Select Your Language

Notifications

webdunia
webdunia
webdunia
webdunia

ಮುಂಬೈ ನಗರವೊಂದರಲ್ಲಿಯೇ ಪ್ರತಿ ತಿಂಗಳು 884 ಮಂದಿ ಕಾಣೆಯಾಗುತ್ತಾರಂತೆ..!

ಮುಂಬೈ ನಗರವೊಂದರಲ್ಲಿಯೇ ಪ್ರತಿ ತಿಂಗಳು 884 ಮಂದಿ ಕಾಣೆಯಾಗುತ್ತಾರಂತೆ..!
ಮುಂಬೈ , ಶುಕ್ರವಾರ, 3 ಜುಲೈ 2015 (15:00 IST)
ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಪ್ರತಿ ತಿಂಗಳು 884 ಮಂದಿ ಕಾಣೆಯಾಗುತ್ತಿದ್ದಾರೆ ಎನ್ನುವ ಆಘಾತಕಾರಿ ಅಂಶವನ್ನು ಮುಂಬೈ ಪೊಲೀಸರು ಬಹಿರಂಗಪಡಿಸಿದ್ದಾರೆ. ಕಾಣೆಯಾದ ಬಹುತೇಕರಲ್ಲಿ ಅಪ್ರಾಪ್ತ ಬಾಲಕಿಯರು ಹೆಚ್ಚಿನ ಸಂಖ್ಯೆಯಲ್ಲಿರುವುದು ಆತಂಕ ಮೂಡಿಸಿದೆ. 
 
ಕಳೆದ 10 ವರ್ಷಗಳ ಅವಧಿಯಲ್ಲಿ ಒಟ್ಟು 1,10,547 ಕಾಣೆಯಾಗಿದ್ದು ಅದರಲ್ಲಿ 1,00,439 ಜನರನ್ನು ಪತ್ತೆ ಹಚ್ಚಲಾಗಿದೆ. 10,108 ಜನರನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 
 2005ರಿಂದ ಮೇ 2015ರವರೆಗೆ ವಿವರವಾದ ಪಟ್ಟಿಯನ್ನು ಸಿದ್ದಪಡಿಸಲಾಗಿದ್ದು, ಕಾಣೆಯಾದವರಲ್ಲಿ ಪುರುಷರಿಗೆ ಹೋಲಿಸಿದಲ್ಲಿ ಮಹಿಳೆಯರು ಅಪ್ರಾಪ್ತ ಬಾಲಕಿಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕಾಣೆಯಾದವರ ಪಟ್ಟಿಯನ್ನು ಮುಂಬೈ ಅಪರಾಧ ದಳ ಸಿದ್ದಪಡಿಸಿದೆ. 
 
ಕಳೆದ 10 ವರ್ಷಗಳಲ್ಲಿ ಕಾಣೆಯಾದವರಲ್ಲಿ 18,547 ಬಾಲಕಿಯರು, 37,603 ಮಹಿಳೆಯರು ಮತ್ತು 17,195 ಬಾಲಕರು ಹಾಗೂ 37,202 ಪುರುಷರು ಕಾಣೆಯಾಗಿದ್ದಾರೆ ಎಂದು ಮುಂಬೈ ಅಪರಾಧ ದಳದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. 
 

Share this Story:

Follow Webdunia kannada