Select Your Language

Notifications

webdunia
webdunia
webdunia
webdunia

26/11 ಮುಂಬೈ ದಾಳಿ: ಹುತಾತ್ಮರಾದ ಜನರಿಗೆ ಪ್ರಧಾನಿ ಮೋದಿ ಸೆಲ್ಯೂಟ್

26/11  ಮುಂಬೈ ದಾಳಿ: ಹುತಾತ್ಮರಾದ ಜನರಿಗೆ ಪ್ರಧಾನಿ ಮೋದಿ ಸೆಲ್ಯೂಟ್
ನವದೆಹಲಿ , ಬುಧವಾರ, 26 ನವೆಂಬರ್ 2014 (13:52 IST)
26/11 ಮುಂಬೈ ದಾಳಿ ನಡೆದು 6 ವರ್ಷಗಳು ಕಳೆದಿರುವ ಹಿನ್ನೆಲೆಯಲ್ಲಿ ಉಗ್ರರ ವಿರುದ್ಧ ಹೋರಾಡಿ ಹುತಾತ್ಮರಾದ ಜನರಿಗೆ ಪ್ರಧಾನಿ ಮೋದಿ ಸೆಲ್ಯೂಟ್ ಹೊಡೆದು ಗೌರವಿಸಿದ್ದಾರೆ.  ನವೆಂಬರ್ 26ರಂದು ಉಗ್ರರು ಮುಂಬೈನ ಪ್ರಮುಖ ಕೇಂದ್ರಗಳ ಮೇಲೆ ದಾಳಿ ಮಾಡಿ ರಕ್ತದೋಕುಳಿ ಹರಿಸಿದ್ದರು.
 
2008ರಲ್ಲಿ ಮುಂಬೈನ ಭಯಾನಕ ದಾಳಿಯನ್ನು ನಾವು ಇಂದು ಸ್ಮರಿಸಿಕೊಂಡು ದಾಳಿಯಲ್ಲಿ ಜೀವಕಳೆದುಕೊಂಡ ಜನರಿಗೆ ಗೌರವ ಸಲ್ಲಿಸುವುದಾಗಿ ಮೋದಿ ಸಂದೇಶದಲ್ಲಿ ತಿಳಿಸಿದರು. ಆ ದುರ್ದಿನ ಹಲವಾರು ಜನರ ಜೀವ ರಕ್ಷಿಸಲು ತಮ್ಮ ಜೀವವನ್ನೇ ಬಲಿಕೊಟ್ಟು ಹುತಾತ್ಮರಾದ ಭದ್ರತಾ ಸಿಬ್ಬಂದಿಗೆ ಅವರು ಸೆಲ್ಯೂಟ್ ಹೊಡೆದರು.

 ಅವರು ನಿಜವಾದ ಹೀರೋಗಳು ಎಂದು ಟ್ವೀಟ್ ಮಾಡಿದರು. ಭಯೋತ್ಪಾದನೆ ಬಗ್ಗೆ ದನಿ ಎತ್ತಿದ ಪ್ರಧಾನಿ ಭಯೋತ್ಪಾದನೆಯನ್ನು ಎಲ್ಲರೂ ಮಟ್ಟಹಾಕಬೇಕು. ಇಡೀ ವಿಶ್ವವೇ ಭಯೋತ್ಪಾದನೆ ವಿರುದ್ಧ ಒಂದಾಗಬೇಕು ಎಂದು ಭಯೋತ್ಪಾದನೆ ದಮನಕ್ಕೆ ಮೋದಿ ಸಂಕಲ್ಪಿಸಿದರು.

Share this Story:

Follow Webdunia kannada