Select Your Language

Notifications

webdunia
webdunia
webdunia
webdunia

ಸೆಕ್ಸ್ ಸುಖ ಕೊಡದಿದ್ರೆ ಕಾಲೇಜು ಫೀಸ್ ಕೊಡಲ್ಲ ಎಂದು ಪುತ್ರಿಗೆ ವಾರ್ನ್ ಮಾಡಿದ ಪಾಪಿ ತಂದೆ

ಸೆಕ್ಸ್ ಸುಖ ಕೊಡದಿದ್ರೆ ಕಾಲೇಜು ಫೀಸ್ ಕೊಡಲ್ಲ ಎಂದು ಪುತ್ರಿಗೆ ವಾರ್ನ್ ಮಾಡಿದ ಪಾಪಿ ತಂದೆ
ಮುಂಬೈ , ಶುಕ್ರವಾರ, 24 ಏಪ್ರಿಲ್ 2015 (15:20 IST)
ಕಳೆದ ಆರು ವರ್ಷಗಳಿಂದ ನನ್ನ ತಂದೆ ನಿರಂತರವಾಗಿ ಅತ್ಯಾಚಾರವೆಸಗುತ್ತಿದ್ದಾನೆ. ಒಂದು ವೇಳೆ ಅತ್ಯಾಚಾರ ಮಾಡುವುದನ್ನು ತಡೆದಲ್ಲಿ ಪುಸ್ತಕ, ಬಟ್ಟೆಗಳು ಹಾಗೂ ಕಾಲೇಜು ಶುಲ್ಕವನ್ನು ಕೊಡುವುದಿಲ್ಲ ಎಂದು ಬೆದರಿಕೆಯೊಡ್ಡಿರುವುದಾಗಿ ಯುವತಿಯೊಬ್ಬಳು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.

ತಂದೆ ನಿರಂತರವಾಗಿ ಅತ್ಯಾಚಾರವೆಸಗುತ್ತಿರುವುದನ್ನು ಕೊನೆಗೂ ಸಹಿಸಲು ಸಾಧ್ಯವಾಗದೆ ಯುವತಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ.

ಒಂದು ವೇಳೆ ನನಗೆ ದೇಹ ಸುಖ ಕೊಡದಿದ್ದಲ್ಲಿ ಕಾಲೇಜಿಗೆ ನೀಡಿದ ಶುಲ್ಕ ಮತ್ತು ಪುಸ್ತಕಗಳನ್ನು ಹಿಂದಕ್ಕೆ ಪಡೆಯುತ್ತೇನೆ ಎಂದು ಪಾಪಿ ತಂದೆ ನಿರಂತರವಾಗಿ ಬೆದರಿಕೆಯೊಡ್ಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಪೊಲೀಸ್ ಮೂಲಗಳ ಪ್ರಕಾರ, ವಿಚ್ಚೇದಿತನಾದ ಪಾಪಿ ತಂದೆ ತನ್ನ ಮೂವರು ಪುತ್ರಿಯರೊಂದಿಗೆ ವಾಸಿಸುತ್ತಿದ್ದ. ಜೀವನನಿರ್ವಹಣೆಗಾಗಿ ಅದೇ ಪ್ರದೇಶದಲ್ಲಿಯೇ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡಿದ್ದ. ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಆತನ ಪುತ್ರಿ ಮೂರನೇಯವಳಾಗಿದ್ದು ಪಿಯುಸಿ ಕಾಲೇಜಿನಲ್ಲಿ ಓದುತ್ತಿದ್ದಾಳೆ ಎನ್ನಲಾಗಿದೆ.
.
ಕಾಲೇಜಿಗೆ ಹಾಜರಾದಲ್ಲಿ ತನ್ನ ಬಂಡವಾಳ ಬಹಿರಂಗವಾಗಬಹುದು ಎನ್ನುವ ಆತಂಕದಿಂದ ಪುತ್ರಿಗೆ ಕಾಲೇಜಿಗೆ ಹೋಗುವುದಕ್ಕೆ ತಡೆಯೊಡ್ಡಿದ್ದ. ಒಂದು ವೇಳೆ ಕಾಲೇಜಿಗೆ ಹೋದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ತಂದೆ ಎಚ್ಚರಿಕೆ ನೀಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Share this Story:

Follow Webdunia kannada