Webdunia - Bharat's app for daily news and videos

Install App

1ಕೋಟಿಗಾಗಿ ಮಗುವನ್ನು ಅಪಹರಿಸಿ, ಕೊಂದು ತುಂಡು ತುಂಡಾಗಿಸಿದ ಬಾಲಕರು

Webdunia
ಭಾನುವಾರ, 25 ಡಿಸೆಂಬರ್ 2016 (15:11 IST)
ಇಬ್ಬರು ಅಪ್ರಾಪ್ತ ಬಾಲಕರು 3 ವರ್ಷದ ಬಾಲಕಿಯನ್ನು ಅಪಹರಿಸಿ ತುಂಡು ತುಂಡಾಗಿ ಕತ್ತರಿಸಿದ ಬೆಚ್ಚಿ ಬೀಳಿಸುವ ಕರಾಳ ಘಟನೆ ಮುಂಬೈನಲ್ಲಿ ನಡೆದಿದೆ. 
ನಿನ್ನೆ ರಾತ್ರಿ ನಾಗಪಾಡಾ ಪ್ರದೇಶದ ಕಾಜಿಪುರಾ ಬಳಿ ಬಾಲಕಿಯ ಶವ ಪತ್ತೆಯಾದಾಗ ಪ್ರಕರಣ ಬೆಳಕಿಗೆ ಬಂದಿದೆ.  
 
ಇಬ್ಬರು ಆರೋಪಿಗಳು ಅಪ್ರಾಪ್ತರಾಗಿದ್ದು ಇಂದು ನಸುಕಿನ ಜಾವ ಅವರಿಬ್ಬರನ್ನು ಬಂಧಿಸಲಾಗಿದೆ.
 
ಘಟನೆಯ ವಿವರ: ಪೊಲೀಸರು ಹೇಳಿರುವ ಪ್ರಕಾರ ಡಿಸೆಂಬರ್ 5 ರಂದು ತಮ್ಮ ಮಗು ಕಾಣುತ್ತಿಲ್ಲ ಎಂದು ಅದರ ಪೋಷಕರು ಜೆ.ಜೆ ಮಾರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ಅವರಿಗೆ ಅಪರಿಚಿತರಿಬ್ಬರು ದೂರವಾಣಿ ಕರೆ ಮಾಡಿದ್ದು ನಿಮ್ಮ ಮಗು ಬೇಕಾದರೆ 1 ಕೋಟಿ ರೂಪಾಯಿ ನೀಡುವಂತೆ ಬೇಡಿಕೆಯನ್ನಿಟ್ಟಿದ್ದರು. ಅಷ್ಟೊಂದು ದೊಡ್ಡ ಮೊತ್ತದ ಹಣವನ್ನು ಹೊಂದಿಸಲಾಗುವುದಿಲ್ಲ. 28 ಲಕ್ಷ ಕೊಡುತ್ತೇನೆ ಎಂದು ಮಗುವಿನ ತಂದೆ ಭರವಸೆ ನೀಡಿದ್ದ. ಬಳಿಕ ಅಪಹರಣಕಾರರು ಥಾಣೆಯ ಕಲ್ವಾ ನಗರದ ಬಳಿ ಬಂದು ಹಣ ನೀಡಿ ಮಗುವನ್ನು ಕರೆದೊಯ್ಯುವಂತೆ ಹೇಳಿದ್ದರು. 
 
ಏತನ್ಮಧ್ಯೆ ಮಗುವಿನ ನೆರೆಮನೆ ಹುಡುಗನೊಬ್ಬ ಅನುಮಾನಾಸ್ಪದವಾಗಿ ನಡೆದುಕೊಳ್ಳುತ್ತಿದ್ದು ಆತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ ಪೊಲೀಸರು ಸತ್ಯವನ್ನು ಹೊರಹಾಕಿಸಿದ್ದಾರೆ. 
 
ಮಗುವನ್ನು ಅಪಹರಿಸಿದ ದಿನವೇ ಮೊಬೈಲ್ ಚಾರ್ಜರ್ ವೈಯರ್‌ನಿಂದ ಆಕೆಯನ್ನು ಉಸಿರುಗಟ್ಟಿಸಿ ಕೊಂದು ತುಂಡು ತುಂಡಾಗಿಸಿ ಶವವನ್ನು ಕಾಜಿಪುರಾ ಬಳಿ ಎಸೆದಿದ್ದಾಗಿ ಆತ ಬಾಯ್ಬಿಟ್ಟಿದ್ದ. ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮರಾಠಿ ಮಾತನಾಡಲ್ಲ ಎಂದ ಉದ್ಯಮಿ ಕಚೇರಿ ಮೇಲೆ ಕಲ್ಲೆಸೆದ ಎಂಎನ್‌ಎಸ್ ಕಾರ್ಯಕರ್ತರು

ಅರಣ್ಯ ಇಲಾಖೆಯ‌ಲ್ಲಿ ಉದ್ಯೋಗಾಂಕ್ಷಿಗಳಿಗೆ ಭರ್ಜರಿ ಗುಡ್‌ನ್ಯೂಸ್‌, 6000ಹುದ್ದೆಗಳು ಶೀಘ್ರದಲ್ಲೇ ಭರ್ತಿ

ದಶಕದ ಬಳಿಕ ನಡೆದ ಜಾತ್ರೆಯಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ ಜಾರಕಿಹೊಳಿ ಪುತ್ರ

ಇಸ್ರೇಲ್‌ನಲ್ಲಿ ಆರೈಕೆ ಮಾಡುತ್ತಿದ್ದ ಮಹಿಳೆಯನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಕೇರಳದ ಯುವಕ

ಏರ್‌ ಇಂಡಿಯಾ: ಇನ್ನೇನು ಟೇಕ್‌ ಆಫ್‌ ಆಗ್ಬೇಕು ಅನ್ನುಷ್ಟರಲ್ಲೇ ಕುಸಿದು ಬಿದ್ದ ಪೈಲಟ್‌, ತಪ್ಪಿದ ಭಾರೀ ದೊಡ್ಡ ದುರಂತ

ಮುಂದಿನ ಸುದ್ದಿ
Show comments