Webdunia - Bharat's app for daily news and videos

Install App

1.28 ಕೋಟಿ ರೂ. ಹಣದೊಂದಿಗೆ ಪರಾರಿಯಾದ ಎಟಿಎಂ ವಾಹನ ಚಾಲಕ

Webdunia
ಶನಿವಾರ, 28 ಮಾರ್ಚ್ 2015 (15:17 IST)
ಎಂಟಿಎಂಗಳಿಗೆ ಹಣವನ್ನು ಸಾಗಿಸುತ್ತಿರುವ ವಾಹನ ಚಾಲಕನೊಬ್ಬ 1.28 ಕೋಟಿ ರೂಪಾಯಿಗಳ ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಉತ್ತರಪ್ರದೇಶ ಮೂಲದ ವಾಹನ ಚಾಲಕ ಸಿಂಗ್, ಬ್ಯಾಂಕ್‌ನ ಇತರ ನಾಲ್ವರು ಸಿಬ್ಬಂದಿಗಳು ಸಿಯೋನ್-ಪನ್ವೇಲ್ ಹೆದ್ದಾರಿಯಲ್ಲಿರುವ ಎಟಿಎಂನಲ್ಲಿ ಹಣವನ್ನು ತುಂಬುತ್ತಿರುವ ಸಂದರ್ಭದಲ್ಲಿ, ವಾಹನ ಓಡಿಸಿಕೊಂಡು ಪರಾರಿಯಾಗಿದ್ದಾನೆ.  

ವಾಹನ ಬ್ಯಾಂಕ್‌ನಿಂದ ಹೊರಟಾಗ ವಾಹನದಲ್ಲಿ 1.44 ಕೋಟಿ ರೂಪಾಯಿಗಳಿತ್ತು. ಸಿಯೋನ್-ಪನ್ವೇಲ್ ಹೆದ್ದಾರಿಯಲ್ಲಿರುವ ಎಟಿಎಂನಲ್ಲಿ ತುಂಬಲು 16 ಲಕ್ಷ ರೂಪಾಯಿಗಳನ್ನು ತೆಗೆದುಕೊಳ್ಳಲಾಗಿತ್ತು. ಉಳಿದ 1.28 ಕೋಟಿ ರೂಪಾಯಿಗಳು ವಾಹನದಲ್ಲಿತ್ತು. ಆರೋಪಿ ಚಾಲಕ ವಾಹನ ತೆಗೆದುಕೊಂಡು ಪರಾರಿಯಾಗಿದ್ದಾನೆ. ನಾಪತ್ತೆಯಾದ ವಾಹನ ಮಾತುಂಗಾ ಬಳಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಚಾಲಕನ ಪತ್ತೆಗೆ ವಿಶೇ, ತಂಡಗಳನ್ನು ರಚಿಸಲಾಗಿದ್ದು, ಶೀಘ್ರದಲ್ಲಿಯೇ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ವಿನಯ್ ಕುಮಾರ್ ತಿಳಿಸಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments