದ್ದಾಗಿ ನಡೆದುಕೊಂಡರು ಎನ್ನಿಸುತ್ತದೆ", ಎಂದು ಲಿಪಿಕಾ ಭಾರತಿ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. 
 
"ಅವರು ನನ್ನ ಬಗ್ಗೆ ಕಾಳಜಿಯನ್ನು ಹೊಂದಿಲ್ಲ. ಅವರ ಕಾಳಜಿ ಕೇವಲ ಸುಂದರವಾದ ಮಹಿಳೆಯರ ಭದ್ರತೆಯತ್ತ", ಎಂದು ಲಿಪಿಕಾ ಹೇಳಿದ್ದರು.
 
ಕೆಲ ದಿನಗಳ ಹಿಂದೆ ಲಿಪಿಕಾ ಮಿತ್ರ ಪತಿಯ ವಿರುದ್ಧ ಕೌಟುಂಬಿಕ ದೌರ್ಜನ್ಯದ ಆರೋಪವನ್ನು ಮಾಡಿದ್ದರು. 

Share this Story:

Follow Webdunia kannada