Webdunia - Bharat's app for daily news and videos

Install App

ಜಗತ್ತಿನ ಅತಿ ದೊಡ್ಡ ಹಿಂದೂ ದೇವಾಲಯ ನಿರ್ಮಾಣಕ್ಕೆ ಮುಸ್ಲಿಂ‌ಮರಿಂದ ಭೂಮಿ ದಾನ

Webdunia
ಬುಧವಾರ, 20 ಮೇ 2015 (15:04 IST)
ಬಿಹಾರದಲ್ಲಿ ನಿರ್ಮಾಣವಾಗುತ್ತಿರುವ ವಿಶ್ವದ ಅತಿದೊಡ್ಡ ಹಿಂದೂ ದೇವಾಲಯವೊಂದರ ನಿರ್ಮಾಣಕ್ಕಾಗಿ ಭೂದಾನ ಮಾಡುವ ಮೂಲಕ ಬಿಹಾರದ ಮುಸ್ಲಿಮರು ಧರ್ಮ ಸಹಿಷ್ಣತೆ ಭಾವವನ್ನು ಮೆರೆದಿದ್ದಾರೆ. ಒಮ್ಮೆಲೆ 20,000 ಜನರು ಕುಳಿತುಕೊಳ್ಳಬಹುದಾದ  ಸಾಮರ್ಥ್ಯವನ್ನು ಈ ದೇವಸ್ಥಾನ ಹೊಂದಲಿದೆ. 

"ಕೆಲವರು ಭೂಮಿಯನ್ನು ದಾನ ಮಾಡಿದರೆ ಇನ್ನೂ ಕೆಲವರು ಕಡಿಮೆ ಬೆಲೆಯಲ್ಲಿ ಜಮೀನು ನೀಡಿದ್ದಾರೆ. ಸ್ಥಳೀಯ ಮುಸ್ಲಿಮರ ಸಹಕಾರದ ಹೊರತಾಗಿ ಈ  ಮಹಾತ್ವಾಕಾಂಕ್ಷಿ ಯೋಜನೆಯನ್ನು ಸಾಕಾರಗೊಳಿಸುವುದು ಸುಲಭವಾಗಿರಲಿಲ್ಲ", ಎಂದು ದೇವಸ್ಥಾನ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡಿರುವ ಮಹಾವೀರ್ ಮಂದಿರ ಟ್ರಸ್ಟ್ ಕಾರ್ಯದರ್ಶಿ, ಮಾಜಿ ಐಪಿಎಸ್ ಅಧಿಕಾರಿ ಆಚಾರ್ಯ ಕಿಶೋರ್ ಕುನಾಲ್ ತಿಳಿಸಿದ್ದಾರೆ. 
 
ಮುಂಬೈ ಮೂಲದ ವಲ್ಷಾ ಕಂಪೆನಿ ನಿರ್ಮಾಣದ ಉಸ್ತುವಾರಿಯನ್ನು ವಹಿಸಿಕೊಂಡಿದ್ದು, ದೇವಾಲಯ 2,500 ಅಡಿ ಉದ್ದ, 1,296 ಅಡಿ ಅಗಲ, 379 ಅಡಿ ಎತ್ತರವಿರಲಿದೆ. 
 
"ಸುಮಾರು 3 ಡಜನ್‍ನಷ್ಟು ಮುಸ್ಲಿಂ ಕುಟುಂಬಗಳು ಯೋಜಿತ ವಿರಾಟ ರಾಮಾಯಣ್ ಮಂದಿರ ನಿವೇಶನದ ನಡುವೆ ತಮ್ಮ ಹಕ್ಕಿನ ಭೂಮಿ ಹೊಂದಿದ್ದವು. ಇನ್ನೂ ಕೆಲವು ಕುಟುಂಬಗಳು ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಪ್ರಧಾನ ರಸ್ತೆಯ ಇಕ್ಕೆಲಗಳಲ್ಲಿ ಜಮೀನು ಹೊಂದಿದ್ದವು. ಹಿಂದೂಗಳು ತಮ್ಮ ಸ್ವಧರ್ಮದ ಕಾರ್ಯಕ್ಕೆ ಸಂಬಂಧಿಸಿದಂತೆ ಉದಾರತೆಯನ್ನು ತೋರುವುದು ಸಹಜ. ಆದರೆ ನಮಗೆ ಭೂಮಿಯ ಅಗತ್ಯವಿದ್ದರಿಂದ ಈ ಕುರಿತು ಮುಸ್ಲಿಂ ಕುಟುಂಬದವರಲ್ಲಿ ಪ್ರಸ್ತಾಪಿಸಿದೆವು. ಆಗ  ತುಂಬು ಮನಸ್ಸಿನಿಂದ ಇದಕ್ಕೊಪ್ಪಿದ ಅವರು ಧಾರಾಳತೆಯನ್ನು ತೋರಿದರು. ಪೂರ್ವ ಚಂಪಾರಣ್ಯ ಜಿಲ್ಲೆಯ ಕೇಸರಿಯಾದ ಸಮೀಪದ ಜಾನಕಿ ನಗರದಲ್ಲಿ ಈ ದೇವಸ್ಥಾನವನ್ನು ಕಟ್ಟಲಾಗುತ್ತಿದ್ದು ಜೂನ್‍ನಲ್ಲಿ ನಿರ್ಮಾಣ ಕಾರ್ಯ ಪ್ರಾರಂಭವಾಗಲಿದೆ. ಈ ಸ್ಥಳ ರಾಜ್ಯ ರಾಜಧಾನಿಯಾದ ಪಾಟ್ನಾದಿಂದ 150 ಕಿಲೋಮೀಟರ್ ದೂರದಲ್ಲಿದೆ", ಎಂದು ಆಚಾರ್ಯ್‌ರವರು ತಿಳಿಸಿದ್ದಾರೆ. 
 
ಒಟ್ಟು 200 ಎಕರೆ ಜಾಗದಲ್ಲಿ ದೇವಾಲಯ ನಿರ್ಮಾಣವಾಗಲಿದ್ದು, 50 ಎಕರೆ ಜಾಗವನ್ನು ಹಿಂದೂ ಮತ್ತು ಮುಸ್ಲಿಮರು ದಾನವಾಗಿ ನೀಡಿದ್ದಾರೆ, ಉಳಿದ ಜಾಗವನ್ನು ಟ್ರಸ್ಟ್ ಹಣ ನೀಡಿ ಖರೀದಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. 
 
ಗಯಾದಲ್ಲಿ ದುರ್ಗಾ ದೇವಸ್ಥಾನ ನಿರ್ಮಾಣವಾಗುವಾಗ ಮತ್ತು ಬೆಗುಸರೈ ಜಿಲ್ಲೆಯಲ್ಲಿ ಶಿವ ದೇವಸ್ಥಾನ ನಿರ್ಮಾಣವಾಗುವ ಸಂದರ್ಭದಲ್ಲಿ ಕೂಡ ಮುಸ್ಲಿಮ್ ಸಮುದಾಯದವರು ಉದಾರತೆಯನ್ನು ತೋರಿದ್ದರು. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments