Webdunia - Bharat's app for daily news and videos

Install App

ದಂಪತಿಗಳಿಗೆ ಪ್ರವೇಶ ನಿರಾಕರಿಸಿದ ಹೋಟೆಲ್‌ ಉದ್ಯೋಗಿಯ ವಿರುದ್ಧ ದೂರು

Webdunia
ಸೋಮವಾರ, 27 ಜುಲೈ 2015 (16:08 IST)
ಭಾರತೀಯ ದಂಪತಿಗಳಿಗೆ ಹೋಟೆಲ್ ಪ್ರವೇಶಿಸಲು ನಿರಾಕರಿಸಿದ ವ್ಯವಸ್ಥಾಪಕರ ವಿರುದ್ಧ ಸಾಂತಾಕ್ರೂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 
ಜುಹು ಪ್ರದೇಶದಲ್ಲಿರುವ ಪಂಚತಾರಾ ಹೋಟೆಲ್‌ನಲ್ಲಿ ಈ ಘಟನೆ ಸಂಭವಿಸಿದ್ದು, ಹೋಟೆಲ್ ವ್ಯವಸ್ಥಾಪಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ದಂಪತಿಗಳು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. 
 
ಸಾಂತಾಕ್ರೂಜ್ ಪೊಲೀಸ್ ಠಾಣೆಯ ಅದಿಕಾರಿಗಳು ಹೋಟೆಲ್ ಮಾಲೀಕರ ವಿರುದ್ಧ ಪ್ರರ್ತರಣ ದಾಖಲಿಸಿದ್ದಾರೆ. ಆದರೆ ಮಾಲೀಕನ ಹೆಸರನ್ನು ಗೌಪ್ಯವಾಗಿಡಲಾಗಿದೆ ಎಂದು ಪೊಲಿಸ್ ಮೂಲಗಳು ತಿಳಿಸಿವೆ.
 
ಕಳೆದ ಶನಿವಾರದಂದು ಭಾರತೀಯ ದಂಪತಿಗಳು ಪಂಚತಾರಾ ಹೋಟೆಲ್ ಪ್ರವೇಶಿಸಿದಾಗ ಹೋಟೆಲ್‌ನ ಮಹಿಳಾ ಉದ್ಯೋಗಿಯಬ್ಬಳು ತಾವು ಹೋಟೆಲ್‌ಗೆ ಪ್ರವೇಶಿಸಲು ಅನರ್ಹರು. ಭಾರತೀಯರಿಗೆ ಒಳಗಡೆ ಪ್ರವೇಶವಿಲ್ಲ ಎಂದು ಅಸಭ್ಯವಾಗಿ ವರ್ತಿಸಿ ಹೊರಹೊಗುವಂತೆ ಆದೇಶಿಸಿದ್ದಳು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
  
ಐಪಿಎಲ್ ಆಟಗಾರರು ಮತ್ತು ಟಿವಿ ನಟರು ಭಾಗಿಯಾಗಿದ್ದ ಡ್ರಗ್ಸ್ ರಾಕೆಟ್‌ನಲ್ಲಿಹೋಟೆಲ್ ಉದ್ಯೋಗಿಯ ಹೆಸರಲ್ಲಿ ದೂರು ದಾಖಲಾಗಿತ್ತು. ಇದೀಗ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ದೂರು ದಾಖಲಾಗಿದೆ.  
 
ಪೊಲೀಸರು ಆಕೆಯ ವಿರುದ್ಧ ನಾಗರಿಕ ಹಕ್ಕು ಸೆಕ್ಷನ್ ಕಾಯ್ದೆ 4 ರ ಅಡಿ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments