ಅಖಿಲೇಶ್ ಮುಖ್ಯಮಂತ್ರಿ ಅಭ್ಯರ್ಥಿಯಲ್ಲ ಎಂದ ತಂದೆ ಮುಲಾಯಂ

Webdunia
ಶನಿವಾರ, 15 ಅಕ್ಟೋಬರ್ 2016 (12:14 IST)
ಎರಡನೇ ಅವಧಿಗೂ ಪುತ್ರ ಅಖಿಲೇಶ್ ಯಾದವ್ ಅವರೇ ಮುಖ್ಯಮಂತ್ರಿ ಅಭ್ಯರ್ಥಿ ಎಂಬುದನ್ನು ಸಮಾಜವಾದಿ  ವರಿಷ್ಠ ಮುಲಾಯಂ ಸಿಂಗ್ ಯಾದವ್ ತಳ್ಳಿ ಹಾಕಿದ್ದಾರೆ. ಈ ಮೂಲಕ ಯಾದವ ಕುಟುಂಬದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದು ಬಹಿರಂಗವಾಗಿದೆ. 
ಚುನಾವಣೆ ಸನ್ನಿಹಿತವಾಗಿದ್ದು ಪ್ರಚಾರಕ್ಕೆ ಯಾರನ್ನು ಕಾಯುವುದು ಬೇಡ. ಪ್ರಚಾರವನ್ನು ಆರಂಭಿಸೋಣ ಎಂದು ಅಖಿಲೇಶ್ ಹೇಳುತ್ತಿದ್ದರೆ, ಅವರ ತಂದೆ ಮುಲಾಯಂ ಮಗನೇ ಮತ್ತೆ ಸಿಎಂ ಅಭ್ಯರ್ಥಿ ಎಂಬುದನ್ನು ಒಪ್ಪುತ್ತಿಲ್ಲ.
 
ಲಕ್ನೋನಲ್ಲಿ ವರದಿಗಾರರೊಂದಿಗೆ ಮಾತನ್ನಾಡುತ್ತಿದ್ದ ಮುಲಾಯಂ, ಪ್ರಚಾರದ ಸಂದರ್ಭದಲ್ಲಿ ಅಖಿಲೇಶರನ್ನು ಮುಖ್ಯಮಂತ್ರಿಯಾಗಿ ಬಿಂಬಿಸುವುದು ಬೇಡ. ಚುನಾಣಾ ಫಲಿತಾಂಶ ನಮ್ಮ ಪರವಾದರೆ ಶಾಸಕರೇ ತಮಗೆ ಬೇಕಾದ ನಾಯಕನನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.
 
ತಮ್ಮ ಕುಟುಂಬದಲ್ಲಿ ಭಿನ್ನಮತವಿಲ್ಲ ಎಂದು ಯಾದವ್ ಕುಟುಂಬ ಎಷ್ಟು ಸ್ಪಷ್ಟನೆ ನೀಡಿದ್ದರೂ ಅದು ಸುಳ್ಳು ಎಂಬುದು ಮುಲಾಯಂ ಮಾತಿಂದ ಸ್ಪಷ್ಟವಾಗಿದೆ. 
 
ಅಖಿಲೇಶ್ ಮತ್ತು ಅವರ ಚಿಕ್ಕಪ್ಪ ಶಿವಪಾಲ್ ಯಾದವ್ ನಡುವಿನ ವೈಮನಸ್ಸು ತಾರಕಕ್ಕೇರಿದ್ದು, ಈ ಹಿನ್ನೆಲೆಯಲ್ಲಿ ಮಗನನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಣೆ ಮಾಡದಿರಲು ಮುಲಾಯಂ ನಿರ್ಧರಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೇರಳದಲ್ಲಿ ಮೊದಲ ಬಾರಿಗೆ ಗೆಲುವಿಗೆ ಪ್ರಧಾನಿ ಮೋದಿಗೆ ಖುಷಿಯೋ ಖುಷಿ

ಜನವರಿ 6 ಕ್ಕೆ ಡಿಕೆ ಶಿವಕುಮಾರ್ ಸಿಎಂ: ಇಕ್ಬಾಲ್ ಹುಸೇನ್ ಮಾತಿಗೆ ಡಿಕೆಶಿ ಹೇಳಿದ್ದೇನು

ತಿರುವನಂತಪುರಂನಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲುವು

ಕಾಂಗ್ರೆಸ್ಸಿಗೆ ಯತೀಂದ್ರ ಹೈಕಮಾಂಡ್ ಆಗಿದ್ದಾರಾ: ವಿಜಯೇಂದ್ರ

ಡಿಕೆ ಶಿವಕುಮಾರ್ ಸಿಎಂ ಆಗುವ ದಿನಾಂಕ ಫಿಕ್ಸ್: ಸ್ಪೋಟಕ ಹೇಳಿಕೆ ನೀಡಿದ ಆಪ್ತ ಶಾಸಕ

ಮುಂದಿನ ಸುದ್ದಿ
Show comments