Select Your Language

Notifications

webdunia
webdunia
webdunia
webdunia

ಗೆಳೆಯರೊಂದಿಗೆ ಸೇರಿ ಪುತ್ರಿಯರ ಮೇಲೆ ನಿರಂತರ ಅತ್ಯಾಚಾರವೆಸಗಿದ ಕಾಮುಕ ತಂದೆ

ಗೆಳೆಯರೊಂದಿಗೆ ಸೇರಿ ಪುತ್ರಿಯರ ಮೇಲೆ ನಿರಂತರ ಅತ್ಯಾಚಾರವೆಸಗಿದ ಕಾಮುಕ ತಂದೆ
ಮೆಘ್ವಾಡಿ , ಸೋಮವಾರ, 22 ಡಿಸೆಂಬರ್ 2014 (16:57 IST)
ತನ್ನ ಸ್ವಂತ ಹೆಣ್ಣು ಮಕ್ಕಳ ಮೇಲೆ ತಂದೆಯೇ ಲೈಂಗಿಕ ದೌರ್ಜನ್ಯ ಎಸಗಿದ ಹೇಯ ಘಟನೆ  ಮೆಘ್ವಾಡಿಯಲ್ಲಿ ನಡೆದಿದೆ.  ಕಳೆದ 9 ತಿಂಗಳಿಂದ ಈ ದುಷ್ಕೃತ್ಯ ನಡೆಯುತ್ತಿದ್ದು, ಆರೋಪಿಯ ಇಬ್ಬರು ಸ್ನೇಹಿತರು ಕೂಡ ಈ ಕುಕೃತ್ಯದಲ್ಲಿ ಪಾಲುದಾರರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯ ಪತ್ನಿ, ಪೀಡಿತರ ತಾಯಿ ಕಳೆದ 10 ತಿಂಗಳ ಹಿಂದೆ ಮರಣವನ್ನಪ್ಪಿದ್ದಳು. 
ಪತ್ನಿಯ ಮರಣಾ ನಂತರ ಆತ ತನ್ನ ಮಕ್ಕಳ ಮೇಲೆ ಚಪಲವನ್ನು ತೀರಿಸಿಕೊಳ್ಳಲು ಪ್ರಾರಂಭಿಸಿದ. ಜೋಗೇಶ್ವರಿಯಲ್ಲಿರುವ ತನ್ನ ಮನೆಯಲ್ಲಿ 16, 18 ಮತ್ತು 19 ವರ್ಷದ ತನ್ನ ಹೆಣ್ಣು ಮಕ್ಕಳ ಮೇಲಾತ ಲೈಂಗಿಕ ಶೋಷಣೆ ನಡೆಸುತ್ತಿದ್ದ  ಮತ್ತು ಈ ಕುರಿತು ಯಾರ ಬಳಿಯಾದರೂ ಬಾಯ್ಬಿಟ್ಟರೆ ಘೋರ ಪರಿಣಾಮವನ್ನು ಎದುರಿಸಬೇಕಾಗುತ್ತದೆ  ಎಂದು ಬೆದರಿಕೆ ಹಾಕಿದ್ದ. 
 
ಪತ್ನಿಯ ಮರಣಾ ನಂತರ ಪ್ರತಿದಿನ ಮನೆಯಲ್ಲೇ ಆಲ್ಕೋಹಾಲ್ ಕುಡಿಯಲು ಪ್ರಾರಂಭಿಸಿದ ಆತ ತನ್ನಿಬ್ಬರು ಗೆಳೆಯರನ್ನು ಸಹ ಮನೆಗೆ ಆಹ್ವಾನಿಸುತ್ತಿದ್ದ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
 
ಕಳೆದ ಶುಕ್ರವಾರ ರಾತ್ರಿ  ಮೂವರು ಯುವತಿಯರು ತಮ್ಮ ತಂದೆಯ ಜತೆ  ಜಗಳವಾಡುತ್ತಿದ್ದುದನ್ನು ನೋಡಿದ ನೆರೆಮನೆಯ ರೇಶ್ಮಾ ಖಾನ್ ನಡೆದ ವಿಷಯವನ್ನು ತಿಳಿದು, ಯುವತಿಯರನ್ನು ರಕ್ಷಿಸಿ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. 
 
ಯುವತಿಯರು ನೀಡಿದ ದೂರಿನ ಆಧಾರದ ಮೇಲೆ ಆರೋಪಿ ತಂದೆಯನ್ನು ಪೋಲೀಸರು ಬಂಧಿಸಿದ್ದಾರೆ. 
 
ಯುವತಿಯರ ಜತೆ ಅಸಭ್ಯವಾಗಿ ವರ್ತಿಸಿದ ಕಾರಣಕ್ಕೆ ಆತನ ಸ್ನೇಹಿತರ ಮೇಲೂ ಪ್ರಕರಣವನ್ನು ದಾಖಲಿಸಲಾಗಿದ್ದು, ಸದ್ಯದಲ್ಲಿಯೇ ಅವರನ್ನು ಬಂಧಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Share this Story:

Follow Webdunia kannada