Webdunia - Bharat's app for daily news and videos

Install App

ಸರಣಿ ಅಪಘಾತ: 17 ದುರ್ಮರಣ, 35 ಜನರಿಗೆ ಗಾಯ

Webdunia
ಭಾನುವಾರ, 5 ಜೂನ್ 2016 (10:29 IST)
ಮುಂಬೈ-ಪುಣೆ ಹೆದ್ದಾರಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಕನಿಷ್ಠ 17 ಜನ ಸಾವನ್ನಪ್ಪಿ 35 ಜನರು ಗಂಭೀರವಾಗಿ ಗಾಯಗೊಂಡ ಘಟನೆ ಇಂದು ನಸುಕಿನ ಜಾವ ನಡೆದಿದೆ. ಮುಂಜಾನೆ 5.30ರ ಸುಮಾರಿಗೆ ಈ ಘಟನೆ ನಡೆದಿದೆ.

ಲಕ್ಸುರಿ ಬಸ್ಸೊಂದು ಎರಡು ಕಾರುಗಳಿಗೆ ಡಿಕ್ಕಿ ಹೊಡೆದು ನಂತರ 20 ಅಡಿ ಕಂದಕಕ್ಕೆ ಉರುಳಿದ ಪರಿಣಾಮ ಈ ಅನಾಹುತ ಸಂಭವಿಸಿದೆ.
 
ಪ್ರಾಥಮಿಕ ವರದಿಗಳ ಪಂಕ್ಚರ್ ಆದ ಸ್ವಿಫ್ಟ್ ಕಾರ್‌ ಟಯರ್ ಬದಲಾಯಿಸಲು ಚಾಲಕ ರಸ್ತೆ ಬದಿ ನಿಲ್ಲಿಸಿದ್ದ. ಆತನಿಗೆ ಸಹಾಯ ಮಾಡಲು ಇನ್ನೋವಾ ಕಾರ್ ಚಾಲಕ ಸಹ ತನ್ನ ಕಾರನ್ನು ಅಲ್ಲೇ ಬದಿಯಲ್ಲಿ ನಿಲ್ಲಿಸಿದ್ದ. ಆ ಸಮಯದಲ್ಲಿ ಸತಾರಾದಿಂದ ಬಂದ ಲಕ್ಸುರಿ ಬಸ್ಸೊಂದು ಇನ್ನೋವಾ ಮತ್ತು ಸ್ವಿಫ್ಟ್‌ ಕಾರಿಗೆ ಡಿಕ್ಕಿ ಹೊಡೆದಿದೆ. ಬಳಿಕ 20 ಅಡಿ ಆಳದ ಗುಂಡಿಗೆ ಬಿದ್ದಿದೆ ಎಂದು ತಿಳಿದು ಬಂದಿದೆ. 
 
ಈ ಅಪಘಾತದಲ್ಲಿ 6 ತಿಂಗಳ ಮಗು ಸೇರಿದಂತೆ 17 ಮಂದಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. 
 
ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ.   
 
ಬಸ್ ಮುಂಬೈ ಕಡೆಗೆ ಹೋಗುತ್ತಿತ್ತು ಎಂದು ತಿಳಿದು ಬಂದಿದೆ.  

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜೂನ್ 23ರಂದು ಇರಾನ್ ಜೈಲಿನ ಮೇಲೆ ಇಸ್ರೇಲ್ ದಾಳಿಯಲ್ಲಿ ಅಧಿಕಾರಿಗಳು 71ಮಂದಿ ಸಾವು

ಅಶೋಕ್ ಜ್ಯೋತಿಷ್ಯ ಕಲಿತಿದ್ದರೆ ನನ್ನ ಭವಿಷ್ಯ ಕೇಳಬೇಕಿತ್ತು: ಡಿಕೆ ಶಿವಕುಮಾರ್‌

ಪುರಿ ಕಾಲ್ತುಳಿತ ದುರಂತ, ದೊಡ್ಡ ಎಚ್ಚರಿಕೆ: ರಾಹುಲ್ ಗಾಂಧಿ ಸಂತಾಪ

ಸಿಎಂ ಆಗಿ ಸಿದ್ದರಾಮಯ್ಯ 5 ವರ್ಷ ಪೂರ್ಣಗೊಳಿಸುತ್ತಾರೆ: ಡಾ.ಯತೀಂದ್ರ

ಭಾರೀ ಮಳೆಯ ಮುನ್ಸೂಚನೆ: 24ಗಂಟೆಗಳ ಕಾಲ ಚಾರ್‌ ಧಮ್ ಯಾತ್ರೆ ಸ್ಥಗಿತ

ಮುಂದಿನ ಸುದ್ದಿ
Show comments