Webdunia - Bharat's app for daily news and videos

Install App

ಗಾಯತ್ರಿ ಮಂತ್ರ ಪಠಿಸುತ್ತಿರುವ ಮುಸ್ಲಿಂ ಮಕ್ಕಳು...

Webdunia
ಸೋಮವಾರ, 12 ಜನವರಿ 2015 (10:52 IST)
ಉತ್ತರ ಪ್ರದೇಶದ ರಾಮಪುರ ಜಿಲ್ಲೆಯಲ್ಲಿ ಮದರಸಾಗಳಲ್ಲಿ ಹಿಂದೂ ವಿದ್ಯಾರ್ಥಿಗಳು ಉರ್ದುವನ್ನು ಕಲಿಯುತ್ತಿದ್ದಾರೆ. ಹಾಗೆಯೇ  ರಾಷ್ಟ್ರೀಯ ಸ್ವಯಂ ಸೇವಕ ಸಂಘ ಅದೇ ಜಿಲ್ಲೆಯಲ್ಲಿ ನಡೆಸುತ್ತಿರುವ ಶಾಲೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ಗಾಯತ್ರಿ ಮಂತ್ರವನ್ನು ಪಠಿಸುತ್ತಿದ್ದಾರೆ. ಈ ಶಾಲೆಯಲ್ಲಿನ ಶಿಕ್ಷಣದ ಗುಣಮಟ್ಟ ಬಹಳ ಉತ್ತಮವಾಗಿರುವುದರಿಂದ ಧರ್ಮ, ಭಾಷೆಯ ಗೋಡೆಗಳನ್ನು ದಾಟಿ ಮುಸ್ಲಿಂ ಬಾಂಧವರು ತಮ್ಮ ಮಕ್ಕಳನ್ನು ಈ ಶಾಲೆಗೆ ಕಳುಹಿಸುತ್ತಿದ್ದಾರೆ. 
ನಗರದ ಮುಹಲ್ಲಾ ಅಸ್ತಬಲ್ ರಸ್ತೆಯಲ್ಲಿರುವ  ಮದರಸಾ ಜಮೀ ಅತುಲ ಅಂಸಾರನಲ್ಲಿ 11 ಜನ ಹಿಂದೂ ಮಕ್ಕಳು ಉರ್ದುವನ್ನು ಕಲಿಯುತ್ತಿದ್ದಾರೆ. ಸ್ವಾರ್ ರಸ್ತೆಯಲ್ಲಿರುವ ಸರಸ್ವತಿ ವಿದ್ಯಾ ಮಂದಿರದಲ್ಲಿ  140 ಮುಸ್ಲಿಂ ಮಕ್ಕಳು ಹಿಂದೂ ಸಂಸ್ಕಾರವನ್ನು ತಿಳಿದುಕೊಳ್ಳುತ್ತಿದ್ದಾರೆ. ಆರ್‌ಎಸ್ಎಸ್  ನಡೆಸುವ ಶಾಲೆಗಳಲ್ಲಿ  ದೇಶಿಯ ಸಂಸ್ಕೃತಿ, ಸಂಸ್ಕಾರಗಳ ಬೋಧನೆ ನಡೆಯುವುದು ಸಾಮಾನ್ಯ. ಹಾಗೆಯೇ ಇಲ್ಲಿ ಸಹ ಇದನ್ನು ಕಾಣಬಹುದು.  
 
ಈ ಶಾಲೆಯಲ್ಲಿ ಗಾಯತ್ರಿ ಮಂತ್ರ , ವಂದೇ ಮಾತರಮ್, ಶಾಂತಿಯ ಪಾಠ, ಏಕಾತ್ಮತೆಯ ಮಂತ್ರ, ಸರಸ್ವತಿ ವಂದನೆಗಳನ್ನು ಹಾಡಬೇಕಾಗುತ್ತದೆ. ಮಧ್ಯಾಹ್ನ ಊಟದ ಸಮಯದಲ್ಲಿ  ಭೋಜನ ಮಂತ್ರವನ್ನು ಸಹ ಹೇಳಬೇಕಾಗುತ್ತದೆ. ಇದೆಲ್ಲವನ್ನು ಮುಸ್ಲಿಂ ಮಕ್ಕಳು ಸಹ ಮಾಡುತ್ತಾರೆ. ಇದು ಅವರ ಪಾಲಕರಿಗೆ ಸಹ ತಿಳಿದಿದೆ. ಅದನ್ನು ಅವರು ವಿರೋಧಿಯುತ್ತಿಲ್ಲ. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುತ್ತದೆ ಎಂಬ ಸಮಾಧಾನ ಅವರದು. ಭಾಷೆ, ಧರ್ಮಗಳ ಚೌಕಟ್ಟು ಅವರಿಗೆ ಇಲ್ಲಿ ಅರ್ಥಹೀನವೆನಿಸಿದೆ. ಕಾರಣ ಇಲ್ಲಿ ಓದಿರುವ ಮಕ್ಕಳು ಇಂದು ಅತ್ಯುನ್ನತ ಹುದ್ದೆಯಲ್ಲಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments