Webdunia - Bharat's app for daily news and videos

Install App

ಹದಿಹರೆಯದ ಬಾಲಕಿಯ ಮೇಲೆ ಗ್ಯಾಂಗ್‌ರೇಪ್: ಮೂವರು ಆರೋಪಿಗಳ ಬಂಧನ

Webdunia
ಮಂಗಳವಾರ, 6 ಅಕ್ಟೋಬರ್ 2015 (19:15 IST)
ನಗರದ ಚೆಂಬೂರ್ ಪ್ರದೇಶದಲ್ಲಿ ಹದಿಹರೆಯದ ಯುವತಿಯ ಮೇಲೆ ಗ್ಯಾಂಗ್‌ರೇಪ್ ಎಸಗಿದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
 
ಆರೋಪಿಗಳನ್ನು  ಸಲ್ಮಾನ್, ಶಾಬಾಜ್ ಮತ್ತು ಇರ್ಫಾನ್ ಎಂದು ಗುರುತಿಸಲಾಗಿದೆ ಎಂದು ಚೆಂಬೂರ್ ಪೊಲೀಸ್ ಠಾಣೆಯ ಅಧಿಕಾರಿ ದಿಲೀಪ್ ರಾವತ್ ತಿಳಿಸಿದ್ದಾರೆ.
 
ಹದಿಹರೆಯದ ಬಾಲಕಿಗೆ ಪರಿಚಿತನಾಗಿದ್ದ ಸಲ್ಮಾನ್, ಬಾಲಕಿಯನ್ನು ಆರ್‌ಸಿಎಫ್‌ ಪ್ರದೇಶದಲ್ಲಿರುವ ತನ್ನ ಗೆಳೆಯ ಶಾಬಾಜ್ ನಿವಾಸಕ್ಕೆ ಕರೆದುಕೊಂಡು ಹೋಗಿ ಇಬ್ಬರು ಕೂಡಿ ಅತ್ಯಾಚಾರವೆಸಗಿದ್ದಾರೆ. ಒಂದು ವೇಳೆ ಘಟನೆಯ ಬಗ್ಗೆ ಯಾರಿಗಾದರೂ ಹೇಳಿದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆಯೊಡ್ಡಿದ್ದಾರೆ. 
 
ಇದಾದ ನಂತರ ಆರೋಪಿಗಳ ಮತ್ತೊಬ್ಬ ಗೆಳೆಯ ಇರ್ಫಾನ್ ಕೂಡಾ ಬಾಲಕಿಯನ್ನು ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸಿದ್ದಾನೆ. ಆರೋಪಿಗಳ ಲೈಂಗಿಕ ಕಿರುಕುಳದಿಂದ ಕಂಗಾಲಾದ ಬಾಲಕಿ ತನ್ನ ತಾಯಿಗೆ ಸಂಪೂರ್ಣ ಮಾಹಿತಿ ನೀಡಿದ್ದಾಳೆ.
 
ಬಾಲಕಿಯ ತಾಯಿ ಚೆಂಬೂರ್ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಅತ್ಯಾಚಾರದ ದೂರು ದಾಖಲಿಸಿದ್ದಾಳೆ. ಅತ್ಯಾಚಾರ ದೂರು ದಾಖಲಿಸಿಕೊಂಡ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.  
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ