Select Your Language

Notifications

webdunia
webdunia
webdunia
webdunia

ನೃತ್ಯ ಶಿಕ್ಷಕಿಯ ಮೇಲೆ ಅತ್ಯಾಚಾರ; ಅಪರಾಧಿ ವಾಚ್‌ಮೆನ್‌ಗೆ 10 ವರ್ಷ ಸೆರೆವಾಸ

ನೃತ್ಯ ಶಿಕ್ಷಕಿಯ ಮೇಲೆ ಅತ್ಯಾಚಾರ; ಅಪರಾಧಿ ವಾಚ್‌ಮೆನ್‌ಗೆ 10 ವರ್ಷ ಸೆರೆವಾಸ
ಮುಂಬೈ , ಶುಕ್ರವಾರ, 22 ಮೇ 2015 (16:02 IST)
ನೃತ್ಯ ಶಿಕ್ಷಕಿಯೊಬ್ಬರ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ 32 ವರ್ಷದ ವಾಚ್‌ಮೆನ್ ಒಬ್ಬನಿಗೆ ಮುಂಬೈ ಸೆಷನ್ಸ್ ಕೋರ್ಟ್ 10 ವರ್ಷಗಳ ಕಠಿಣ ಕಾರಾಗೃಹವಾಸ ಶಿಕ್ಷೆಯನ್ನು ವಿಧಿಸಿದೆ. 

ಆರೋಪಿಯನ್ನು ಪ್ರಮೋದ್ ಉಪಾಧ್ಯಾಯ ಎಂದು ಗುರುತಿಸಲಾಗಿದ್ದು, 28 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದ  ಆತ ಆಕೆಯ ಬಳಿ ಇದ್ದ  ನಗದು, ಚಿನ್ನವನ್ನು ದೋಚಿದ್ದ ಎಂದು ಪೊವೈ ಪೊಲೀಸ್ ಠಾಣೆ ಅಧಿಕಾರಿಗಳು ತಿಳಿಸಿದ್ದಾರೆ. 
 
ಕಳೆದ ವರ್ಷ ಜನವರಿ 23ರಂದು ಈ ಘಟನೆ ನಡೆದಿತ್ತು. ತನ್ನ ಸ್ನೇಹಿತರ ಜತೆ ಸುತ್ತಾಡಲು ಹೋಗಿದ್ದ ಮಹಿಳೆ ಕುಡಿದ ಮತ್ತಿನಲ್ಲಿ ಮನೆಗೆ ಮರಳಿದ್ದಳು. ಅವಳ ಈ ಪರಿಸ್ಥಿತಿಯ ಲಾಭ ಪಡೆದುಕೊಂಡ ವಾಚ್‌ಮೆನ್ ಆಕೆಯನ್ನು ಮನೆಯ ಪಾರ್ಕಿಂಗ್ ಪ್ರದೇಶದಲ್ಲಿಯೇ ಅತ್ಯಾಚಾರ ಎಸಗಿ  ಪರಾರಿಯಾಗಿದ್ದ. 
 
ರಾತ್ರಿ ಇಡೀ ಆಕೆ ಅಲ್ಲಿಯೇ ಬಿದ್ದಿದ್ದಳು. ಮರುದಿನ ಬೆಳಿಗ್ಗೆ ವಾಕಿಂಗ್ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ಆಕೆಯ ಸಹೋದರ ಪೀಡಿತೆ ನೆಲದ ಮೇಲೆ ಬಿದ್ದಿರುವುದನ್ನು ನೋಡಿದ್ದ.  
 
ಆರೋಪಿಯನ್ನು ಗುರುತಿಸಲು ಪೀಡಿತೆ ವಿಫಲಳಾಗಿದ್ದಳು. ಆದರೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದ ದೃಶ್ಯಾವಳಿಗಳಲ್ಲಿ ಆಕೆಯ ಜತೆ ವಾಚ್‌ಮೆನ್ ಪಾರ್ಕಿಂಗ್ ಏರಿಯಾ ಕಡೆ ಹೋಗುತ್ತಿರುವುದು ಕಂಡುಬಂದಿತ್ತು.  ಇದರ ಆಧಾರದ ಮೇಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. 

Share this Story:

Follow Webdunia kannada