Select Your Language

Notifications

webdunia
webdunia
webdunia
webdunia

78 ವರ್ಷದ ನಿವೃತ್ತ ಮಿಲಿಟರಿ ಅಧಿಕಾರಿಯಿಂದ 10ರ ಬಾಲಕಿಯ ಮೇಲೆ ಲೈಂಗಿಕ ಹಿಂಸೆ

78 ವರ್ಷದ ನಿವೃತ್ತ ಮಿಲಿಟರಿ ಅಧಿಕಾರಿಯಿಂದ 10ರ ಬಾಲಕಿಯ ಮೇಲೆ ಲೈಂಗಿಕ ಹಿಂಸೆ
ಮುಂಬೈ , ಶನಿವಾರ, 18 ಏಪ್ರಿಲ್ 2015 (18:51 IST)
ನಿವೃತ್ತ ಮಿಲಿಟರಿ ಅಧಿಕಾರಿಯೊಬ್ಬ ತನ್ನ ಕಾರ್‌ನಲ್ಲಿ 10 ವರ್ಷದ ಬಾಲಕಿಗೆ ಲೈಂಗಿಕ ಹಿಂಸೆ ನೀಡಿದ ಘಟನೆ ಮುಂಬೈನಲ್ಲಿ ಬೆಳಕಿಗೆ ಬಂದಿದೆ. ಘಟನೆಯ ಕುರಿತು  ಪೀಡಿತಳ ತಾಯಿ ಪೊಲೀಸರಿಗೆ ದೂರು ನೀಡಿದ ನಂತರ ದೂರನ್ನು ಹಿಂದಕ್ಕೆ ಪಡೆಯುವಂತೆ  ಆರೋಪಿ ಬೆದರಿಕೆ ಹಾಕಿದ್ದಾನೆ. 
 
ಆರೋಪಿಯನ್ನು ಪೂರ್ವ ಮಲಾಡ್ ನಿವಾಸಿ ಸುಧೀರ್ ಪ್ರಕಾಶ್ ಅರೋರಾ ಎಂದು ಗುರುತಿಸಲಾಗಿದ್ದು ತನ್ನ ನೆರೆಮನೆಯ ನಿವಾಸಿ ಬಾಲಕಿಯ ತಾಯಿ ಜತೆ ಸ್ನೇಹವನ್ನು ಹೊಂದಿದ್ದ. ಪೊಲೀಸರ ಪ್ರಕಾರ ಕಳೆದ ಶನಿವಾರ ರಾತ್ರಿ 8 ಗಂಟೆಗೆ ಆತ ಕಾರ್‌ನಲ್ಲಿ ಬಾಲಕಿಯನ್ನು ಸುತ್ತಾಡಲು ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿ ಕರೆದೊಯ್ದು ನಿರ್ಜನ ಪ್ರದೇಶದಲ್ಲಿ ಆಕೆಯ ಮೇಲೆ ಓರಲ್ ಸೆಕ್ಸ್ ಎಸಗಿದ್ದಾನೆ. ಅರ್ಧ ಗಂಟೆಯ ನಂತರ ಬಾಲಕಿಯನ್ನಾತ ಆಕೆಯ ಮನೆ ಬಳಿ ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 
 
ಘಟನೆಯ ಕುರಿತು ಬಾಲಕಿ ತನ್ನ ತಾಯಿಗೆ ವಿವರಿಸಿದ್ದು, ಆಘಾತಕ್ಕೊಳಗಾದ ತಾಯಿ ಸಮ್ತಾ ನಗರ್ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ. ಅದೇ ರಾತ್ರಿ ಆರೋಪಿಯನ್ನು ಬಂಧಿಸಲಾಯಿತು. ಆ ಬಳಿಕ ಆತ ಪೀಡಿತಳ ತಾಯಿಗೆ ಬೆದರಿಕೆಯನ್ನು ಸಹ ಒಡ್ಡಿದ್ದಾನೆ.  

Share this Story:

Follow Webdunia kannada