Webdunia - Bharat's app for daily news and videos

Install App

ಮಗನಿಗಾಗಿ ತಮ್ಮನನ್ನು ಬಲಿ ನೀಡಿದ ಮುಲಾಯಂ

Webdunia
ಶನಿವಾರ, 21 ಜನವರಿ 2017 (13:33 IST)
ಕೌಟುಂಬಿಕ ಕಲಹದಿಂದ ಜರ್ಜರಿತವಾಗಿರುವ ಯಾದವ್ ಪರಿವಾರದವರ ಮೇಲೆ ಗಾಯದ ಮೇಲೆ ಬರೆ ಎಳೆದಂತೆ ತೀವ್ರ ವಾಗ್ದಾಳಿ ನಡೆಸಿರುವ ಬಹುಜನ ಸಮಾಜವಾದಿ ಪಕ್ಷದ ನಾಯಕಿ ಮಾಯಾವತಿ, ಮಗನಿಗಾಗಿ ಮುಲಾಯಂ ತಮ್ಮನನ್ನು ಬಲಿ ನೀಡಿದ್ದಾರೆ ಎಂದು ಕಿಚಾಯಿಸಿದ್ದಾರೆ.

ಪತ್ರಿಕಾಗೋಷ್ಠಿ ನಡೆಸಿ ಮಾತನಾಡುತ್ತಿದ್ದ ಮಾಯಾವತಿ, ಯಾದವ್ ಕುಟುಂಬದ ಮೇಲೆ ಮನಬಂದಂತೆ ಹರಿಹಾಯ್ದರು. 
 
ಅಖಿಲೇಶ್ ಮತ್ತು ಮುಲಾಯಂ ಬಣದ ನಡುವೆ ನಡೆದ ಕದನ, ಸರ್ಕಾರದ ಆಡಳಿತ ವೈಫಲ್ಯದೆಡೆಗಿನ ಗಮನವನ್ನು ಬೇರೆಡೆ ಸೆಳೆಯಲು ಪಕ್ಷದ ಸ್ಥಾಪಕ  (ಮುಲಾಯಂ) ಅವರ ಸಾರಥ್ಯದಲ್ಲಿ ನಡೆದ ಪೂರ್ವಯೋಜಿತ ನಾಟಕ ಎಂದು ಅವರು ವ್ಯಾಖ್ಯಾನಿಸಿದರು. 
 
ತಮ್ಮ ಸಾರ್ವಜನಿಕ ಸಭೆ ಮತ್ತು ರ‍್ಯಾಲಿಗಳಲ್ಲಿ ಸಮಾಜವಾದಿ ಪಕ್ಷದ ವಿಭಜನೆಯನ್ನು ಹೈಲೈಟ್ ಮಾಡುತ್ತಿರುವ ಮಾಯಾವತಿ ಮತದಾರರು 2017ರ ವಿಧಾನಸಭಾ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ಆಡಳಿತಕ್ಕೆ ಸೋಲುಣಿಸುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. 
 
ಎಸ್‌ಪಿ ಜತೆ ಮೈತ್ರಿ ಮಾಡಿಕೊಳ್ಳುತ್ತಿರುವ ಕಾಂಗ್ರೆಸ್ ವಿರುದ್ಧವೂ ಗುಡುಗಿದ ಅವರು, ಕಾಂಗ್ರೆಸ್ ಬಹಳ ಹೀನಾಯ ಸ್ಥಿತಿಯಲ್ಲಿದ್ದು ತನ್ನದೇ ಆದ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸ್ಥಿತಿಯಲ್ಲಿ ಅದಿಲ್ಲ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಉಪರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಘೋಷಿಸಿದ ಬೆನ್ನಲ್ಲೇ ಪ್ರಧಾನಿ ಭೇಟಿಯಾದ ಸಿಪಿ ರಾಧಾಕೃಷ್ಣನ್

ಅತ್ಯಾಚಾರ ಆರೋಪ: ಶಿವಸೇನಾ ಮಾಜಿ ಶಾಸಕನ ವಿರುದ್ಧ ಬೆಂಗಳೂರಿನ ಮಹಿಳೆ ದೂರು

ಬೀದಿ ನಾಯಿ ಪರ ಹೋರಾಟ ಮಾಡುವವರ ಈ ಸುದ್ದಿ ಓದಲೇ ಬೇಕು, ಇದ್ದ ಮನೆ ಮಗಳನ್ನೇ ಕಳೆದುಕೊಂಡ ಕುಟುಂಬ

ಕಂಬಕ್ಕೆ ಕಟ್ಟಿ ಯೋಧನ ಮೇಲೆ ಏಕಾಏಕಿ ದಾಳಿ ನಡೆಸಿದ ಗುಂಪು, Viral Video

ಬಿಪಿಎಲ್ ಕಾರ್ಡ್ ಪರಿಷ್ಕರಣೆ ಬಗ್ಗೆ ಸಚಿವರಿಂದ ಬಿಗ್ ಅಪ್ ಡೇಟ್

ಮುಂದಿನ ಸುದ್ದಿ
Show comments