Select Your Language

Notifications

webdunia
webdunia
webdunia
webdunia

10 ವರ್ಷಗಳಿಂದ ಹೆತ್ತವರನ್ನು ಹೊತ್ತೊಯ್ಯುತ್ತಿರುವ ಆಧುನಿಕ ಶ್ರವಣಕುಮಾರ

10 ವರ್ಷಗಳಿಂದ ಹೆತ್ತವರನ್ನು ಹೊತ್ತೊಯ್ಯುತ್ತಿರುವ ಆಧುನಿಕ ಶ್ರವಣಕುಮಾರ
ನವದೆಹಲಿ , ಗುರುವಾರ, 24 ಜುಲೈ 2014 (16:09 IST)
ತ್ರೇತಾಯುಗದಲ್ಲಿ ಶ್ರವಣಕುಮಾರ  ತನ್ನ ವೃದ್ಧ  ತಂದೆತಾಯಿಗಳನ್ನು ಎರಡು ಬುಟ್ಟಿಗಳಲ್ಲಿಟ್ಟುಕೊಂಡು ತೀರ್ಥಯಾತ್ರೆಗೆ ಕೊಂಡೊಯ್ದ ಕತೆಯನ್ನು ಕೇಳಿಯೇ ಇರುತ್ತೀರಿ. ಇದು ಆಧುನಿಕ ಶ್ರವಣಕುಮಾರನ ನೈಜ ಕತೆ. ದೆಹಲಿಯ ಮುಸ್ಲಿಂ ಯುವಕನೊಬ್ಬ  ತನ್ನ ತಂದೆತಾಯಿಗಳನ್ನು ಪಲ್ಲಕ್ಕಿಯಲ್ಲಿಟ್ಟುಕೊಂಡು  ರೂರ್‌ಕಿ ನಗರವನ್ನು ತಲುಪಿದ್ದು ಜನರ ಕುತೂಹಲಕ್ಕೆ ಕಾರಣವಾಗಿದೆ. 

ತನ್ನ 14 ನೇ ವಯಸ್ಸಿನಲ್ಲಿಯೇ ಮಹಮ್ಮದ್ ಖಾನ್,  ಬಹುದೂರದ ಕನ್ವರ್ ಯಾತ್ರೆಯನ್ನು ನಡೆದುಕೊಂಡು ಹೋಗಲು ಸಮರ್ಥರಾಗಿರದ ತನ್ನ ಹೆತ್ತವರನ್ನು  ದೆಹಲಿಯಿಂದ ಹರಿದ್ವಾರದವರೆಗೆ ಹೆಗಲ ಮೇಲೆರಿಸಿಕೊಂಡು ಹೋಗಿದ್ದ.
 
ಕಳೆದ ಹತ್ತು ವರ್ಷಗಳಿಂದ ತನ್ನ ತಂದೆ ತಾಯಿಗಳನ್ನು ಹರಿದ್ವಾರಕ್ಕೆ ಹೊತ್ತೊಯ್ಯುತ್ತಿರುವುದು ಅವರ ಬಗೆಗಿನ ಆತನ ಪ್ರೀತಿ ಮತ್ತು ಭಕ್ತಿಯನ್ನು ತೋರಿಸುತ್ತದೆ.  ಅವರನ್ನು ಹೊತ್ತುಕೊಂಡು ಹೋಗಲು ಅನುಕೂಲವಾಗುವಂತೆ ಆತ ಪಲ್ಲಕ್ಕಿಯೊಂದನ್ನು ತಯಾರಿಸಿಕೊಂಡಿದ್ದಾನೆ. 
 
ಹರಿದ್ವಾರದಲ್ಲಿ ಪವಿತ್ರ ಗಂಗಾ ನೀರನ್ನು ತೆಗೆದುಕೊಂಡ ನಂತರ ಆತ ಈಗ ರೂರ್‌ಕಿಯನ್ನು ತಲುಪಿದ್ದಾನೆ. ಅಲ್ಲಿ ಆತನ ಭಕ್ತಿ ಮತ್ತು ಪ್ರೀತಿಯನ್ನು ನೋಡಿದ ಜನ ಜೇನುನೊಣದಂತೆ ಆತನನ್ನು ಮುತ್ತಿಕ್ಕಿ ಕೊಂಡಿದ್ದಾರೆ. 

Share this Story:

Follow Webdunia kannada