Select Your Language

Notifications

webdunia
webdunia
webdunia
webdunia

ಆಕಳನ್ನು ಉಳಿಸಲು 30 ಅಡಿ ಆಳದ ಬಾವಿಗೆ ಹಾರಿದ ಮುಸ್ಲಿಂ ಯುವಕ

ಆಕಳನ್ನು ಉಳಿಸಲು 30 ಅಡಿ ಆಳದ ಬಾವಿಗೆ ಹಾರಿದ ಮುಸ್ಲಿಂ ಯುವಕ
ಲಕ್ನೋ , ಸೋಮವಾರ, 5 ಅಕ್ಟೋಬರ್ 2015 (15:02 IST)
ದೇಶಾದ್ಯಂತ ಗೋಮಾಂಸ ವಿವಾದ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಮಧ್ಯೆಯೇ ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬ ತನ್ನ ಜೀವದ ಹಂಗು ತೊರೆದು ಬಾವಿಗೆ ಬಿದ್ದ ಆಕಳನ್ನು ರಕ್ಷಿಸಿದ ಘಟನೆ ವರದಿಯಾಗಿದೆ.
 
ಅಕಸ್ಮಿಕವಾಗಿ ಬಾವಿಗೆ ಬಿದ್ದ ಆಕಳನ್ನು 20 ವರ್ಷ ವಯಸ್ಸಿನ ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬ ಬದುಕುಳಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.
 
ಬಾವಿಯೊಳಗೆ ಬಿದ್ದ ಆಕಳನ್ನು ನೋಡಲು ನೂರಾರು ಜನರು ಬಾವಿಯ ದಡದ ಮೇಲೆ ನಿಂತು ನೋಡುತ್ತಿದ್ದರು. ಆದರೆ, ಆಕಳನ್ನು ಹೇಗಾದರು ಮಾಡಿ ಬದುಕಿಸಬೇಕು ಎನ್ನುವ ಉದ್ದೇಶದಿಂದ ನಾನು ಬಾವಿಗೆ ಹಾರಿ, ಆಕಳನ್ನು ಹಿಡಿದು ಕ್ರೇನ್ ಸಹಾಯದಿಂದ  ಮೇಲಕ್ಕೇತ್ತುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಮೊಹಮ್ಮದ್ ಝಾಕಿ ತಿಳಿಸಿದ್ದಾರೆ. 
 
ಆಕಳು ಜೀವನ್ಮರಣದ ಹೋರಾಟದಲ್ಲಿರುವುದನ್ನು ನೋಡಿ, ನಾನು ನನ್ನ ಜೀವವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಆಕಳು ನನಗೆ ಎರಡು ಬಾರಿ ಒದ್ದರು ನಾನು ಬಿಡಲಿಲ್ಲ ಎಂದು ಹೇಳಿದ್ದಾರೆ. 
 
ಜನರು ಮೊದಲು ಆಕಳನ್ನು ಮೇಲೆ ಕಳುಹಿಸುವಂತೆ ಒತ್ತಾಯಿಸುತ್ತಿದ್ದರು. ಆದರೆ, ನಾನು ಆಕಳೊಂದಿಗೆ ಹೋಗಲು ತೀರ್ಮಾನಿಸಿದೆ. ಅದರಂತೆ, ಕ್ರೇನ್ ಸಹಾಯದಿಂದ ಎತ್ತುವಾಗ ಆಕಳು ಸಮತೋಲನ ತಪ್ಪಿ ನನ್ನ ಮೇಲೆ ಬಿದ್ದಿತು ಎಂದು ಮೊಹಮ್ಮದ್ ತಿಳಿಸಿದ್ದಾರೆ.  

Share this Story:

Follow Webdunia kannada