Select Your Language

Notifications

webdunia
webdunia
webdunia
webdunia

ನರೇಂದ್ರ ಮೋದಿ, ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ಶಾಸಕ; ವೈರಲ್ ಆದ ವಿಡಿಯೋ

ನರೇಂದ್ರ ಮೋದಿ, ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ಶಾಸಕ; ವೈರಲ್ ಆದ ವಿಡಿಯೋ
ಮುಂಬೈ , ಶನಿವಾರ, 27 ಜೂನ್ 2015 (16:35 IST)
ಮಹಾರಾಷ್ಟ್ರದ ಬಿಜೆಪಿ ಶಾಸಕರೊಬ್ಬರು ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾರವರನ್ನು ಟೀಕಿಸುತ್ತಿರುವಾಗ  ರಹಸ್ಯವಾಗಿ ಚಿತ್ರೀಕರಿಸಲ್ಪಟ್ಟ ವಿಡಿಯೋ ಒಂದು ವಿವಿಧ ಭಾಷೆಗಳ ವೆಬ್‌ಸೈಟ್‌ಗಳಲ್ಲಿ ಹರಿದಾಡುತ್ತಿದ್ದು ರಾಜ್ಯ ಬಿಜೆಪಿಗೆ ಇರಿಸುಮರಿಸು ತಂದಿಟ್ಟಿದೆ. 
 
ತನ್ನನ್ನು ಸಂದರ್ಶಿಸಿದ ವ್ಯಕ್ತಿಯ (ಗುರುತು ಪತ್ತೆಯಾಗಿಲ್ಲ) ಜತೆ ಕೊಲಬಾ ವಿಧಾನಸಭೆ ಕ್ಷೇತ್ರದ ರಾಜ ಪುರೋಹಿತ ಎಂಬ ಶಾಸಕ ಮೋದಿ ಮತ್ತು ಶಾ ಅವರಲ್ಲಿ ಪಕ್ಷ ಮತ್ತು ಸರ್ಕಾರದ ಎಲ್ಲ ಅಧಿಕಾರ ಕೇಂದ್ರೀಕೃತವಾಗಿದೆ ಎಂದು ಒಪ್ಪಿಕೊಂಡಿದ್ದಾರೆ. "ಬಿಜೆಪಿಯಲ್ಲಿ ಸ್ವಾತಂತ್ರ್ಯವಿಲ್ಲ. ಜನರು ಸಾಮೂಹಿಕ ನಾಯಕತ್ವದ ಕುರಿತು ಮಾತಾಡುತ್ತಾರೆ. ಆದರೆ ಅದು ಇಲ್ಲಿ ಕಾಣೆಯಾಗಿದೆ. ಇದು ಪಕ್ಷಕ್ಕೆ ಅಪಾಯಕಾರಿ ಸಂಕೇತವಾಗಿದೆ", ಎಂದು ಅವರು ಹೇಳುತ್ತಿರುವುದು ಕಂಡುಬಂದಿದೆ. 
 
"ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸಹ ಮೇಲಿನಿಂದ ಒತ್ತಡವನ್ನು ಎದುರಿಸುತ್ತಿದ್ದು, ಅನೇಕ ವಿಷಯಗಳಲ್ಲಿ ಅಸಹಾಯಕರಾಗಿದ್ದಾರೆ", ಎಂದು ಕೊಲಬಾ ಬಿಜೆಪಿ ಶಾಸಕ ರಾಜ ಪುರೋಹಿತ ಹೇಳಿದ್ದಾರೆ.

Share this Story:

Follow Webdunia kannada